Thursday 25th, April 2024
canara news

ಮಂಗಳೂರು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಗೆ ವರ್ಗಾವಣೆ

Published On : 27 May 2017   |  Reported By : Canaranews Network


ಮಂಗಳೂರು: ದ.ಕ.ಜಿಲ್ಲೆ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರನ್ನು ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ. ಬೆಂಗಳೂರು ಅಪರಾಧ, ತನಿಖಾ ಮತ್ತು ಆರ್ಥಿಕ ವಿಭಾಗಗಳ ಐಜಿಪಿಯಾಗಿ ಚಂದ್ರಶೇಖರ್ ಅವರನ್ನು ವರ್ಗಾಯಿಸಲಾಗಿದೆ.ಎನ್ ಸತೀಶ್ ಕುಮಾರ್ ರನ್ನು ಮಂಗಳೂರಿಗೆ ನೂತನ ನಗರ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಲಾಗಿದೆ.ಸತೀಶ್ ಕುಮಾರ್ ಮೂಲತಃ ತಮಿಳುನಾಡಿನವರು.

ಅವರು ಈ ಹಿಂದೆ ಬೀದರ್ ಜಿಲ್ಲೆಯ ಎಸ್ಪಿ ಹಾಗೂ ಡಿಸಿಪಿ (ಆಡಳಿತ)ಯಾಗಿ ಸೇವೆ ಸಲ್ಲಿಸಿದ್ದಾರೆ.ಚಂದ್ರಶೇಖರ್ ರವರು ಪೋಲಿಸ್ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತರುವ ಮೂಲಕ ಹೆಸರುವಾಸಿಯಾಗಿದ್ದರು. ಮಂಗಳೂರಿನಲ್ಲಿ ಮೊಟ್ಟಮೊದಲೆನೆದಾಗಿ ಜನರ ಕುಂದುಕೊರತೆಗಳನ್ನು ಕೇಳಲು ಅವರು ಫೋನ್-ಇನ್ ಕಾರ್ಯಕ್ರಮವನ್ನು ಪ್ರಾರಂಭಿಸಿದರು ಮತ್ತು ಅನೇಕ ಸಮಸ್ಯೆಗಳನ್ನು ಕೂಡಾ ಆ ಮೂಲಕ ಪರಿಹರಿಸಿದರು. ಆದರೆ ಪಿಎಫ್ಐ ಕಾರ್ಯಕರ್ತರ ಮೇಲಿನ ಹಲ್ಲೆಯ ಸಂದರ್ಭದಲ್ಲಿ ಅವರ ವರ್ಗಾವಣೆಗೆ ಒತ್ತಾಯ ಕೇಳಿ ಬಂದಿತ್ತು. ಇದೀಗ ಚಂದ್ರಶೇಖರ್ ರನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಇದಕ್ಕೆ ಕಾರಣ ಏನು ಎಂದು ಮಾತ್ರ ತಿಳಿದು ಬಂದಿಲ್ಲ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here