Wednesday 24th, April 2024
canara news

ಪತ್ರಕರ್ತ ಎಲ್.ಎಸ್ ಶಾಸ್ತ್ರಿಗೆ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-2017' ಪ್ರದಾನ

Published On : 19 Jun 2017


ಸೂರಿ ಕೃತಿಗಳಲ್ಲಿ ಸಾಂಸ್ಕೃತಿಕ ಮೌಲ್ಯಗಳ ಸಂಪತ್ತಿತ್ತು : ಡಾ| ತಾಳ್ತಜೆ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.18: ಹವ್ಯಕ ಸಮಾಜದವರೇ ಆದ ಕರ್ಕಿ ಅವರ ಆ ಸಮಾಜದ ಒಳಗಿನ ಸಮಸ್ಯೆಗಳ ಕುರಿತು ಬರೆಯಲು ಸುಲಭವಾಯಿತು. ಸೂರಿ ವೆಂಕಟ್ರಾಮಣ ಶಾಸ್ತ್ರಿ ಅವರು ತಾನೂ ಯಾವ ಸಂಸ್ಕೃತಿಯ ಹಿನ್ನಲೆಯಿಂದ ಬಂದರೂ ಅದನ್ನು ತಮ್ಮ ಕೃತಿಯಲ್ಲಿ ಪ್ರಾಮಾಣಿಕವಾಗಿ ತರಲು ಪ್ರಯತ್ನಿಸಿದ್ದಾರೆ. ನಾವೂ ಇಂದು ಕಳಕೊಂಡಿರುವ ಸಾಂಸ್ಕೃತಿಕ ಮೌಲ್ಯಗಳನ್ನು ಸಂಪತ್ತನ್ನು ಸೂರಿ ಅವರ ಕೃತಿಗಳಲ್ಲಿ ಕಾಣಬಹುದು. ಪ್ರಶಸ್ತಿ ಪ್ರದಾನ ಸಮಾರಮ್ಭ ಹೇಗೆ ನಡೆಯಬೇಕೆಂಬುದಕ್ಕೆ ಇಂದಿನ ಈ ಕಾರ್ಯಕ್ರಮ ಆದರ್ಶಪ್ರಾಯವಾಗಿ ದೆಎಂದು ನಾಡಿನ ಹೆಸರಾಂತ ವಿದ್ವಾಂಸ, ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ಪ್ರಸಿದ್ಧ ಲೇಖಕ ಡಾ| ತಾಳ್ತಜೆ ವಸಂತ್ ಕುಮಾರ್ ನುಡಿದರು.

ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬಯಿ ಸಂಸ್ಥೆಯು ಇಂದಿಲ್ಲಿ ರವಿವಾರ ಪೂರ್ವಾಹ್ನ ಘಾಟ್ಕೋಪರ್ ಪಶ್ಚಿಮದಲ್ಲಿನ ಹವ್ಯಾಕರ ಸಭಾಗೃಹದಲ್ಲಿ ಪ್ರದಾನಿಸಿದ ವಾರ್ಷಿಕ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-2017' ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಸಮಾರಂಭ ಉದ್ಘಾಟಿಸಿ ಡಾ| ವಸಂತ್ ಕುಮಾರ್ ಮಾತನಾಡಿದರು.

ಕರ್ನಾಟಕ ಮಲ್ಲ ಕನ್ನಡ ದೈನಿಕದ ಸಹಯೋಗದೊಂದಿಗೆ ನಡೆಸಲ್ಪಟ್ಟ ಸಮಾರಂಭದ ಸಭಾಧ್ಯಕ್ಷತೆಯನ್ನು ಹವ್ಯಕ ವೆಲ್ಫೇರ್ ಟ್ರಸ್ಟ್‍ನ ಅಧ್ಯಕ್ಷ ಶಿವಕುಮಾರ್ ಪಿ.ಭಾಗ್ವತ್ ವಹಿಸಿದ್ದು ಗೌರವ ಅತಿಥಿüಗಳಾಗಿ ಹಿರಿಯ ಸಾಹಿತಿ ಎಸ್.ಎಂ ಕೃಷ್ಣ ರಾವ್, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ಹಿರಿಯ ಕವಿ ಹಾಗೂ ಟ್ರಸ್ಟ್‍ನ ಉಪಾಧ್ಯಕ್ಷ ಸಂಜಯ ಭಟ್, ಗೌರವ ಪ್ರಧಾನ ಕಾರ್ಯದರ್ಶಿ ನಾರಾಯಣ ಆರ್.ಅಕದಾಸ, ಗೌರವ ಕೋಶಾಧಿಕಾರಿ ಎ.ಜಿ ಭಟ್ ಅವರನ್ನೊಳಗೊಂಡು, ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ 2017'ಯನ್ನು ಹಿರಿಯ ಪತ್ರಕರ್ತ, ಲೇಖಕ ಎಲ್.ಎಸ್ ಶಾಸ್ತ್ರಿ ಅವರಿಗೆ ಪ್ರದಾನಿಸಿ ಶುಭಾರೈಸಿದರು.

ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಎಲ್.ಎಸ್ ಶಾಸ್ತ್ರಿ ಸೂರಿ ಅವರ ಹೆಸರಿನ ಈ ಪ್ರಶಸ್ತಿಯನ್ನು ಅತ್ಯಂತ ಆದಾರ ಅಭಿಮಾನದಿಂದ ನಾನು ಸ್ವೀಕರಿಸಿದ್ದೇನೆ. ಅಂದಿನ ಆ ಕಾಲದಲ್ಲಿ ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಅವರು ಆ ಕಾಲ ಘಟ್ಟದಲ್ಲಿ ನಿಂತು ಕ್ರಾಂತಿಕಾರಿ ಕೃತಿಗಳನ್ನು ರಚಿಸಿದ್ದು ಬಹಳ ಮಹತ್ವದ್ದು. ಈ ಪತ್ರಿಕೋದ್ಯಮ ನನಗೆ ಆಥಿರ್sಕವಾಗಿ ಬಲ ಕೊಟ್ಟಿರಲಿಲ್ಲ, ಆದರೆ ಸಾಂಸ್ಕೃತಿಕವಾಗಿ ಇದು ನನ್ನನ್ನು ಬೆಳೆಸಿದೆ. ತಾಂತ್ರಿಕ ಸೌಲಭ್ಯಗಳಿಲ್ಲದ ಅಂದಿನ ಸಂದರ್ಭದಲ್ಲಿ ಸೂರಿ ಅವರು ಪ್ರಾಮಾಣಿಕತೆಯಿಂದ ನಿರ್ವಾಹಿಸಿದ ಪತ್ರಕರ್ತನ ಪಾತ್ರ ಇಂದಿನ ಮಾಧ್ಯಮದವರಿಗೆ ಆದರ್ಶವಾಗಿದೆ ಎಂದರು.

ಕೃಷ್ಣರಾವ್ ಅಭಿನಂದನಾ ಭಾಷಣ ನುಡಿಗಳನ್ನಾಡಿ ಎಲ್.ಎಸ್ ಶಾಸ್ತ್ರಿ ಅವರಲ್ಲಿ ಪ್ರಾಮಾಣಿಕತೆ ಇದೆ. ತಾನೂ ಬೆಳೆಯುತ್ತಾ ಇನ್ನೊಬ್ಬರನ್ನು ಬೆಳೆಸಿದವರು ಅವರು, ಆದುದರಿಂದ ಕರ್ಕಿ ವೆಂಕಟ್ರಾಮಣ ಶಾಸ್ತ್ರಿ ಸೂರಿ ಅವರ ನೆನಪಿನ ಈ ಪ್ರಶಸ್ತಿ ಯೋಗ್ಯ ವ್ಯಕ್ತಿಗೆ ಸಂದಿದೆ ಎನ್ನುತ್ತಾ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದಿಸಿದರು.

ಜೋಕಟ್ಟೆ ಮಾತನಾಡಿ ಕರ್ಕಿ ಪ್ರಶಸ್ತಿಯೊಂದಿಗೆ ಕರ್ನಾಟಕ ಮಲ್ಲ ಸೇರಿಕೊಂಡಿರುವುದು ಅಭಿಮಾನದ ಸಂಗತಿ. ಯಾವುದೇ ಪತ್ರಕರ್ತ ಜಾತಿಯಿಂದಲ್ಲ ತಮ್ಮ ಕರ್ತವ್ಯದಿಂದ ಗುರುತಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಕರ್ಕಿ ಅವರು ನಮಗೆ ಆದರನೀಯರು ಎಂದÀರು.

ಶಿವಕುಮಾರ್ ಭಾಗ್ವತ್ ಅಧ್ಯಕ್ಷೀಯ ಭಾಷಣಗೈದು ನಮ್ಮ ಸೂರಿ ಕರ್ಕಿ ವೆಂಕಟ್ರಾಮಣ ಶಾಸ್ತ್ರಿ ಅವರ ಈ ಪ್ರಶಸ್ತಿ ಪ್ರಧಾನ ಸಮಾರಂಭ ಇಂದಿಗೂ ನಮ್ಮಲ್ಲಿ ಸ್ಫೂರ್ತಿಯ ಶೆಲೆಯನ್ನು ನೀಡುತ್ತದೆ. ಅವರ ಕೇವಲ 5 ವರ್ಷಗಳ ಸಾಧನೆ ನಮಗೆ ಪ್ರೇರಕ ಶಕ್ತಿಯಾಗಿದೆ. ಎಲ್.ಎಸ್ ಶಾಸ್ತ್ರಿ ಅಂತಹ ಪ್ರಾಮಾಣಿಕ ಪತ್ರಕರ್ತ ನಮ್ಮೊಂದಿಗೆ ಇದ್ದಾರೆ ಎನ್ನುವುದು ಅಭಿಮಾನದ ಸಂಗತಿ. ಈ ಪ್ರಶಸ್ತಿ ಯೋಗ್ಯ ವ್ಯಕ್ತಿಗೆ ಸಂದಿದೆ ಎಂದು ನಮಗೆ ಹೆಮ್ಮೆಯಾಗುತ್ತಿದೆ ಎಂದರು.

ಟ್ರಸ್ಟ್‍ನ ಇತರೇ ಪದಾಧಿಕಾರಿಗಾಳು ಸೇರಿದಂತೆ ಅನೇಕರು ಹಾಜರಿದ್ದು ಟ್ರಸ್ಟ್‍ನ ಮುಖವಾಣಿ `ಹವ್ಯಕ ಸಂದೇಶ' ಮಾಸಿಕದ ಸಂಪಾದಕಿ ನ್ಯಾಯವಾದಿ ಅಮಿತಾ ಎಸ್. ಭಾಗ್ವತ್ ಪ್ರಸ್ತಾವನೆಗೈದÀು ವೆಂಕಟ್ರಾಮಣ ಶಾಸ್ತ್ರಿ ಜೀವನಶೈಲಿ ಮತ್ತು ಅವರ ಪತ್ರಿಕೋದ್ಯಮದ ಸೇವೆಯನ್ನು ಭಿತ್ತರಿಸಿದರು. ವಾರ್ಷಿಕ ಕಾರ್ಯಕ್ರಮ ಪ್ರಯುಕ್ತ ನೇಹಾ ಹೆಗಡೆ ಭರತನಾಟ್ಯ ಹಾಗೂ ಜೆ.ಜಿ ಕ್ರಿಯೇಶನ್ಸ್‍ನ ಬಾಳೇಸರ ವಿನಾಯಕ ಮತ್ತು ಬಳಗವು ವೈವಿಧ್ಯಮಯ ವಿನೋದಾವಳಿಗಳನ್ನು ಸಾದರ ಪಡಿಸಿದರು.

ಕಾವ್ಯ ಅಶ್ವಿನ್ ಹೆಗಡೆ ಪ್ರಾರ್ಥನೆ ಹಾಡಿದರು. ಪ್ರಶಸ್ತಿ ಸಮಿತಿ ಸಂಚಾಲಕಿ ತನುಜಾ ಹೆಗಡೆ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಚಿದಾನಂದ ಭಾಗ್ವತ್ ಶುಭ ಸಂದೇಶÀಗಳನ್ನು ವಾಚಿಸಿದರು. ಪೂರ್ಣಿಮಾ ಅಕದಾಸ ಸನ್ಮಾನಪತ್ರ ವಾಚಿಸಿದರು. ರಂಗ ನಿರ್ದೇಶಕ, ನಟ ಸಾ.ದಯಾ ಅತಿಥಿüಗಳನ್ನು ಪರಿಚಯಿಸಿದರು. ಹವ್ಯಕ ಸಂದೇಶ ಮಂಡಳಿ ಸದಸ್ಯೆ ಹಾಗೂ ಶಶಿಕಲಾ ಹೆಗಡೆ ಕಾರ್ಯಕ್ರಮ ನಿರ್ವಾಹಿಸಿದರು. ಮಹೇಶ ಹೆಗಡೆ ಅಭಾರ ಮನ್ನಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here