Wednesday 24th, April 2024
canara news

ಕೂಟ ಮಹಾಜಗತ್ತು ಸಾಲಿಗ್ರಾಮ ಮುಂಬಯಿ ಅಂಗಸಂಸ್ಥೆಯಿಂದ ಶ್ರದ್ಧಾಪೂರ್ವಕವಾಗಿ ಸಂಭ್ರಮಿಸಲ್ಪಟ್ಟ ಗುರುನರಸಿಂಹ ಜಯಂತಿ

Published On : 21 May 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.20: ಕೂಟ ಮಹಾಜಗತ್ತು ಸಾಲಿಗ್ರಾಮ (ರಿ.) ಮುಂಬಯಿ ಅಂಗ ಸಂಸ್ಥೆಯು ಇಂದಿಲ್ಲಿ ಶುಕ್ರವಾರ ಸಯಾನ್ ಪಶ್ಚಿಮದಲ್ಲಿನ ಬಿಎಸ್‍ಕೆಬಿ ಅಸೋಸಿಯೇಶನ್‍ನ ಗೋಕುಲ ಸಭಾಗೃಹದಲ್ಲಿ ಎಂಟನೇ ವಾರ್ಷಿಕ 2017ನೇ ಸಾಲಿನ ಗುರುನರಸಿಂಹ ಜಯಂತಿ ಅದ್ದೂರಿಯಾಗಿ ಸಂಭ್ರಮಿಸಿತು.

ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿ ಇಲ್ಲಿನ ಶ್ರೀ ಪೇಜಾವರ ಮಠದ ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ಪೂಜೆಯೊಂದಿಗೆ ಬೆಳಿಗ್ಗೆ ಜಯಂತ್ಯೋತ್ಸವÉ್ಕ ಪೂಜಾಧಿಗಳೊಂದಿಗೆ ಆದಿಗೊಳಿಸಲ್ಪಟ್ಟಿತು. ಬಳಿಕ ಮಠದ ಸಭಾಗೃಹದಲ್ಲಿ ರಚಿಸಲ್ಪಟ್ಟ ರಂಗುರಂಗಿನ ಅತ್ಯಾಕಷಕ ರಂಗೋಳಿಯನ್ನೊಳಗೊಂಡ ಮಂಡಲದಲ್ಲಿ ಸಂಪ್ರದಾಯಿಕ ಮತ್ತು ವೈಧಿಕವಾಗಿ ನರಸಿಂಹ ಹೋಮ ನೆರವೇರಿಸಲಾಯಿತು. ಪುರೋಹಿತ ವೇ| ಮೂ| ಪ್ರಸನ್ನ ಮಯ್ಯ ಕಲಶಪೂಜೆ ನಡೆಸಿ ಗಣಹೋಮ ಮತ್ತು ನರಸಿಂಹ ಹೋಮ ನಡೆಸಿದರು. ನರಸಿಂಹ ಮಯ್ಯ ಮತ್ತು ಜನಾರ್ದನ ಮಯ್ಯ ಇತರ ಪೂಜೆಗಳನ್ನು ಪೂರೈಸಿ ಪ್ರಸಾದವನ್ನಿತ್ತು ಅನುಗ್ರಹಿಸಿದರು. ನರಸಿಂಹ ಮಯ್ಯ ಮತ್ತು ಶ್ರೀಮತಿ ವಿಭಾ ಎನ್.ಮಯ್ಯ ಪೂಜೆಯ ಯಜಮಾನತ್ವ ವಹಿಸಿದ್ದರು. ನೆರೆದ ಸದ್ಭಕ್ತರು, ಕೂಟ ಬಂಧುಗಳು ಫಲಪುಷ್ಪ, ಸಂಕಲ್ಪಗಳಲ್ಲಿ ಭಾಗಿಯಾಗಿ ಗುರುನರಸಿಂಹ ಜಯಂತ್ಯೋತ್ಸವ ಆಚರಿಸಿದರು.

ಕ್ರಮದಲ್ಲಿ ಕೂಟದ ಅಧ್ಯಕ್ಷ ಯು.ಎನ್ ಐತಾಳ್, ಉಪಾಧ್ಯಕ್ಷ ಪಿ.ವಿ ಐತಾಳ, ಕಾರ್ಯದರ್ಶಿ ಹಾಗೂ ಕೂಟ ಬ್ರಾಹ್ಮಣರ ತ್ರೈಮಾಸಿಕದ ಮುಖವಾಣಿ ಗುರು ನರಸಿಂಹವಾಣಿ ಸಂಪಾದಕ ಪಿ.ಸಿ ಎನ್ ರಾವ್, ಕೋಶಾಧಿಕಾರಿ ದೀಪಕ್ ಕಾರಂತ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಹೆಚ್.ಕೆ ಕಾರಂತ್, ರಮೇಶ್ ಎಂ.ರಾವ್, ಎನ್.ನಾರಾಯಣ ರಾವ್ ಸೇರಿದಂತೆ ಹಲವು ಸದಸ್ಯರು ಪೂಜಾಧಿಗಳಲ್ಲಿ ಭಾಗಿಗಳಾಗಿದ್ದರು.

ನವಿಮುಂಬಯಿ ನೆರೂಲ್‍ನ ಹರಿಕೃಷ್ಣ ಭಜನಾ ಮಂಡಳಿಯ ಮಹಿಳೆಯರು ಭಜನೆಗೈದರು. ಅಧಿಕ ಸಂಖ್ಯೆಯಲ್ಲಿ ನೆರೆದಿದ್ದ ಸಂಸ್ಥೆಯ ಸದಸ್ಯರು, ಭಕ್ತರು `ಸ್ವಸ್ತಿ ಶ್ರದ್ಧಂ ಮೇದಂ ಯಶಂ ಪ್ರಜ್ಞಾಂ ದೆಹೀ ಮಿ' ಭಕ್ತಿಗೀತೆಗಳೊಂದಿಗೆ ಕೀರ್ತನೆÉ, ಭಕ್ತಿಗೀತೆಯೊಂದಿಗೆ ಜಯಂತ್ಯೋತ್ಸವಕ್ಕೆ ಕಳೆಯನ್ನಿತ್ತರು. ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆಯೊಂದಿಗೆ ಜಯಂತ್ಯೋತ್ಸವ ಸಮಾಪನ ಕಂಡಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here