Thursday 25th, April 2024
canara news

ವಿಶ್ವವಿದ್ಯಾನಿಲಯ ಕಾಲೇಜು ಆವರಣದಲ್ಲಿ `ಓಪನ್ ಹೌಸ್' ಕಾರ್ಯಕ್ರಮ-ವಿಸ್ತರಿತ ಹಂತ

Published On : 17 Jun 2017   |  Reported By : Rons Bantwal


ಮುಂಬಯಿ, ಜೂ.17: ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಕೊಡಗು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿರುವ ಸಂಯೋಜಿತ, ಘಟಕ ಹಾಗೂ ಸರಕಾರಿ ಕಾಲೇಜುಗಳಲ್ಲಿ ಪದವಿ ಮುಗಿಸಿರುವ ವಿದ್ಯಾಥಿರ್üಗಳ ಮುಂದಿನ ಉನ್ನತ ಶಿಕ್ಷಣ ಅವಕಾಶಗಳ ಬಗ್ಗೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡುವ ಸಲುವಾಗಿ ಕಳೆದ ಎರಡು ವರ್ಷಗಳಿಂದ ಮಂಗಳೂರು ವಿಶ್ವವಿದ್ಯಾನಿಲಯವು `ಓಪನ್ ಹೌಸ್' (ತೆರೆದ ಮನೆ) ಎಂಬ ಹೆಸರಿನಲ್ಲಿ ವಿಶ್ವವಿದ್ಯಾನಿಲಯ ಆವರಣದಲ್ಲಿ ಮತ್ತು ತನ್ನ ಘಟಕ ಕಾಲೇಜುಗಳು ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿ ಎರಡು ದಿನಗಳ ನಿರಂತರ ಮಾಹಿತಿ-ಮಾರ್ಗದರ್ಶನ ಕಾರ್ಯಕ್ರಮ ನಡೆಸಿ ಕೊಂಡು ಬರುತ್ತಿದೆ. ವಿಶ್ವವಿದ್ಯಾನಿಲಯದ ಆವರಣದಲ್ಲಿ ಮೊದಲ ಹಂತದ `ಓಪನ್ ಹೌಸ್' ಕಾರ್ಯಕ್ರಮ ಈಗಾಗಲೇ ನಡೆಸಲಾಗಿದ್ದು, ಪ್ರಸ್ತುತ ಮಂಗಳೂರು ಹಾಗೂ ಕೊಡಗು ಜಿಲ್ಲೆಯ ಘಟಕಗಳಾದ ವಿಶ್ವವಿದ್ಯಾನಿಲಯ ಕಾಲೇಜು, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಫಿ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು ಹಾಗೂ ಚಿಕ್ಕ ಅಳುವಾರ್ ಸ್ನಾತಕೋತ್ತರ ಕೇಂದ್ರಗಳಲ್ಲಿ ಇದೇ ಬರುವ ದಿನಾಂಕ: 20.06.2017 ಹಾಗೂ 21.06.2017ರ ಮಂಗಳವಾರ ಹಾಗೂ ಬುಧವಾರ `ಓಪನ್ ಹೌಸ್' ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.


ಮಂಗಳೂರು ನಗರದ ವಿಶ್ವವಿದ್ಯಾನಿಲಯ ಕಾಲೇಜು ಆವರಣದಲ್ಲಿರುವ ಶಿವರಾಮಕಾರಂತ ಭವನದಲ್ಲಿ ನಡೆಯಲಿರುವ `ಓಪನ್ ಹೌಸ್-2017' ಮಾಹಿತಿ ಮೇಳದ ಉದ್ಘಾಟನೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಉದ್ಘಾಟಿಸಲಿರುವರು ಹಾಗೂ ನಗರದ ಕಾಪೆರ್Çೀರೇಟರ್ ವಿನಯರಾಜ್ ಎ.ಸಿ ಇವರು ಅತಿಥಿü ಭಾಷಣವನ್ನು ನೀಡಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪೆÇ್ರ| ಕೆ.ಎಂ ಲೋಕೇಶ್ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು.

ಜೊತೆಗೆ ಓಪನ್ ಹೌಸ್ ಕಾರ್ಯಕ್ರಮದ ಸಂಯೋಜಕರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ವ್ಯವಹಾರ ಆಡಳಿತ ವಿಭಾಗದ ಪ್ರೊ.ಟಿ.ಎನ್. ಶ್ರೀಧರ, ಮಂಗಳೂರು ವಿಶ್ವವಿದ್ಯಾನಿಲಯ ಕೇಂದ್ರೀಯ ಪ್ರವೇಶಾತಿ ಸಮಿತಿಯ ನಿರ್ದೇಶಕ ಪೆÇ್ರ| ಚಂದ್ರಶೇಖರ್, ಶಾಸನ ಬದ್ಧ ಅಧಿಕಾರಿಗಳು ಮತ್ತು ಸಿಂಡಿಕೇಟ್ ಸದಸ್ಯರು ಉಪಸ್ಥಿತರಿರುವರು.

ಎರಡು ದಿನಗಳವರೆಗೆ ನೀಡಲಾಗುವ ಈ ನಿರಂತರ ಮಾಹಿತಿ ಮೇಳದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ಹಾಗೂ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ನಾತಕೋತ್ತರ ವಿಭಾಗಗಳಾದ ಎಂ.ಕಾಂ., ಎಂ.ಬಿ.ಎ. (ಐಬಿ), ಎಂ.ಎಸ್ಸಿ ಕೆಮಿಸ್ಟ್ರಿ, ಹಿಂದಿ ಎಂ.ಎ., ಅರ್ಥಶಾಸ್ತ್ರ ಎಂ.ಎ., ಸಂಸ್ಕøತ ಎಂ.ಎ., ಕೊಂಕಣಿ ಎಂ.ಎ., ಸರ್ಟಿಫಿಕೇಟ್ ಮತ್ತು ಡಿಪೆÇ್ಲೀಮಾ ಕೋರ್ಸ್ ಇನ್ ಫ್ರೆಂಚ್ ಮತ್ತು ಜರ್ಮನ್ ಮತ್ತು ಯೋಗಿಕ್ ಸಯನ್ಸ್-ಪಿ.ಜಿ.ಡಿಪೆÇ್ಲೀಮಾ ಹಾಗೂ ಇದರ ಜೊತೆಗೆ ವಿಶ್ವವಿದ್ಯಾನಿಲಯ ಕಾಲೇಜು ಹಾಗೂ ಸಂಧ್ಯಾಕಾಲೇಜಿನಲ್ಲಿ ಲಭ್ಯವಿರುವ ವಿವಿಧ ವಿಷಯಗಳ ಪದವಿ ಕೋರ್ಸುಗಳ ವೃತ್ತಿ ಮಾರ್ಗದರ್ಶನ, ಕೋರ್ಸುವಾರು ವಿಷಯಗಳ ಅವಧಿ, ಶುಲ್ಕ, ಸ್ಕಾಲರ್ ಶಿಪ್ ಇತ್ಯಾದಿ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು. ವಿವಿಧ ಕೋರ್ಸುಗಳ ಪ್ರವೇಶಾತಿ ಅರ್ಹತೆ, ಮೆರಿಟ್ ಸೀಟುಗಳ ಅಂಕಿ ಅಂಶಗಳ ಮಾಹಿತಿ ಸಿಗಲಿದೆ. ಜೊತೆಗೆ ವಿವಿಧ ಸ್ನಾತಕೋತ್ತರ ವಿಭಾಗಗಳ ಸಂಯೋಜಕರು ಸ್ವತಃ ಭೇಟಿಗೆ ಲಭ್ಯವಿದ್ದು ಪ್ರವೇಶ ಬಯಸುವ ವಿದ್ಯಾಥಿರ್üಗಳು ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳಬಹುದೆಂದು ವಿಶ್ವವಿದ್ಯಾನಿಲಯ ಕಾಲೇಜು ಹಾಗೂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರುಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here