Saturday 20th, April 2024
canara news

ಭಾರತ್ ಬ್ಯಾಂಕ್‍ನ ಸದಸ್ಯತ್ವದಿಂದ ಸದಸ್ಯನೋರ್ವನ ಹೊರಹಾಕಲ್ಪಟ್ಟ ಮತದಾನ

Published On : 18 Jun 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.17 : ಭಾರತ್ ಬ್ಯಾಂಕ್‍ನ ಮಹಾ ಸಭೆಯ ಮಧ್ಯಾಂತರದಲ್ಲಿ ಅಹಿತಕರ ಘಟನೆಯೊಂದು ನಡೆದಿದ್ದು, ಬ್ಯಾಂಕ್‍ನ ಷೇರುದಾರನಾದ ಆರ್.ಆರ್ ಪಾಂಡ್ಯನ್ ತನ್ನ ನಿಲುವನ್ನು ಮಂಡಿಸಲು ಒತಾಯಿಸಿ ತನ್ನ ಕಾರ್ಯಕರ್ತರನ್ನು ಕರೆದು ಬಂದಿದ್ದು ಆತನ ಕಾರ್ಯಕರ್ತನನ್ನು ಪೆÇೀಲಿಸರು ತಡೆದು ಪಾಂಡ್ಯನ್‍ನನ್ನು ಮಾತ್ರ ಸಭೆಗೆ ಒಳಬರಲು ಅವಕಾಶ ಮಾಡಿಕೊಟ್ಟರು. ಬ್ಯಾಂಕ್‍ನ ಷೇರುದಾರರೋರ್ವರಾದ ಆರ್.ಆರ್ ಪಂಡ್ಯಾನ್ ಅವರು ಬ್ಯಾಂಕ್ ಬಗ್ಗೆ ಅಪಚಾರ ವೆಸಗಿ ಮಾ£ಹಾನಿÀಕರವಾಗುವಂತೆ ಸಾರ್ವಜನಿಕವಾಗಿ ನಡೆÀಸಿದ ಕಾರಣ ಮಹಾ ಸಭೆಯಲ್ಲಿ ಪಾಂಡ್ಯನ್ ಅವರ ಹೆಸರನ್ನು ಅಳಿಸುವ ನಿರ್ಧಾರಕ್ಕೆ ಬರುತ್ತಿದ್ದಂತೆಯೇ ಕಾರ್ಯಾಧ್ಯಕ್ಷರು ಸಭೆಯ ಮುಂದೆ ವಿಷಯ ಮಂಡಿಸಿದರು. ಈ ಬಗ್ಗೆ ಆತನ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳ ಹಾಗೂ ಇನ್ನಿತರ ವಿಚಾರ ಬಗ್ಗೆ ಬ್ಯಾಂಕ್‍ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಸ್ಥೂಲವಾಗಿ ಮಾಹಿತಿ ನೀಡಿದರು. ಈ ಬಗ್ಗೆ ರೊಚ್ಚಿಗೆದ್ದ ಸಭಾ ಸದಸ್ಯರು ತತ್‍ಕ್ಷಣದಿಂದ ಪಾಂಡ್ಯನ್ ಹೆಸರು ತೆಗೆದು ಹಾಕುವಂತೆ ಒಕ್ಕೂರಳ ಅನುಮತಿ ನೀಡಿದರು.

ಸಭೆಯ ಕಲಾಪದಂತೆ ಕಾರ್ಯಾಧ್ಯಕ್ಷರು ಉಪಸ್ಥಿತ ಪಾಂಡ್ಯನ್‍ಗೆ ಉತ್ತರಿಸಲು ಅವಕಾಶ ಮಾಡಿ ಕೊಟ್ಟರು. ಆದರೆ ಆತನಿಗೆ ಮಾತನಾಡಲೇ ಬಿಡಬಾರದು ಎಂದು ಪಟ್ಟು ಹಿಡಿದ ¸ಭಿಕರು ಆತನ ಮಾತಿಗೆ ತೀವ್ರವಾಗಿ ವಿರೋಧಿಸಿದಾಗ ಪಾಂಡ್ಯನ್‍ನನ್ನು ಷೇರುದಾರರ ಪಟ್ಟಿಯಿಂದ ಕೈ ಬಿಡಲು ಪಟ್ಟು ಹಿಡಿದರು. ಪಾಂಡ್ಯನ್ ಮಾತನಾಡದಂತೆ ಕೆರಳಿದ ಸಭಿಕರ ವರ್ತನೆ ವಿರೋಧಿ ವಿಚಾರ ತಿಳಿದು ಗೋರೆಗಾಂವ್ ಪೆÇೀಲಿಸ್ ಇನ್ಸ್‍ಪೆಕ್ಟರ್‍ಗಳಾದ ಜೋತ್ಸ್ನಾ ವಿಲಾಸ್ ರಾಸಮ್, ಮಹಾದೇವ ನಿವಾಳ್ಕರ್ ಹಾಗೂ ಅಶೋಕ್ ಲಾಂಘೆ ಸ್ಥಳಕ್ಕಾಗಮಿಸಿ ವಿಚಾರ ತಿಳಿಪಡಿಸಲು ಪ್ರಯತ್ನಿಸಿದರೂ ಸಭಿಕರು ಮತದಾನಕ್ಕೆ ಮುಂದಾದರು.

ಅಷ್ಟರಲ್ಲಿ ಮತದಾನದ ಮೂಲಕ ಆತನನ್ನು ತೆಗೆಯಲು ಸಭೆಒಪ್ಪಿಗೆ ಸೂಚಿಸಿತು. ತತ್‍ಕ್ಷಣ ಉಪಸ್ಥಿತ ಮಹಾರಾಷ್ಟ್ರ ರಾಜ್ಯ ಸೊಸೈಟಿ ಕೋ.ಆಫ್ ಸೊಸೈಟಿ ಆಡಿಶನಲ್ ರಿಜಿಸ್ತ್ರಾರ್ ಅನಿಲ್ ಕೆ.ಚವ್ಹಾಣ್ ಅವರಿಗೆ ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕಾಗಿ ಸೂಚಿಸಲಾಯಿತು.

ಬಳಿಕ ಮಹಾಸಭೆ ಮೊಟಕುಗೊಳಿಸಿ ಚುನವಣಾ ಪ್ರಕ್ರಿಯೆ ನಡೆಸಲಾಯಿತು. ಸುಮಾರು 756 ಮತದಾರರು ಮತದಾನ ಮಾಡಿದ್ದು ಈ ಪಯ್ಕಿ ಬ್ಯಾಂಕ್ ಪರ ಮತ್ತು ಪಾಂಡ್ಯನ್ ವಿರುದ್ಧ 724 ಮತಗಳು, ಪಾಂಡ್ಯಾನ್‍ಗೆ 30 ಮತಗಳು ಹಾಗೂ 2 ಅಸಿಂಧು ಮತಗಳು ಚಲಾವಣಿಗೊಂಡವು. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಪಾಂಡ್ಯನ್ ಸಭೆಯನ್ನು ತ್ಯಜಿಸಿ ಹೊರನಡೆದರು. ಮತ್ತೆ ಮಹಾಸಭೆ ಮುನ್ನಡೆದಿದ್ದು ಸಭೆಯಲ್ಲಿ ಬ್ಯಾಂಕ್‍ನ ನಿಷ್ಠಾವಂತ ಶ್ರದ್ಧಾಪೂರ್ವಕ ಸೇವೆಗೆ ದೊರೆತ ಫಲವೆಂದು ಸಭಿಕ ಸದಸ್ಯರು ಹರ್ಷವ್ಯಕ್ತಪಡಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here