Thursday 25th, April 2024
canara news

ಜೂ.30: ಕುರ್ಲಾ ಪೂರ್ವದ ಬಂಟರ ಭವನದ ಆವರಣದಲ್ಲಿ `ಮುಂಬಯಿಯಲ್ಲಿ ಪಟ್ಲ ಸಂಭ್ರ್ರಮ-2017' ಪೂರ್ವಭಾವಿ ಸಭೆ

Published On : 29 Jun 2017   |  Reported By : Rons Bantwal


ಮುಂಬಯಿ, ಜೂ. 29: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಮುಂಬಯಿ ಘಟಕದ ವತಿಯಿಂದ ಬರುವ ಆ.13ರ ಭಾನುವಾರ ಮುಂಬಯಿ ಅಲ್ಲಿನ ಬಂಟರ ಭÀವನದಲ್ಲಿ ನಡೆಸಲುದ್ದೇಶಿತ `ಪಟ್ಲ ಸಂಭ್ರಮ-2017' ಸಮಾರಂಭÀದ ಪೂರ್ವಭಾವಿ ಸಭೆಯು ಇದೇ ಜೂ.30ರ ಶುಕ್ರವಾರ ಸಂಜೆ ಅಪರಾಹ್ನ 4.00 ಗಂಟೆಯಿಂದ ಕುರ್ಲಾ ಪೂರ್ವದ ಬಂಟರ ಭವನದ ಆವರಣದಲ್ಲಿ ಜರಗಲಿದೆ.

 Patla Satish Shetty

Suresh S. Bhandary

 Aikala Harish Shetty.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಮುಂಬಯಿ ಘಟಕದ ಗೌರವಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉಪಸ್ಥಿತಿಯಲ್ಲಿ, ಸಮಿತಿಯ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು ಶ್ರೀ ಕಟೀಲು ಮೇಳದ ಪ್ರಸಿದ್ಧ ಭಾಗವತ, ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮಂಗಳೂರು ಇದರ ಸಂಸ್ಥಾಪಕಾಧ್ಯಕ್ಷ, ಯಕ್ಷಚಕ್ರೇಶ್ವರ ಪಟ್ಲ ಸತೀಶ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.

ಕಲಾವಿದರ ನೋವು, ನಲಿವುಗಳಿಗೆ ಸದಾ ಸ್ಪಂದಿಸುತ್ತಿರುವ ಪಟ್ಲ ಸತೀಶ್ ಶೆಟ್ಟಿ ಅವರು `ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮಂಗಳೂರು' ಎಂಬ ಸಂಸ್ಥೆಯನ್ನು ಕಳೆದ ಒಂದೂವರೆ ವರ್ಷಗಳ ಹಿಂದೆ ಸ್ಥಾಪಿಸಿದ್ದು, ಓರ್ವ ಕಲಾವಿದನಿಂದ, ಕಲಾವಿದರಿಗಾಗಿ, ಕಲಾವಿದರಿಗೋಸ್ಕರ' ಹುಟ್ಟಿಕೊಂಡ ಈ ಸಂಸ್ಥೆಯು ಕರ್ನಾಟಕದ ವಿವಿಧೆಡೆ ಸೇರಿದಂತೆ, ಮುಂಬಯಿ, ಬೆಂಗಳೂರು, ವಿದೇಶಿ ನೆಲದಲ್ಲೂ ಘಟಕಗಳನ್ನು ಹೊಂದಿದೆ. ಕಳೆದ ಒಂದೂವರೆ ವರ್ಷಗಳಿಂದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಕಲಾವಿದರ ಬಾಳಿಗೆ ಆಶಾಕಿರಣವಾಗಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಫೌಂಡೇಷನ್ ಒಂದು ಸರಕಾರ ಮಾಡದೇ ಇರುವ ಕೆಲಸವನ್ನು ದಾನಿಗಳು, ಯಕ್ಷಪ್ರೇಮಿಗಳ ಸಹಕಾರದಿಂದ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ಅಶಕ್ತ ಕಲಾವಿದರಿಗೆ ನೆರವು, ಕಲಾವಿದರ ಮಕ್ಕಳ ಪ್ರತಿಭಾ ಪುರಸ್ಕಾರ, ವಿದ್ಯಾಥಿರ್ü ವೇತನ ವಿತರಣೆ, ಕಲಾವಿದರಿಗೆ ವೈದ್ಯಕೀಯ ನೆರವು, ಗೌರವ ನಿಧಿ ಅರ್ಪಣೆ, ಅಶಕ್ತ ಕಲಾವಿದರ ಕುಟುಂಬಗಳಿಗೆ ನೆರವು, ವೈದ್ಯಕೀಯ ಶಿಬಿರ ಇನ್ನಿತರ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರ ಮನೆ-ಮನಗಳನ್ನು ಗೆಲ್ಲುವಲ್ಲಿ ಸಂಸ್ಥೆಯು ಸಂಪೂರ್ಣವಾಗಿ ಯಶಸ್ವಿಯಾಗಿದೆ. ಈಗಾಗಲೇ ಸಂಸ್ಥೆಯು ದಾನಿಗಳ, ಯಕ್ಷಕಲಾಭಿಮಾನಿಗಳ ಸಹಕಾರದಿಂದ ಒಂದು ಕೋಟಿ ರೂಪಾಯಿಗಳಿಗಿಂತಲೂ ಆಥಿರ್üಕ ಮೊತ್ತದ ನಿಧಿ ಯಕ್ಷಗಾನ ಕಲಾವಿದರಿಗಾಗಿಯೇ ಹಂಚಿರುವುದು ಗಮನಾರ್ಹ ವಿಷಯವಾಗಿದೆ.

ಪ್ರಸ್ತುತ `ಯಕ್ಷಧ್ರ್ರುವ ಪಟ್ಲಾಶ್ರಯ' ಎಂಬ ಬೃಹತ್ ಯೋಜನೆಯನ್ನು ಸಂಸ್ಥೆಯು ಕೈಗೆತ್ತಿಕೊಂಡಿದ್ದು, ಸೂರಿಲ್ಲದ ಯಕ್ಷಗಾನ ಕಲಾವಿದರಿಗೆ ಮನೆಯನ್ನು ನಿರ್ಮಿಸಿ ಕೊಡುವ ಕಾರ್ಯದಲ್ಲಿ ತೊಡಗಿದೆ. ಈ ಬೃಹತ್ ಯೋಜನೆಗೆ ಮುಂಬಯಿಯಲ್ಲಿ ನೆಲೆಸಿರುವ ಕಲಾಭಿಮಾನಿಗಳು, ದಾನಿಗಳು, ಸಹೃದಯರ ಸಹಕಾರ, ಪೆÇ್ರೀತ್ಸಾಹ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸಲಹೆ-ಸೂಚನೆಗಳನ್ನು ನೀಡಲು ಹಾಗೂ ಆ.13 ರಂದು ನಡೆಯಲಿರುವ `ಮುಂಬಯಿಯಲ್ಲಿ ಪಟ್ಲ ಸಂಭ್ರಮ-2017' ಸಮಾರಂಭದ ಯಶಸ್ಸಿಗಾಗಿ ಪೂರ್ವತಯಾರಿ ಸಭೆ ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಯಕ್ಷಧ್ರುವ ಪಟ್ಲ ಫೌಂಡೇಷನ್ ಮುಂಬಯಿ ಘಟಕದ ಸಂಚಾಲಕರುಗಳಾದ ಐಕಳ ಗಣೇಶ್ ಶೆಟ್ಟಿ (9833077950), ಅಶೋಕ್ ಶೆಟ್ಟಿ ಪೆರ್ಮುದೆ (9820156163), ಗೌ| ಪ್ರ| ಕಾರ್ಯದರ್ಶಿ ಕರ್ನೂರು ಮೋಹನ್ ರೈ (9867304757) ಅವರನ್ನು ಸಂಪರ್ಕಿಸ ಬಹುದು. ಯಕ್ಷ ಕಲಾಭಿಮಾನಿಗಳು, ಕಲಾಪೆÇೀಷಕರು, ಟ್ರಸ್ಟ್‍ನ ಸದಸ್ಯರು ಸಭೆಯಲ್ಲಿ ಹಾಜರಾಗಿ ತಮ್ಮ ಸಲಹೆ-ಸೂಚನೆ - ಸಹಕಾರ ನೀಡುವಂತೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಂಬಯಿ ಘಟಕ ಪ್ರಕಟನೆಯಲ್ಲಿ ತಿಳಿಸಿದೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here