Saturday 20th, April 2024
canara news

ಮುಂಗಾರು ರಂಗಸಿರಿ ಸಮಾರೋಪ; ಪುರಭವನ ಕಲಾಪ್ರಿಯರ ಕೈಗೆ ಎಟುಕುತ್ತಿಲ್ಲ: ಡಾ. ಸಂಜೀವ ದಂಡೆಕೇರಿ

Published On : 28 Jun 2017   |  Reported By : Rons Bantwal


ಮಂಗಳೂರು: ಸಂಗೀತ, ಕಲೆ, ಯಕ್ಷಗಾನ, ನಾಟಕ ಮುಂತಾದ ಸಾಂಸ್ಕøತಿಕ ಕ್ಷೇತ್ರಗಳಿಗೆ ಮುಖಮಾಡುವ ಯುವಜನರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಅವರನ್ನು ಸೆಳೆಯುವ ಪ್ರಯತ್ನ ಆಗಬೇಕಾಗಿದೆ. ಜತೆಗೆ ಮಂಗಳೂರಿನಲ್ಲಿರುವ ಪುರಭವನವೂ ಕಲಾಪ್ರಿಯರಿಗೆ ಕೈಗೆಟುಕದೇ ಇರುವ ಸ್ಥಿತಿ ನಿರ್ಮಾಣವಾಗಿರುವುದು ಬೇಸರದ ಸಂಗತಿ ಎಂದು ಹಿರಿಯ ನಾಟಕಕಾರ ಡಾ. ಪಿ. ಸಂಜೀವ ದಂಡೆಕೇರಿ ನುಡಿದರು.

ಅವರು ಪುರಭವನದಲ್ಲಿ ಜರಗಿದ ಕನ್ನಡ ಸಂಸ್ಕøತಿ ಇಲಾಖೆ ಮತ್ತು ರಂಗ ಸ್ಪಂದನ ವತಿಯಿಂದ ಜರಗಿದ ಮುಂಗಾರು ಸಿರಿ ಸರಣಿಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರೊಫೆಸರ್ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, ಕರಾವಳಿಯಲ್ಲಿ ಸಾಮಾನ್ಯವಾಗಿ ಕಲಾಪ್ರದರ್ಶನಗಳು ಒಳ್ಳೆಯ ಸಂದೇಶ ಮತ್ತು ಪ್ರೌಢತೆಯನ್ನು ಹೊಂದಿಲ್ಲದೇ ಇದ್ದರೆ ಯಶಸ್ವಿಯಾಗುವುದೇ ಇಲ್ಲ ಎಂದರು. ಕಲಾ ಸಂಸ್ಕಾರ ಇರುವುದರಿಂದ ಇಲ್ಲಿನ ಪ್ರೇಕ್ಷಕರನ್ನು ತೃಪ್ತಿಪಡಿಸುವುದು ಕಷ್ಟ. ಹುರುಳಿಲ್ಲದ ಹಾಸ್ಯಕ್ಕೂ ಇಲ್ಲಿನ ಪ್ರೇಕ್ಷಕರು ತಲೆದೂಗರು. ಜೀವನಾನುಭವ ಇದ್ದಾಗ ಮಾತ್ರ ಹಾಸ್ಯಕ್ಕೂ ಮನ್ನಣೆ ದೊರೆಯುತ್ತದೆ. ಆದ್ದರಿಂದ ಯಕ್ಷಗಾನ, ನಾಟಕ ಅಥವಾ ನೃತ್ಯ ಕ್ಷೇತ್ರದ ಕಲಾವಿದರು, ಸಂಘಟಕರು ಇಲ್ಲಿನ ಪ್ರೇಕ್ಷಕರ ನಾಡಿಮಿಡಿತ ಅರಿತು ಕಾರ್ಯಕ್ರಮ ಸಂಘಟಿಸಬೇಕು ಎಂದರು.

ಮಂಗಳೂರಿನ ಪುರಭವನವು ಜನಸಾಮಾನ್ಯರ ಕಾರ್ಯಕ್ರಮಕ್ಕೆ ಕೈಗೆಟುಕದಂತೆ ಆಗಿರುವುದರಿಂದ ಕಲಾಪ್ರದರ್ಶಕರು ತೀವ್ರ ಬೇಸರಗೊಂಡಿದ್ದಾರೆ. ಬಾಡಿಗೆ, ವ್ಯವಸ್ಥೆಯ ವಿಚಾರಗಳನ್ನು ಜಿಲ್ಲಾಡಳಿತ ಗಮನಹರಿಸಿ ಸರಿಪಡಿಸಬೇಕಾಗಿದೆ ಎಂದು ಕುಕ್ಕುವಳ್ಳಿ ತಿಳಿಸಿದರು.

`ನಮ್ಮ ಕುಡ್ಲ’ ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರಾ ಶುಭ ಹಾರೈಸಿದರು. ಕಾರ್ಯಕ್ರಮದ ಸಂಘಟಕ ವಿ.ಜಿ.ಪಾಲ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಬಳಿಕ ಕುದ್ರೋಳಿ ಗಣೇಶ್ ತಂಡದಿಂದ ಜಾದೂ ಪ್ರದರ್ಶನ ಜರಗಿತು.


ಸುರತ್ಕಲ್‍ನಲ್ಲಿ ಸಾವಯವ ಕೃಷಿಕರಿಗೆ ಸನ್ಮಾನ

ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಮತ್ತು ಪರಿಸರಾಸಕ್ತರು ಸುರತ್ಕಲ್ ಇವರ ಸಹಯೋಗದೊಂದಿಗೆ ಉಚಿತ ಸಸಿ ವಿತರಣಾ ಕಾರ್ಯಕ್ರಮ ಮತ್ತು ಸಾವಯವ ಕೃಷಿಕರಿಗೆ ಸನ್ಮಾನ ಕಾರ್ಯಕ್ರಮವು ಜುಲೈ 2ರಂದು ಭಾನುವಾರ ಬೆಳಿಗ್ಗೆ 9.30 ಸುರತ್ಕಲ್ ಬಂಟರ ಭವನದಲ್ಲಿ ಜರಗಲಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಬಿ. ರವಿರಾಜ ಶೆಟ್ಟಿ, ವಲಯ ಅರಣ್ಯಾಧಿಕಾರಿ ಶ್ರೀಧರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಶೀರ್ ಅಹ್ಮದ್ ಭಾಗವಹಿಸಲಿದ್ದಾರೆ.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here