Thursday 18th, April 2024
canara news

ಸಂತ ಮೇರಿಸ್ ಪ್ರೌಢ ಶಾಲೆಯ ಸುವರ್ಣ ಮಹೋತ್ಸವದ ವರ್ಷಾಚರಣ ಉದ್ಘಾಟನ ಸಮಾರಂಭ

Published On : 01 Jul 2017   |  Reported By : Bernard J Costa


ಕುಂದಾಪುರ, ಜು.1: ಕುಂದಾಪುರದ ಪ್ರತಿಶ್ಠಿತ ಸಮೂಹ ವಿಧ್ಯಾ ಸಂಸ್ಥೆಗಳಲ್ಲಿ ಒಂದಾಂದ ಸಂತ ಮೇರಿಸ್ ಪ್ರೌಡ ಶಾಲೆಯು ಈ ವರ್ಷ 50 ಸಂವತ್ಸರಗಳನ್ನು ಕಳೆದು ಸುವರ್ಣ ಮಹೋತ್ಸವವನ್ನು ಆಚರಿಸುತ್ತದೆ. ಈ ವರ್ಷವೀಡಿ ಸುವರ್ಣ ಮಹೋತ್ಸವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದೇ ಜೂನ್ 30 ರಂದು ಉಡುಪಿ ಕೆಥೋಲಿಕ್ ಶಿಕ್ಷಣ ಮಂಡಳಿಯ ಪ್ರಧಾನ ಕಾರ್ಯದರ್ಶಿಗಳಾದ ವಂ|ಧರ್ಮಗುರು ಲಾರೆನ್ಸ್ ಡಿಸೋಜಾ ಈ ಮಹೋತ್ಸವದ ಉದ್ಘಾಟನ ಸಮಾರಂಭವನ್ನು ಅತಿಥಿಗಳ ಜೊತೆ ವಿದ್ಯುಕ್ತವಾಗಿ ಉದ್ಘಾಟನೆ ಮಾಡಿದರು.

 

‘ಒಂದು ಶಾಲೆಯ ಸುವರ್ಣ ಮಹೋತ್ಸವ ಅಂದರೆ ಅದಕ್ಕೆ ತಾರುಣ್ಯ ತುಂಬಿದಂತೆ, ಅಂದರೆ ಈ ಸಂಸ್ಥೆಗೆ ಇನ್ನೂ ಹಲವಾರು ವರ್ಷಗಳ ಭವಿಶ್ಯ ಅಡಗಿದೆ, ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಶಿಸ್ತು ಬದ್ದ ಶಿಕ್ಷಣ ನೀಡುವಲ್ಲಿ ಮಂಚೂಣಿಯಲ್ಲಿದ್ದಾರೆ, ಇಲ್ಲಿ ಸೇವೆ ಮಾಡುವರು ಸಮರ್ಪಣ ಭಾವದಿಂದ ಸೇವೆ ಗೈಯುತ್ತಾರೆ. ಇಲ್ಲಿ ಶಿಕ್ಷಣ ಪಡೆದ ಅನೇಕರು ಸಮಾಜದಲ್ಲಿ ಉತ್ತುಂಗ ಸ್ಥಾನದಕ್ಕೆ ಎರಿದ್ದಾರೆ, ಒಟ್ಟಾರೆಯಾಗಿ ಈ ಶಿಕ್ಷಣ ಸಂಸ್ಥೆಗಳಿಗೆ 136 ವರ್ಷಗಳ ದೀರ್ಘ ಇತಿಹಾಸವಿದೆ. ಈ ಸಮೂಹ ಶಿಕ್ಷಣದ ಕನ್ನಡ ಫ್ರೌಡ ಶಾಲೆ ಸುವರ್ಣ ಮಹೋತ್ಸವ ಆಚರಣೆಯು ಇದರ ಕೀರ್ತಿಯ ಪ್ರತೀಕವಾಗಿದೆಯೆಂದು’ ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಸುವರ್ಣ ಮಹೋತ್ಸವಕ್ಕೆ ಶುಭ ಕೋರಿದರು.

ಪುರಸಭೆಯ ಅಧ್ಯಕ್ಷೆ ವಸಂತಿ ಸಾರಂಗ್ ‘ಸಂತ ಮೇರಿಸ್ ವಿಧ್ಯಾ ಸಂಸ್ಥೆ ಶಿಸ್ತಿಗೆ ಹೆಸರಾಗಿರುವ ಸಂಸ್ಥೆ, ನನ್ನ ಮಗಳು ಈ ಶಾಲೆಯ ವಿಧ್ಯಾರ್ಥಿ, ನನಗೆ ಮತ್ತು ನನ್ನ ಮಗಳಿಗೆ ಈ ಶಾಲೆಯ ಬಗ್ಗೆ ಅಪಾರ ಅಭಿಮಾನವಿದೆ’ ಎಂದು ಉದ್ಘಾಟನ ಫಲಕವನ್ನು ಉದ್ಘಾಟಿಸಿ ಸಂಸ್ಥೆಗೆ ಶುಭ ಕೋರಿದರು. ಪುರ ಸಭೆ ಉಪಾಧ್ಯಕ್ಷರಾದ ಹಳೆ ವಿಧ್ಯಾರ್ಥಿ ರಾಜೇಶ್ ಕಾವೇರಿ, ಉತ್ತಮ ಅಂಕ ಗಳಿಸಿದ ವಿಧ್ಯಾರ್ಥಿಗಳನ್ನು ಸನ್ಮಾನಿಸಿ ‘ಎಕಲವ್ಯ ಗುರುಗಳಿಗೆ ತನ್ನ ಬೆರಳನ್ನೆ ಗುರುಕಾಣಿಕೆ ನೀಡಿದ, ಆದರೆ ನಾವು ಅಂತಹ ದೊಡ್ಡ ಕಾಣಿಕೆ ಕೊಡುವ ಅಗತ್ಯವಿಲ್ಲಾ, ಆದರೆ ನಾವು ನಮ್ಮ ಶಾಲೆಯೆಂಬ ಅಭಿಮಾನದಲ್ಲಿ ನಾವೆಲ್ಲಾ ಒಟ್ಟಾಗಿ ಈ ಸುವರ್ಣ ಮಹೋತ್ಸವನ್ನು ಆಚರಿಸಲು ಒಟ್ಟಾಗೋಣ ಎಂದು’ ಅವರು ಹಳೆ ವಿಧ್ಯಾರ್ಥಿಗಳಿಗೆ’ ಬಿನ್ನವಿಸಿದರು.

ಸಂಸ್ಥೆಯ ಸಂಚಾಲಕರಾದ ವಂ|ಧರ್ಮಗುರು ಅನಿಲ್ ಡಿಸೋಜಾ ‘ವಿಧ್ಯಾರ್ಥಿಗಳು, ಹಳೆ ವಿಧ್ಯಾರ್ಥಿಗಳು, ಪೆÇೀಷಕರು ಊರ ಅಭಿಮಾನಿಗಳು ಸೇರಿ ಈ ಶಾಲೆಯ ಸುವರ್ಣ ಮಹೋತ್ಸವನ್ನು ಅರ್ಥ ಪೂರ್ಣವಾಗಿ ಆಚರಿಸಿ, ಯಶಸ್ವಿಯಾಗಿ ಸಂಪನ್ನ ಗೊಳಿಸಬೇಕೆಂದು’ ಶುಭಾಶಂಸನೆ ಮಾದಿದರು. ಕುಂದಾಪುರ ಕ್ಷೇತ್ರ ಶಿಕ್ಷಣ ಅಧಿಕಾರಿ ಸೀತಾರಾಮ್ ಶೆಟ್ಟಿ ಸರಕಾರ ಕೋಡಮಾಡಿದ ಸೈಕಲಗಳನ್ನು ವಿತರಿಸಿ ಶುಭ ಹಾರೈಸಿದರು. ಉಡುಪಿ ಫ್ರೌಡ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಕೋಟಾ ಗೀತಾನಂದ ಟ್ರಸ್ಟ್ ಕೊಡಮಾಡಿದ ಉಚಿತ ಪುಸ್ತಕ ವಿತರಣೆ ಮಾಡಿದರು. ಜೇಸಿಐ ಕುಂದಾಪುರ ಘಟಕದ ಅಧ್ಯಕ್ಷೆ ಗೀತಾಜಂಲಿ ಆರ್. ನಾಯಕ್ ಕುಡಿಯವ ಶುದ್ದ ನೀರಿನ ಘಟಕವನ್ನು ತಮ್ಮ ಖರ್ಚಿನಲ್ಲಿ ನೀಡಿ ಶುಭ ಹಾರೈಸಿದರು. ಅರಣ್ಯ ಇಲಾಖೆ ಕೊಡಮಾಡಿದ ಸಸಿಗಳನ್ನು ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಮಕ್ಕಳಿಗೆ ವಿತರಿಸಿದರು.

ವೇದಿಕೆಯಲ್ಲಿ ಸಂತ ಮೇರಿಸ್ ಪ.ಪೂ.ಕಾಲೇಜಿನ ಉಪ ಪ್ರಾಂಸುಪಾಲೆ ಮಂಜುಳ ನಾಯರ್, ಹೋಲಿ ರೋಜರಿ ಆಂಗ್ಲ ಮಾಧ್ಯಮ ಇಂಗ್ಲಿಷ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಜೋಯ್ಸ್‍ಲಿನ್, ಸಂತ ಮೇರಿಸ್ ಕಿರಿಯ ಪ್ರಾರ್ಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಡೋರಾ ಸುವಾರಿಸ್, ಹೋಲಿ ರೋಜರಿ ಕಿಂಡರ್ ಗಾರ್ಡನ್ ಶಾಲೆಯ ಮುಖ್ಯ ಶಿಕ್ಷಕಿ ಶೈಲಾ ಆಲ್ಮೇಡಾ ಉಪಸ್ಥಿತರಿದ್ದರು.

ಉದ್ಘಾಟನ ಸಮಾರಂಭದ ಬಳಿಕ ಮಕ್ಕಳಿಂದ ನ್ರತ್ಯ ಕಾರ್ಯಕ್ರಮ ಹಾಗೂ ಶಾಲಾ ಹಳೆ ವಿಧ್ಯಾರ್ಥಿ, ಸಾಹಿತಿ ಬರ್ನಾಡ್ ಜೆ,ಕೋಸ್ತಾ ರಚಿಸಿ ನಿರ್ದೇಶಿಸಿದ ‘ಕರುಣಾಮಯಿ ಮೇರಿ ಮಾತೆ’ ಶಾಲಾ ಹೆಸರಿನ ಮೇರಿಯ ಮಹತ್ವದ ಕುರಿತಾದ ಕಿರು ನಾಟಕವನ್ನು ಮಕ್ಕಳು ಪ್ರದರ್ಶಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು.

ಸುವರ್ಣಮಹೋತ್ಸ ಸಮಿತಿಯ ಅಧ್ಯಕ್ಷ ಲೂವಿಸ್ ಜೆ. ಫೆರ್ನಾಂಡಿಸ್ ಸ್ವಾಗತಿಸಿದರು. ಸಂತ ಮೇರಿಸ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಚೇತನ ವಂದಿಸಿದರು. ಶಿಕ್ಷಕ ಚಂದ್ರ ಶೇಖರ ಬೀಜಾಡಿ ಮತ್ತು ಸ್ಟಾಲ್ನಿ ದಿನಮಣಿ, ಅಸುಂಪ್ತ ಲೋಬೊ ಕಾರ್ಯಕ್ರಮ ನಿರ್ವಹಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here