Monday 29th, April 2024
canara news

ಮತ್ಸಾ ್ಯಗಂಧಾ ಎಕ್ಸ್‍ಪ್ರೆಸ್ ರೈಲಿನಲ್ಲಿ ಮತ್ತೆ ಕಳವಾದ ಚಿನ್ನಾಭರಣ

Published On : 26 May 2017   |  Reported By : Rons Bantwal


ಹಗಲು ಲೂಟಿಗಾರನಿಂದ ಪ್ರತಿಮಾ ಕರ್ಕೇರಾ ಪರ್ಸ್ ಲೂಟಿ

(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.25: ಕಳೆದ ಸೋಮವಾರ ಮುಂಬಯಿ ಇಲ್ಲಿನ ಕುರ್ಲಾ ಟರ್ಮಿನಲ್ಸ್‍ನಿಂದ ಅಪರಾಹ್ನ ಕೊಂಕಣ ರೈಲ್ವೇ ಮೂಲಕ ಮಂಗಳೂರಿಗೆ ಹೊರಟ ಮತ್ಸ್ಯಾಗಂಧಾ ಎಕ್ಸ್‍ಪ್ರೆಸ್ ರೈಲಿನಲ್ಲಿ ಮತ್ತೆ ಕಳವು ಪ್ರಕರಣ ನಡೆದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.



ಭಾಂಡೂಪ್ ಪಶ್ಚಿಮ ನಿವಾಸಿ ಪ್ರತಿಮಾ ಸತೀಶ್ ಕರ್ಕೇರ ತವರೂರ ಸುರತ್ಕಲ್‍ಗೆ ತೆರಳಲು ಕುರ್ಲಾ ಟರ್ಮಿನನ್ಸ್‍ಗೆ ಆಗಮಿಸಿದ್ದರು. ತನ್ನ ಅತ್ತಿಗೆಯನ್ನು ಬಿಡಲು ಬಂದ ಹರೀಶ್ ಪೂಜಾರಿ ಕಾಯ್ದಿರಿಸಿದ (ಎಸ್10 ಸೀಟು ಸಂಖ್ಯೆ-7) ಆಸನದಲ್ಲೇ ಪ್ರತಿಮಾರನ್ನು ಕುಳ್ಳಿರಿಸಿ ಶುಭಪ್ರಯಾಣ ಕೋರಿ ಮರಳಿದ್ದರು. ಅಂತೆಯೇ ನಿಗದಿತ ಸಮಯಕ್ಕೆನೇ ಕುರ್ಲಾ ಟರ್ಮಿನಲ್ಸ್‍ನಿಂದ ಮತ್ಸ್ಯಾಗಂಧಾ ಎಕ್ಸ್‍ಪ್ರೆಸ್ ರೈಲೂ ಹೊರಟಿದ್ದು ಪ್ರತಿಮಾ ಏಕಾಂಗಿಯಾಗಿ ಮಂಗಳೂರು ಕಡೆ ಪ್ರಯಾಣ ಆರಂಭಿಸಿದ್ದರು. ಕೆಲವೇ ನಿಮಿಷಗಳಲ್ಲಿ ರೈಲು ವಿದ್ಯಾವಿಹಾರ್ ಕೂಡುರೈಲ್ವೇ (ಜಂಕ್ಷನ್)ಗೆ ಮುನ್ನುಗ್ಗುತ್ತಿರುವಂತೆಯೇ ಏಕಾಏಕಿ ನುಗ್ಗಿದ ಯುವಕನೊಬ್ಬ ಪ್ರತಿಮಾ ತನ್ನ ಕೈಯಲ್ಲಿ ಜೋಪಾನವಾಗಿಸಿದ್ದ ಹ್ಯಾಂಡ್‍ಬ್ಯಾಗ್‍ನ್ನೇ ಕಿತ್ತೊಯ್ದು ಸಾಗುವ ರೈಲಿನಿಂದ ಜಿಗಿದು ಪರಾರಿಯಾಗಿದ್ದಾನೆ.

ಪ್ರತಿಮಾ ಕರ್ಕೇರ ಇತ್ತೀಚೆಗಷ್ಟೇ ಖರೀದಿಸಿದ್ದ 70 ಗ್ರಾಂ ತೂಕದ ಕರಿಯಮಣಿ, 10ಗ್ರಾಂ ಬೆಂಡೋಳೆ ಮತ್ತು ತನ್ನ ಸ್ವಂತದ ರೂಪಾಯಿ 7,000 ನಗದು ಹಾಗೂ ತನ್ನ ಸ್ನೇಹಿತೆಯೋರ್ವರು ಮನೆಮಂದಿಗೆ ಹಸ್ತಾಂತರಿಸ ಲು ಕೊಟ್ಟ ರೂಪಾಯಿ 5,000, ಮೊಬಾಯ್ಲ್ ಸಹಿತ ಕಳ್ಳ ಪರಾರಿಯಾಗಿದ್ದಾನೆ.

ಮೊಬಾಯ್ಲ್ ಕಳಕೊಂಡ ಪ್ರತಿಮಾ ತಕ್ಷಣ ಸಹಪ್ರಯಾಣಿಕರಾದ ರಾವ್ ಪರಿವಾರದವರ ಸಹಾಯದಿಂದ ತಕ್ಷಣವೇ ತನ್ನ ಪತಿ ಸತೀಶ್ ಕರ್ಕೇರ ಮತ್ತು ಹರೀಶ್ ಪೂಜಾರಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲೇ ರೈಲು ಘಾಟ್ಕೋಪರ್ ನಿಲ್ದಾಣಕ್ಕೆ ಸಮೀಪಿಸುತ್ತಿದ್ದಂತೆಯೇ ಟ್ರೈನ್‍ಚೈನ್ ಎಳೆದು ರೈಲು ನಿಲ್ಲಿಸಿದರೂ ಪ್ರಯೋಜನ ಆಗಿಲ್ಲ. ಬಳಿಕ ಪ್ರತಿಮಾ ಥಾಣೆ ರೈಲ್ವೇ ಠಾಣೆಗೆ ರೈಲು ಆಗಮಿಸುವಂತೆಯೇ ಇಳಿದು ಜಿಆರ್‍ಪಿ ರೈಲ್ವೇ ಪೆÇೀಲಿಸರಿಗೆ ಮಾತಿಸಿ ನೀಡಿದ್ದಾರೆ. ಸದ್ಯ ಕುರ್ಲಾ ಟರ್ಮಿನಲ್‍ನ ಜಿಆರ್‍ಪಿ ರೈಲ್ವೇ ಇನ್ಸ್‍ಪೆಕ್ಟರ್ ಅಶೋಕ್ ಬೊರಾಡೆ ದೂರು ಸ್ವೀಕರಿಸಿ ಪ್ರಕರಣದ ಕೇಸು ದಾಖಲಾಯಿಸಿ ತನಿಖೆ ನಡೆಸುತ್ತಿದ್ದಾರೆ.

ಹೊಸದಾಗಿ ಖರೀದಿಸಿದ್ದ ಚಿನ್ನಾಭರಣವನ್ನು ತವರೂರ ಮೂಲ ದೈವದೇವರುಗಳಿಗೆ ಹೊದಿಸಿದ ಬಳಿಕವಷ್ಟೇ ಆಭರಣಗಳನ್ನು ಧರಿಸುವ ಕನಸು ಕಂಡಿದ್ದ ಪ್ರತಿಮಾ ಒಮ್ಮೆ ಕಳಕೊಂಡ ಚಿನ್ನಾಭರಣಗಳು ಸಿಗಲೆಂದು ಅತ್ತ ದೈವದೇವರಿಗೆ ಮೊರೆ ಹೋಗಿದ್ದರೆ ಇತ್ತ ಕಳ್ಳನ ಪತ್ತೆಗಾಗಿ ಮನೆಮಂದಿ ಸುತ್ತಾಡುತ್ತಿದ್ದಾರೆ.

ಸಹಾಯಕ್ಕೆ ಬಂದ ಯೆಯ್ಯಾಡಿ:
ಕನ್ನಡ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ಹಾಗೂ ಮುಲುಂಡ್ ಫ್ರೆಂಡ್ಸ್ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿ ಅವರು ಇದೀಗಲೇ ಸತೀಶ್ ಮತ್ತು ಹರೀಶ್ ಪೂಜಾರಿ ಅವರೊಂದಿಗೆ ಸಹಕರಿಸಿ ಕುರ್ಲಾ ಟರ್ಮಿನಲ್‍ನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಿಸಿ ಕ್ಯಾಮರಾ ಪುಟ್ಟೇಜ್ ಪಡೆದು ಲೂಟಿಕೋರನ ಸುಳಿವಿಗಾಗಿ ಹರಸಾಹಸ ನಡೆಸುತ್ತಿದ್ದಾರೆ. ಇಂದಿಲ್ಲಿ ಸಂಜೆ ರೈಲ್ವೇ ವರಿಷ್ಠಾಧಿಕಾರಿಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿ ನೀಡಲಾಗಿದೆ ಎಂದು ಹರೀಶ್ ಪೂಜಾರಿ ತಿಳಿಸಿದ್ದಾರೆ.

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here