ಮಂಗಳೂರು:ಮಂಗಳೂರು ಹೊರವಲಯದ ಎಡಪದವಿನಲ್ಲಿ ಶುಕ್ರವಾರ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿ, ಕಿನ್ನಿಗೋಳಿ ಕಿಲೆಂಜಾರ್ನ ಪ್ರಭಾಕರ ಶೆಟ್ಟಿ ಅವರ ಪುತ್ರಿ ನವ್ಯಾ ಶೆಟ್ಟಿ (21) ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟರು.
ವಾಮಂಜೂರಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಕಂಪೆನಿಯೊಂದರ ಕ್ಯಾಂಪಸ್ ಇಂಟರ್ವ್ಯೂವ್ಗೆ ತನ್ನ ಸಹಪಾಠಿ ದೇವಿಪ್ರಸಾದ್ ಶೆಟ್ಟಿ ಜತೆ ಸಹಸವಾರಳಾಗಿ ಬೈಕ್ನಲ್ಲಿ ತೆರಳುತ್ತಿದ್ದಾಗ, ಎಡಪದವು ಬಳಿ ಎದುರಿನಿಂದ ಬರುತ್ತಿದ್ದ ಕಾರನ್ನು ಗಮನಿಸಿ ಬ್ರೇಕ್ ಹಾಕಿದಾಗ ಬೈಕ್ ಸ್ಕಿಡ್ ಆಗಿ ಬಿದ್ದು ಈ ಅಪಘಾತ ಸಂಭವಿಸಿತ್ತು.