Thursday 25th, April 2024
canara news

ಕಾಂಗ್ರೆಸ್‍ಗೆ ಐತಿಹಾಸಿಕ ಜಯ ಸಂತೋಷ್ ಡಿ.ಶೆಟ್ಟಿ

Published On : 29 May 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.29: ಉಪನಗರ ಭಿವಂಡಿ-ನಿಜಾಮಪುರ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಭಿವಂಡಿಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸಿದೆ. ಭಿವಂಡಿ ಪಾಲಿಕೆಯಲ್ಲಿ ಸರಕಾರ ಸ್ಥಾಪನೆಗೆ 46 ಸ್ಥಾನಗಳ ಸ್ಪಷ್ಟ ಬಹುಮತದ ಅವಶ್ಯಕತೆಯಿದ್ದು 90 ಸ್ಥಾನಗಳ ಪೈಕಿ ಕಾಂಗ್ರೆಸ್ 47 ಸ್ಥಾನಗಳಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದು ಪಾಲಿಕೆಯ ಗದ್ದುಗೆಯನ್ನೇರಲು ಮುಂದಾಗಿದೆ.

ಕಾಂಗ್ರೆಸ್ ಪಕ್ಷವು ಬಹುಮತದಿಂದ ವಿಜಯ ಸಾ?ಸುತ್ತಿದ್ದಂತೆ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ, ಭಿವಂಡಿಯ ಪ್ರಭಾರಿ ನಾಯಕ, ಮಂಗಳೂರು ಬಜ್ಪೆ ಅದ್ಯಪಾಡಿ ನಿವಾಸಿ, ನವಿಮುಂಬಯಿ ಮಹಾನಗರ ಪಾಲಿಕೆಯ ಮಾಜಿ ನಗರಸೇವಕ, ಸ್ಥಾಯೀ ಸ್ಥಮಿತಿ ಕಾರ್ಯಾಧ್ಯಕ್ಷ, ತುಳು-ಕನ್ನಡಿಗ ಸಂತೋಷ್ ಡಿ.ಶೆಟ್ಟಿ ಅವರು ಜಿಲ್ಲಾ ಪದಾü?ಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ವಿಜಯೋತ್ಸವವನ್ನು ಆಚರಿಸಿಕೊಂಡರು.

ಇದೇ ಸಂದರ್ಭದಲ್ಲಿ ಪತ್ರಕರ್ತರನ್ನು ಹಾಗೂ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದ ಸಂತೋಷ್ ಶೆಟ್ಟಿ ಅವರು, ಇದೊಂದು ಐತಿಹಾಸಿಕ ಜಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರವು ಜನತೆಗೆ ಪೆÇಳ್ಳು ಭÀರವಸೆಗಳನ್ನು ನೀಡಿ ಅಧಿಕಾರಕ್ಕೆ ಏರಿರುವುದು ಇಂದಿನ ಫಲಿತಾಂಶದಿಂದ ಸ್ಪಷ್ಟವಾಗಿದೆ. ಭಿವಂಡಿ ಮಹಾನಗರ ಪಾಲಿಕೆಯ ಚುನಾವಣೆಯ ಸಂದ`ರ್Àದಲ್ಲಿ ಬಿಜೆಪಿಯು ಕೋಟಿಗಟ್ಟಲೆ ಹಣವನ್ನು ವ್ಯಯಿಸಿದೆ. ಆದರೂ ಜನತೆ ಮಾತ್ರ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್‍ಗೆ ಮಣೆಹಾಕಿದ್ದಾರೆ. 2019ರಲ್ಲಿ ಮತ್ತೆ ಕಾಂಗ್ರೆಸ್ ದೇಶದ ಗದ್ದುಗೆಯನ್ನು ಏರಲಿದೆ. ಜನರಿಗೆ ಸುಳ್ಳು `Àರವಸೆ ನೀಡಿ ಕೇಂದ್ರ ಸರಕಾರವು ವಂಚಿಸುತ್ತಿದೆ. ದಿನೋಪಯೋಗಿ ವಸ್ತುಗಳ ಬೆಲೆಯು ಗಗನಕ್ಕೇರುತ್ತಿದ್ದು, ಸಾಮಾನ್ಯ ಜನತೆ ಬದುಕು ಸಾಗಿಸುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಜನತೆ ಕಾಂಗ್ರೆಸ್‍ನತ್ತ ಒಲವು ತೋರಿಸುತ್ತಿರುವುದು ಆಶಾದಾಯಕ ಸಂಗತಿಯಾಗಿದೆ. ಭಿವಂಡಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತದೊಂದಿಗೆ ಜಯಗಳಿಸಲು ಸಹಕರಿಸಿದ ಎಲ್ಲಾ ಪದಾಧಾಕಾ ರಿಗಳಿಗೂ, ಕಾರ್ಯಕರ್ತರಿಗೂ, ಮತದಾರರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ನುಡಿದರು.

ವಿಜಯೋತ್ಸವದಲ್ಲಿ ಭಿವಂಡಿಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶೊಯೆಬ್ ಬುಡ್ಡು, ಇತರ ಪದಾಧಿಕಾರಿಗಳು, ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here