Tuesday 16th, April 2024
canara news

ಕೂಲಿ ಕಾರ್ಮಿಕಳ ಮಗಳು ಪ್ರತಿಭಾನ್ವಿತೆ ಸೌಮ್ಯಾ ಎಸ್‍ಎಸ್‍ಎಲ್‍ಸಿಯಲ್ಲಿ 94.24% ಅಂಕ

Published On : 22 May 2017   |  Reported By : Rons Bantwal


ರಸ್ತೆ ಅಪಘಾತದಲ್ಲಿ ತಂದೆ ಕಳೆದುಕೊಂಡ ಅಪ್ರತಿಮರ ಶಿಕ್ಷಣಕ್ಕೆ ಪೆÇ್ರೀತ್ಸಹಿಸಿ

(ರೋನ್ಸ್ ಬಂಟ್ವಾಳ್)

ಮುಂಬಯಿ (ಶಿರ್ವಾ), ಮೇ.22:ತಾನು ಕಲಿತದ್ದು ಏಳನೇ ಕ್ಲಾಸು. ಆದರೆ ತನ್ನ ಮಕ್ಕಳು ಚೆನ್ನಾಗಿ ಕಲಿತು ಒಳ್ಳೆಯ ಉದ್ಯೋಗಸ್ಥರಾಗಬೇಕು, ಅವರು ತನ್ನಂತೆ ಕಷ್ಟ ಪಡಬಾರದು,ಅವರ ಜೀವನ ಒಳ್ಳೆಯದಾಗಬೇಕು ಎಂದು ಕನಸು ಕಾಣುವ ತಾಯಿ, ಮನೆಮನೆ ಅಲೆದು ಕೂಲಿ ಕೆಲಸ ಮಾಡಿ,ಮಕ್ಕಳನ್ನು ಸಾಕಿ, ಅವರಿಗೂ ಮನೆಕೆಲಸ ಕಲಿಸಿ ಜೀವನ ಶಿಕ್ಷಣದ ಜೊತೆಗೆ ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡುತ್ತಿರುವ ಕೂಲಿ ಕಾರ್ಮಿಕೆ ವಿಜಯಾಳ ಮಗಳು ಸೌಮ್ಯಾ 2017ರಲ್ಲಿ ಜರುಗಿದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 589 ಅಂಕಗಳನ್ನು ಗಳಿಸಿ (94.24 ಶೇಕಡ) ಪಡುಬೆಳ್ಳೆ ಶ್ರೀನಾರಾಯಣಗುರು ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಥಮ ಸ್ಥಾನದ ಗೌರವಕ್ಕೆ ಪಾತ್ರಳಾಗಿದ್ದಾಳೆ.

 

ತಾಯಿಯ ಕನಸನ್ನು ನನಸಾಗಿಸುವ ಛಲ ಹೊಂದಿರುವ ಸೌಮ್ಯಾ ಪಿಯುಸಿಯಲ್ಲಿ ಕಾಮರ್ಸ್ ವಿಭಾಗದಲ್ಲಿ ಕಲಿತು ಭವಿಷ್ಯದಲ್ಲಿ ಸಿಎ ಆಗುವ ಆಸೆ ಹೊಂದಿದ್ದಾಳೆ. ಆಥಿರ್üಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಹೃದಯಿಗಳ ಆಸರೆ ಬೇಕಾಗಿದೆ. ರಸ್ತೆ ಅಪಘಾತದಲ್ಲಿ ಪತಿ( ಕೃಷ್ಣ ಪೂಜಾರಿ)ಯನ್ನು ಕಳೆದುಕೊಂಡ ವಿಜಯಾ, ಆ ದು:ಖ ಸಹಿಸಿಕೊಂಡು ತನ್ನ ಪ್ರತಿಭಾವಂತ ನಾಲ್ಕು ಮಕ್ಕಳಿಗೂ ಒಳ್ಳೆಯ ಸಂಸ್ಕಾರ ನೀಡಿ,ಅವರ ಶಿಕ್ಷಣಕ್ಕೆ ಸಾಲಮೂಲ ಮಾಡಿಕೊಂಡು ಶಾಲಾ ಫೀಸು, ಹಾಸ್ಟೆಲ್‍ಬಿಲ್, ಪುಸ್ತಕ,ಸಮವಸ್ತ್ರ ಇತ್ಯಾದಿಗಳಿಗೆ ಹೊಂದಿಸಿ ಕೊಳ್ಳುತ್ತಿದ್ದಾರೆ.

ಇವರ ನಾಲ್ಕೂ ಮಕ್ಕಳೂ ಪ್ರತಿಭಾನ್ವಿತರಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಶಾಲೆಯಲ್ಲಿ ಹಾಗೂ ಫ್ರೌಢ ಶಿಕ್ಷಣವನ್ನು ಪಡುಬೆಳ್ಳೆ ಶ್ರೀನಾರಾಯಣಗುರು ಕನ್ನಡ ಮಾಧ್ಯಮ ಫ್ರೌಢ ಶಾಲೆಯಲ್ಲಿ ಕಲಿತು, ತರಗತಿಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಶಾಲಾಕೀರ್ತಿಯನ್ನು ಹೆಚ್ಚಿದ್ದಾರೆ, ಅಲ್ಲದೆ ತಾಯಿಗೂ ಸ್ಪೂರ್ತಿ ತುಂಬಿದ್ದಾರೆ. ಶಾಲಾ ಶಿಕ್ಷಕರು ತಮ್ಮ ಅಲ್ಪಸ್ವಲ್ಪ ಸಹಾಯ ನೀಡಿ ಪೆÇ್ರ್ರೀತ್ಸಾಹಿಸುತ್ತಿದ್ದಾರೆ.

ವಿಜಯಾಳ ಹಿರಿಯ ಮಗಳು ರಮ್ಯಾ (20.) ಎಸ್‍ಎಸ್‍ಎಲ್‍ಸಿಯಲ್ಲಿ 514 ಅಂಕಗಳಿಸಿ ಶಾಲೆಯಲ್ಲಿ ಪ್ರಥಮ ಸ್ಥಾನಿಯಾಗಿದ್ದಳು. ಇನ್ನಂಜೆ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿಯಲ್ಲಿ ಕಂಪ್ಯೂಟರ್ ಸಾಯನ್ಸ್‍ನಲ್ಲಿ 399 ಅಂಕಗಳೊಂದಿಗೆ 66.5% ಸಾಧನೆ ಮಾಡಿದ್ದಳು. ಕಿನ್ನಿಮುಲ್ಕಿ ದೇವರಾಜ ಅರಸ್ ಹಿಂದುಳಿದ ವರ್ಗಗಳ ಮಹಿಳಾ ಹಾಸ್ಟೆಲ್‍ನಲ್ಲಿ ಉಳಿದು, ವ್ಯಾಸಾಂಗ ಮಾಡುತ್ತಿದ್ದು, ಪ್ರಸ್ತುತ ತೆಂಕನಿಡಿಯೂರು ಪ್ರಥಮದರ್ಜೆ ಕಾಲೇಜಿನಲ್ಲಿ ಬಿಸಿಎ ವಿಭಾಗದಲ್ಲಿ ಅಂತಿಮವರ್ಷದ ವಿದ್ಯಾಥಿರ್üನಿ.

17ರ ವಯಸ್ಸಿನ ಮಗ ರಮಾನಂದ ಪೆÇಲಿಪು ಹಿಂದುಳಿದ ವರ್ಗಗಳ ಹಾಸ್ಟೆಲ್‍ನಲ್ಲಿ ಉಳಿದು, ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿ, ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ 65ಶೇಕಡ ಅಂಕಗಳಿಸಿ ಉತ್ತೀರ್ಣನಾಗಿದ್ದು, ಡಿಪ್ಲೋಮಾ ಮಾಡುವ ಆಸೆ ಹೊಂದಿದ್ದಾನೆ. ಸುಮಾ (13ವ) ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಶಾಲೆಯಲ್ಲಿ 7ನೇ ತರಗತಿಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ಶಾಲೆಯಲ್ಲಿಯೇ ಪ್ರಥಮ ಸ್ಥಾನಿಯಾಗಿ ಉತ್ತೀರ್ಣಳಾಗಿದ್ದು, 8ನೇ ತರಗತಿಗೆ ಪಡುಬೆಳ್ಳೆ ಶ್ರೀನಾರಾಯಣಗುರು ಫ್ರೌಢ ಶಾಲೆಗೆ ಸೇರ್ಪಡೆ ಗೊಂಡಿದ್ದಾಳೆ.

ತಾಯಿ ವಿಜಯಾಳಿಗೆ ಪಡುಬೆಳ್ಳೆ ಐದು ಸೆಂಟ್ಸ್ ಕಾಲೋನಿಯಲ್ಲಿ ನಿವೇಶನ ಮಂಜೂರಾಗಿದ್ದು, ಹಳೆ ಪಕ್ಕಾಸು, ಹಂಚು, ಜೋಡಿಸಿ ಗುಡಿಸಲು ಕಟ್ಟಿಕೊಂಡಿದ್ದಾರೆ.ಮಳೆಗಾಳಿಗೆ ಯಾವುದೇ ಭದ್ರತೆ ಇಲ್ಲದೆ ಇರುವುದರಿಂದ ಕೂಲಿಕಾಲಿಗೆ ಅನುಕೂಲವಿರುವಲ್ಲಿ ಬಾಡಿಗೆ ಮನೆಗಳಲ್ಲಿ ಉಳಿದು ಮಕ್ಕಳನ್ನು ಸಾಕಿ ಬೆಳೆಸಿದ್ದಾರೆ. ಮಕ್ಕಳು ಕೂಡ ತಾಯಿಯೊಂದಿಗೆ ಕೈಜೋಡಿಸಿ ಶಾಲೆಗೆ ಹೋಗುವ ಮೊದಲು ಬೇರೆಯವರ ಮಲ್ಲಿಗೆ ಹೂ ಕಟ್ಟಿ ಕೊಡುತ್ತಾರೆ.ತಾಯಿಯ ಕೆಲಸದಲ್ಲಿ ನೆರವಾಗುತ್ತಾರೆ. ಇವರ ಬಡತನ, ಶ್ರಮದ ಜೀವನ ಹಾಗೂ ಕೂಲಿಕೆಲಸದಲ್ಲಿ ಪ್ರಾಮಾಣಿಕತೆಯನ್ನು ಗಮನಿಸಿದ ಬಂಟಕಲ್ಲು ಬಿ.ಸಿ ರೋಡು ಸಮೀಪದ ಲಿಲ್ಲಿ ಕ್ವಾಡ್ರಸ್ ಅವರು ತಮ್ಮ ಪಂಪ್‍ಸೆಡ್ ಸಮೀಪ ಇರುವ ಸಣ್ಣ ಮನೆಯನ್ನು ತಾತ್ಕಾಲಿಕವಾಗಿ ಉಚಿತವಾಗಿ ನೀಡಿದ್ದು, ಕಳೆದ 5ವರ್ಷಗಳಿಂದ ಇಲ್ಲಿಯೇ ಮಕ್ಕಳೊಂದಿಗೆ ವಾಸವಾಗಿ ಅವರ ಶಿಕ್ಷಣಕ್ಕಾಗಿ ಶ್ರಮಿಸುತ್ತಿದ್ದಾರೆ. ಮಕ್ಕಳು ಚೆನ್ನಾಗಿ ಕಲಿತು ಉದ್ಯೋಗ ಪಡೆದ ನಂತರ ಒಳ್ಳೆಯ ಮನೆಕಟ್ಟಿ ಮಕ್ಕಳೊಂದಿಗೆ ಸುಖಜೀವನ ನಡೆಸಬೇಕು ಎಂಬ ವಿಜಯಾಳ ದೂರಗಾಮಿ ಕನಸು ನನಸಾಗುವಲ್ಲಿ ಸಹೃದಯಿ ಶಿಕ್ಷಣಾಭಿಮಾನಿ ದಾನಿಗಳ ನೆರವು ಅಗತ್ಯವಿದೆ.

ಪ್ರತಿಭಾನ್ವಿತೆ ಸೌಮ್ಯಾ ಪೂಜಾರಿ ಶಿಕ್ಷಣಕ್ಕೆ ಆಥಿರ್üಕ ಸಹಾಯ ನೀಡಬಯಸುವ ದಾನಿಗಳು ಕರ್ನಾಟಕ ಬ್ಯಾಂಕ್ ಬಂಟಕಲ್ಲು ಶಾಖೆಯಲ್ಲಿರುವ (ಸೌಮ್ಯಾ ಖಾತೆ 0822500100527001 ಸಂಖ್ಯೆಗೆ ಹಣ ಕಳುಹಿಸಬಹುದು. (ಸಂಪರ್ಕ ಮೊಬೈಲ್:-9008355979).




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here