Thursday 25th, April 2024
canara news

ಕುಂದಾಪುರ ಕಥೊಲಿಕ್ ಸಭಾ ಮತ್ತು ಇತರ ಸಂಘಟನೆಗಳಿಂದ ರಕ್ತ ದಾನ ಶಿಭಿರ

Published On : 02 Jul 2017   |  Reported By : Bernard J Costa


ಕುಂದಾಪುರ, ಜೂ. 2: ‘ರಕ್ತ ದಾನಕ್ಕೂ ನಮಗೆ ಕ್ರೈಸ್ತರಿಗೆ ಹತ್ತಿರ ಸಂಭಂದವಿದೆ, ಯೇಸು ಸ್ವಾಮಿ ನಮ್ಮ ಮೋಕ್ಷಗೊಸ್ಕರ ರಕ್ತ ಸುರಿಸಿದರು, ಆದರೆ ನಾವು ರಕ್ತ ಸುರಿಸುವ ನಮ್ಮ ರಕ್ತ ದಾನ ನೀಡಿದರೆ ಸಾಕು, ಇದರಿಂದ ಸಾಯುವವ ಒಂದು ಜೀವ ಉಳಿಸಿದಂತೆ ಆಗುತ್ತದೆ, ಹಾಗಾಗಿ ಒಳ್ಳೆ ಮನಸಿನಿಂದ ರಕ್ತದಾನ ಮಾಡಬೇಕು’ ಎಂದು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ವಂ| ಅನಿಲ್ ಡಿಸೋಜಾ, ಕುಂದಾಪುರ ಕಥೊಲಿಕ್ ಸಭಾ ಆಯೋಜಿಸಿದ ರಕ್ತದಾನ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ದೀಪ ಬೆಳಗಿಸಿ ಉದ್ಘಾಟಿಸಿ ಸಂದೇಶ ನೀಡಿದರು.

ಈ ರಕ್ತದಾನ ಶಿಭಿರಕ್ಕೆ ಚರ್ಚಿನ ಸಂಘಟನೆಗಳಾದ, ಕಥೊಲಿಕ್ ಸ್ತ್ರೀ ಸಂಘಟನೆ, ಐ.ಸಿ.ವಾಯ್. ಎಮ್. , ಕ್ರೈಸ್ತ ತಾಯಂದಿರ ಒಕ್ಕೂಟ, ಸಂತ ಫ್ರಾನ್ಸಿಸ್ಕನ್ ಸಭಾ ಮತ್ತು ಎಸ್.ವಿ.ಪಿ. ಸಂಘಟನೆಗಳ ಸಹಕಾರದೊಂದಿಗೆ ನೆಡೆಯಿತು.

ಇಂಡಿಯನ್ ರೆಡ್‍ಕ್ರಾಸ್ ಸಂಸ್ಥೆ ಕುಂದಾಪುರದ ಚೇಯೆರ್‍ಮೇನ್ ಜಯಕರ್ ಶೆಟ್ಟಿ ‘ನಾವು ರಕ್ತದಾನ ಮಾಡಿದರೆ ಎನೂ ಅಪಾಯ ವಿಲ್ಲಾ, ಕೆಲವರು ಮೂಢ ನಂಬಿಕೆಕೆ ಒಳಪಡುತ್ತಾರೆ, ನಾವು ಮಾಡಿದ ರಕ್ತ ದಾನ ಕೆಲವೇ ದಿವಸಗಳಲ್ಲಿ ನಮ್ಮ ದೇಹದಲ್ಲಿ ಉತ್ಪಾದನೆ ಆಗುತ್ತದೆ, ಯಾರ ಜೀವ ಉಳಿಸುವುದು ಎಂಬ ಪ್ರಶ್ನೆ ಮುಖ್ಯವಲ್ಲ, ಅಗತ್ಯದದ ಸಮಯದಲ್ಲಿ ಒಂದು ಜೀವ ಉಳಿಸಿದಂತ್ತಾಗುತದೆ, ರಕ್ತದಾನಕ್ಕಿಂತ ದೊಡ್ಡ ದಾನ ಬೇರೊಂದಿಲ್ಲಾ ಇಂಥಹ ಕಾರ್ಯಗಳು ಚರ್ಚಿನ ಸಂಘಟನೆ ಮುಂದುವರಿಸುತ್ತಲೆ ಇರಲಿ’ ಎಂದು ಅವರು ತಿಳಿಸಿದರು.

ಕಥೊಲಿಕ್ ಸಭಾದ ನಿಕಟ ಪೂರ್ವ ಅಧ್ಯಕ್ಷ ಮತ್ತು ಈ ಶಿಬಿರದ ಸಂಚಾಲಕರಾದ ವಿಲ್ಸನ್ ಡಿ’ಆಲ್ಮೇಡಾ ಸ್ವಾಗತ ಕೋರಿದರು. ವೇದಿಕೆಯಲ್ಲಿ ವೈದ್ಯಾಧಿಕಾರಿ ಡಾ|ಮಲ್ಲಿ. ಇಗರ್ಜಿಯ ಪಾಲನ ಮಂಡಳಿಯ ಕಾರ್ಯದರ್ಶಿ ಫೆಲ್ಸಿಯಾನಾ ಡಿಸೋಜಾ, ಕಥೊಲಿಕ್ ಸಭಾ ಕುಂದಾಪುರ ಘಟಕ ನೀಯೊಜಿತ ಶೈಲಾ ಆಲ್ಮೇಡಾ, ಕುಂದಾಪುರ ಸಂತ ಜೋಸೆಫ್ ಕಾನ್ವೆಂಟಿನ ಮೇಲ್ವಿಚಾರಕಿ ಸಿಸ್ಟರ್ ವಾಯ್ಲೆಟ್ ತಾವ್ರೊ ಉಪಸ್ಥಿತರಿದ್ದರು .

ರೆಡ್‍ಕ್ರಾಸ್ ಸಂಸ್ಥೆಯ, ಕಾರ್ಯದರ್ಶಿ ಸೀತಾರಾಮ್ ಶೆಟ್ಟಿ, ಕೋಶಾಧಿಕಾರಿ ಶಿವರಾಮ್ ಶೆಟ್ಟಿ ಡಾ|ಸೋನಿ ಡಿಕೋಸ್ತಾ, ಗಣೇಶ ಆಚಾರ್ಯ ಈ ಶಿಬಿರದಲ್ಲಿ ಹಾಜರಿದ್ದರು. ಜೂಲಿಯೆಟ್ ಪಾಯ್ಸ್ ವಂದಿಸಿದರು. ವಿನಯಾ ಡಿಕೋಸ್ತಾ ಕಾರ್ಯಕ್ರಮವನ್ನು ನಿರೂಪಿಸಿದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here