Wednesday 24th, April 2024
canara news

ಮೌರಿಸ್ ಪಿಂಟೋ ಕನಪಾಡಿ ಪತ್ರಕ್ಕೆ ಉತ್ತರಿಸಿದ ಪ್ರಧಾನ ಮಂತ್ರಿ ಕಾರ್ಯಾಲಯ

Published On : 23 May 2017   |  Reported By : Rons Bantwal


ಬಂಟ್ವಾಳ, ಮೇ.23: ಬಂಟ್ವಾಳ ತಾಲೂಕು ಕಳ್ಳಿಗೆ ಬ್ರಹ್ಮರಕೊಟ್ಲು ಅಲ್ಲಿನ ಕನಪಾಡಿ ನಿವಾಸಿ ಮೌರಿಸ್ ಪಿಂಟೋ ಅವರು ತುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನಪಾಡಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಭಾರತ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದು ಅದಕ್ಕೆ ಉತ್ತರವಾಗಿ ಪ್ರಧಾನ ಮಂತ್ರಿ ಸಚಿವಾಲಯದ ಕಾರ್ಯಾಲಯವು ಮಂಗಳೂರು ಅಲ್ಲಿನ ದ.ಕ ಜಿಲ್ಲಾ ಪಂಚಾಯತ್‍ನ ಪಂಚಾಯತ್ ರಾಜ್ ಅಭಿಯಂತರ ವಿಭಾಗದ ಕಾರ್ಯನಿರ್ವಹಕ ಅವರಿಗೆ ಮಾಹಿತಿ ಕೋರಿ ಪತ್ರಕ್ಕೆ ಉತ್ತರಿಸಿದೆ.

ಮೌರಿಸ್ ಪಿಂಟೋ ಅವರು ಕನಪಾಡಿ ಸಂಪರ್ಕ ರಸ್ತೆ ನಿರ್ಮಾಣ ಹಾಗೂ ಡಾಮರೀಕರಣದ ಬಗ್ಗೆ ಸಿಪಿಗ್ರಾಮ್ ಮೂಲಕ ಮನವಿಗೈದು ಸೂಕ್ತ ಕಾರ್ಯಕ್ಕೆ ಮುಂದಾಗಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಲ್ಲಿ ವಿನಂತಿಸಿ ಲಿಖಿತವಾಗಿ ದೂರು ಸಲ್ಲಿಸಿದ್ದರು. ಸದ್ರಿ ಮನವಿಯಲ್ಲಿನ ವಿಚಾರಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ ನಿಯಮಾನುಸಾರ ಸೂಕ್ತ ಕ್ರಮಕೈಗೊಂಡು ಮನವಿದಾರ ಪಿಂಟೋ ಅವರಿಗೆ ಸಮಂಜಸ ಹಿಂಬರಹ ನೀಡಿ ಪ್ರಧಾನ ಮಂತ್ರಿ ಕಛೇರಿಗೆ ವಾರದೊಳಗೆ ವರದಿ ಸಲ್ಲಿಸುವಂತೆ ದ.ಕ ಜಿಲ್ಲಾ ಪಂಚಾಯತ್‍ನ ಅಭಿಯಂತರಿಗೆ ತಿಳಿಸಿತ್ತು. ಅಲ್ಲದೆ ಪಿಜಿಪೆÇರ್ಟಲ್ ತಂತ್ರಾಂಶದಲ್ಲಿ ಇಂದೀಕರಿಸ ಬೇಕಾಗಿರುವುದರಿಂದ ಮಾಹಿತಿಯನ್ನು ಅತೀ ಜರೂರಾಗಿ ನೀಡಲು ಸೂಚಿಸಿತ್ತು ಎಂದು ಮೌರಿಸ್ ಪಿಂಟೋ ತಿಳಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here