Thursday 28th, March 2024
canara news

ನೇಮೊದ ಬೂಳ್ಯ ಆಗೋಸ್ತ್ 4ರಂದು ತೆರೆಗೆ

Published On : 24 Jun 2017   |  Reported By : Rons Bantwal


ಭೂತಾರಾಧನೆ ಸಂಬಂಧಪಟ್ಟ ಪರತಿ ಮಂಗಣೆ ಪಾಡ್ದನ ಆಧಾರಿತ ನೇಮೊದ ಬೂಳ್ಯ ಚಲನ ಚಿತ್ರವು ಆಗೋಸ್ತ್ 4ರಂದು ಕರಾವಳಿಯ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಕುದ್ರಾಡಿಗುತ್ತು ಚಂದ್ರಶೇಖರ ಮಾಡ ತಿಳಿಸಿದ್ದಾರೆ.

ಕುದ್ರಾಡಿ ಕುಲದೇವತಾ ಕ್ರಿಯೇಷನ್ಸ್ ಲಾಂಛನದಲ್ಲಿ ಶ್ರೀಮತಿ ಶಬರಿ ಚಂದ್ರಶೇಖರ್ ಮಾಡ ಅರ್ಪಿಸುವ ಬಿ.ಕೆ. ಗಂಗಾಧರ ಕಿರೋಡಿ ಯನ್ ನಿರ್ದೇಶನದ ನೇಮೊದ ಬೂಳ್ಯ ಸತ್ಯ ಘಟನೆಯಾಧರಿ ಸಿದ ನಾಟಕವಾಗಿದ್ದು, ಈಗ ಅದನ್ನು ನಿರ್ಮಾಪಕ ಕುದ್ರಾಡಿ ಗುತ್ತು ಚಂದ್ರಶೇಖರ ಮಾಡ ಸಿನಿಮಾವನ್ನಾಗಿ ಪರಿವರ್ತಿಸಿದ್ದಾರೆ.

ಬಿ.ಕೆ. ಗಂಗಾಧರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಚಿತ್ರ ನಿರ್ದೇಶಿಸಿದ್ದಾರೆ. ಸಿನಿಮಾವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ ಮೆಚ್ಚುಗೆ ಗಳಿಸಿದೆ. 200 ವರ್ಷಗಳ ಹಿಂದೆ ಪುತ್ತೂರಿನ ಬೆಟ್ಟಂಪಾಡಿಯಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿದ `ಪರತಿ ಮಂಗಣೆ’ ಪಾಡ್ದನವನ್ನು ಸಿನಿಮಾ ರೂಪಕ್ಕೆ ಇಳಿಸಲಾಗಿದೆ.

ವಿ. ಮನೋಹರ್ ಸಾಹಿತ್ಯ ಮತ್ತು ಸಂಗೀತ ಒದಗಿಸಿದ್ದಾರೆ. ಉಮಾಪತಿ ಬೆಂಗಳೂರು ಕ್ಯಾಮರಾ, ಪ್ರಕಾಶ್ ಕಾರಿಂಜ ಸಂಕಲನವಿದ್ದು, ಪ್ರತಾಪ್ ಸಾಲ್ಯಾನ್ ಕದ್ರಿ ಸಹನಿರ್ದೇಶಕರಾಗಿದ್ದಾರೆ. ನೃತ್ಯ ಮದನ್ ಹರಿಣಿ. ಸಿನಿಮಾದಲ್ಲಿ ಪ್ರೀತಂ ಶೆಟ್ಟಿ, ಕಿರುತೆರೆ ನಟಿ ಅಮೃತವರ್ಷಿಣಿ ದಾರಾವಾಹಿ ಖ್ಯಾತಿಯ ರಜನಿ, ಪ್ರದೀಪ್ ಚಂದ್ರ ಮುಖ್ಯ ಪಾತ್ರದಲ್ಲಿದ್ದು, ಇನ್ನುಳಿದಂತೆ ಮನೋಹರ್ ವಿಠಲ್, ರಮೇಶ್ ಭಟ್, ಮಂಡ್ಯ ರಮೇಶ್, ರಘುರಾಮ ಶೆಟ್ಟಿ, ರಮೇಶ್ ಕಲ್ಲಡ್ಕ, ಆರ್, ಎನ್ ಶೆಟ್ಟಿ, ಕಳವಾರ್, ಮೋಹನ್ ಬೋಳಾರ್, ಎನ್.ಎಸ್. ರೈ, ರಾಧಾಕೃಷ್ಣ ಕುಂಬ್ಳೆ, ತಾರಾನಾಥ ಉರ್ವ ಸುರೇಶ್ ನಿಟ್ಟೆ, ಸುರೇಶ್ ದೇವಾಡಿಗ, ಜಯಶೀಲ ಮರೋಳಿ, ವೀಣಾ ಜಯಂತ್, ರತ್ನಾ ವತಿ ಜೆ. ಬೈಕಾಡಿ, ಪವಿತ್ರ ಶೆಟ್ಟಿ ಮೊದಲಾದವರು ಇದ್ದಾರೆ. ಸಿನಿಮಾದ ಹಾಡುಗಳು ಜನಪ್ರಿಯ ಗೊಂಡಿದ್ದು, ಸಿನಿಮಾದ ಬಗ್ಗೆ ಹೆಚ್ಚಿನ ಭರವಸೆ ಮೂಡಿಸಿದೆ.

ಕರಾವಳಿಯ ಹಸಿರು ಪರಿಸರದ ನಡುವೆ ಹಾಡುಗಳನ್ನು ಚಿತ್ರೀಕರಿಸಿರುವ ಹಿನ್ನೆಲೆಯಲ್ಲಿ ಹಾಡುಗಳು ತುಂಬಾ ಹಸಿರಿನ ಸೊಗಸನ್ನು ಕಾಣ ಬಹುದಾಗಿದೆ. ನೇಮೊದ ಬೂಳ್ಯ ಚಿತ್ರದಲ್ಲಿ ಆರು ಹಾಡುಗಳಿವೆ.

ಸಾಹಿತ್ಯ ಮತ್ತು ಸಂಗೀತವನ್ನು ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ನೀಡಿದ್ದಾರೆ. ಪೂಜಲ್ಲೇ ಮುಡಿತೊಂದು ಹಾಡನ್ನು ಫಣೇಂದ್ರ ಕೃಷ್ಣ ಹಾಗೂ ನಾಗಚಂದ್ರಿಕಾ ಭಟ್ ಹಾಡಿದ್ದಾರೆ. ಓ ಮದನ ಮೋಕದ ಮಾದಿಮಾಲೆ ಹಾಡನ್ನು ಬದ್ರೀಪ್ರಸಾದ್, ಲೇ ಲೇಯೇ ಲೇಯೇ ಹಾಡನ್ನು ನಾಗಚಂದ್ರಿಕಾ ಭಟ್, ಕಣ್ಣ್‍ಡ ನೆತ್ತೆರೆಜ್ಜಾಂದಿ ಹಾಡನ್ನು ಚಿಂತನ್ ವಿಕಾಸ್, ದೈವೋನ್ ನಂಬೋಡು ಹಾಡನ್ನು ಶಶಾಂಕ್ ಶೇಷಗಿರಿ ಹಾಗೂ ಡೆನ್ನಾ ಡೆನ್ನಾನ ಡೆನ್ನ ಹಾಡನ್ನು ಪ್ರತಿಮಾ ಭಟ್ ಹಾಡಿದ್ದಾರೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here