Thursday 18th, April 2024
canara news

ಮಠದ ಚೆಂಬೂರು ಶಾಖೆಗೆ ಚರಣಸ್ಪರ್ಶಗೈದ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರು

Published On : 03 Jul 2017   |  Reported By : Rons Bantwal


ಸಾಮರಸ್ಯದ ಬಾಳಿಗೆ ಮಾನವೀಯ ಧರ್ಮವೇ ಮುಖ್ಯವಾದದ್ದು-ವಿದ್ಯಾಪ್ರಸನ್ನಶ್ರೀ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.03: ಸ್ವಧರ್ಮಕ್ಕಿಂತ ಮಾನವೀಯ ಧರ್ಮ ಮನುಕುಲಕ್ಕೆ ಶ್ರೇಷ್ಠವಾದದ್ದು. ಮಾನವನಿಗೆ ಸಾಮರಸ್ಯದ ಬದುಕೇ ಸಮೃದ್ಧಿ ಕರುಣಿಸ ಬಲ್ಲದು. ಸಂಸ್ಕಾರ ಮತ್ತು ಸಾಂಸ್ಕೃತಿಕ ಬದುಕಿಗಾಗಿ ಸ್ವಧರ್ಮಗಳು ಎಷ್ಟು ಪ್ರಧಾನವೋ ಸಾಮರಸ್ಯದ ಬಾಳಿಗೆ ಮಾನವೀಯ ಧರ್ಮ ಅಷ್ಟೇ ಮುಖ್ಯವಾಗಿದೆ. ಇದಕ್ಕಾಗಿ ಮಾನವೀಯ ಧರ್ಮವನ್ನು ಮೈಗೂಡಿಸುವ ಅವಶ್ಯಕತೆ ವಿಶೇಷವಾಗಿ ಭಾರತಿಯರಿಗೆದೆ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.

ಇಂದಿಲ್ಲಿ ಭಾನುವಾರ ಮಧ್ಯಾಹ್ನ ಮಹಾನಗರದ ಚೆಂಬೂರು ಪಶ್ಚಿಮದಲ್ಲಿನ ಛೆಡ್ಡಾನಗರದ ಶ್ರೀ ಸುಬ್ರಹ್ಮಣ್ಯ ಮಠದ ಶಾಖೆಗೆ ಆಗಮಿಸಿ ಮಠದ ನಾಗ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಪೂಜೆಗಳನ್ನು ನೆರವೇರಿಸಿ ಮಹಾ ಆರತಿಗೈದÀು ನೆರೆದ ಭಕ್ತರಿಗೆ ಮಂತ್ರಾಕ್ಷತೆ, ಪ್ರಸಾದ ವಿತರಿಸಿ ಹರಸಿದ ವಿದ್ಯಾಪ್ರಸನ್ನ ತೀರ್ಥರು ಯಾವುದೇ ಸಾರ್ವತ್ರಿಕ ಜೀವನದಲ್ಲಿ ಯಾವುದೇ ಧಾರ್ಮಿಕ ಬೇಧ ಸಲ್ಲದು. ಸರ್ವರೂ ಒಬ್ಬನೇ ಭಗವಂತನ ಭಕ್ತರು. ಸನಾತನ ಧರ್ಮ ಸಂಸ್ಕೃತಿಯ ಉಳಿವು ನಮ್ಮ ಉದ್ದೇಶವಾಗಬೇಕು. ಭಾರತೀಯರು ಸನಾತನ ಧರ್ಮದ ಉಳಿವಿಗಾಗಿ ಶ್ರಮಿಸಿದಾಗಲೇ ನಮ್ಮ ಪರಂಪರೆ, ಸಂಸ್ಕೃತಿಗಳು ಬದುಕಿ ಭವಿಷ್ಯತ್ತಿನ ಜನಾಂಗಕ್ಕೆ ಉಳಿಯಬಲ್ಲವು. ಸುಬ್ರಮಹ್ಮಣ್ಯ ಮಠಕ್ಕೆ ಎಲ್ಲ ವರ್ಗದ ಭಕ್ತರಾಗಿದ್ದಾರೆ. ಯಾವುದೇ ಜಾತಿಮತ ಬೇಧವಿಲ್ಲದೆ ಆಗಮಿಸುವ ಅವರೆಲ್ಲರಿಗೂ ಕೂಡಾ ಸಾಮರಸ್ಯದ ಸಂದೇಶ ನೀಡುವುದು ನನ್ನ ಈ ಬಾರಿಯ ಚಾತುರ್ಮಾಸ್ಯದ ಉದೇಶವಾಗಿಸಿದ್ದೇನೆ. ಮುಂಬಯಿಗರು ನಮಗೆ ತುಂಬಾ ಪ್ರಿಯವಾದವರು. ಸುಬ್ರಮಹ್ಮಣ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿತ ಬಹುತೇಕರ ಮುಂಬಯಿಗರು ಇಲ್ಲಿಗೆ ಬರುತ್ತಾರೆ. ಅವರಿಗೆಲ್ಲರಿಗೂ ಒಳ್ಳೆಯ ಹಿತವನ್ನು ಶುಭಾರೈಸುತ್ತೇವೆ ಎಂದರು.

ಈ ಬಾರಿ ತಾನು 21ನೇ ವಾರ್ಷಿಕÀ ಚಾತುರ್ಮಾಸ್ಯ ವೃತ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದಲ್ಲೇ ಕೈಗೊಳ್ಳಲಿದ್ದೇನೆ. ಇದೇ ಜುಲಾಯಿ 16ರ ಕರ್ಕಾಟಕ ಸಂಕ್ರಮಣದ ಸಪ್ತಮಿಯ ಭಾನುವಾರದಿಂದ ಸೆಪ್ಟೆಂಬರ್ 07ರ ಭಾದ್ರಪದ ಕೃಷ್ಣ ಪಕ್ಷ (ಮಹಾಲಯ ಆರಂಭ) ದ ಗುರುವಾರ ತನಕ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಕಳೆದ ವರ್ಷದಂತೆ ಈ ಬಾರಿಯೂ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲೇ ಚಾತುರ್ಮಾಸ್ಯ ವೃತ ಆಚರಿಸಲಿದ್ದು ಚಾತುರ್ಮಾಸ್ಯವಾಧಿಯಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಸಂಗೀತ, ಯಕ್ಷಗಾನ ಹಾಗೂ ಕಲಾರಾದನಾ ಜ್ಞಾನೋದಯ ಬಗ್ಗೆ ವಿಶೇಷ ಉಪನ್ಯಾಸ, ಪಾಠಪ್ರವಚನ, ಉಪನ್ಯಾಸ, ಚರ್ಚಾಗೋಷ್ಠಿ ನಡೆಸಲು ಉದ್ದೇಶಿಸಿರುವುದಾಗಿ ಶ್ರೀಗಳು ತಿಳಿಸಿದರು.

ಶ್ರೀಗಳಿಗೆ ಮಠದ ಪುರೋಹಿತರು ಶಾಸ್ತ್ರೋಕ್ತವಾಗಿ ಬರಮಾಡಿ ಕೊಂಡರು. ಈ ಸಂದರ್ಭದಲ್ಲಿ ಗೋಪಾಲ ಜೋಯಿಸ, ಶ್ರೀಧರ ಭಟ್, ಪುರಂದರ ಜೋಯಿಸ, ಶ್ರೀಕರ ಭಟ್, ಕೃಷ್ಣ ಭಟ್, ಜನಾರದನ ಭಟ್, ದೇವೀ ಪ್ರಸನ್ನ ಸೇರಿದಂತೆ ಅನೇಕ ಪುರೋಹಿತರು ಹಾಜರಿದ್ದು ನೂರಾರು ಭಕ್ತಾಭಿಮಾನಿಗಳು ಶ್ರೀಗಳನ್ನು ಭೇಟಿಗೈದು ಶ್ರೀಗಳಿಂದ ಪ್ರಸಾದ ಪಡೆದರು.

ಸುಬ್ರಹ್ಮಣ್ಯ ಮಠ ಮುಂಬಯಿ ಶಾಖೆಯಲ್ಲಿ ಎಂದಿನಂತೆ ಈ ಬಾರಿಯೂ ಇದೇ ಜು.27ನೇ ಗುರುವಾರ ಚೆಂಬೂರು ಛೆಡಾ ನಗರದ ಶ್ರೀ ನಾಗಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಸುಬ್ರಹ್ಮಣ್ಯಶ್ರೀಗಳ ಆಶೀರ್ವಾದ, ಮಾರ್ಗದರ್ಶ ನದೊಂದಿಗೆ ಧಾರ್ಮಿಕ ವಿಧಿಗಳೊಂದಿಗೆ ನಾಗರ ಪಂಚಮಿ ಆಚರಿಸಲಾಗುವುದು. ಅಂದು ಬೆಳಿಗ್ಗೆಯಿಂದ ಅಭಿಷೇಕ, ಸಾಮೂಹಿಕ ಆಶ್ಲೇಷಾ ಬಲಿ, ಸರ್ಪಕೋಪ, ಶಾಪ ಪರಿಹಾರರ್ಥ ಸರ್ಪತ್ರಯ ಮಂತ್ರ ಹೋಮ, ಮಹಾಭಿಷೇಕ, ಸರ್ವ ಐಶ್ವರ್ಯ ಸಿದ್ಧಿಗಾಗಿ ಅಷ್ಟಕುಲ ನಾಗಪೂಜೆ ಇತ್ಯಾದಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದ್ದು ಸದ್ಭಕ್ತರÀು ಆಗಮಿಸಿ ಶ್ರೀ ನಾಗದೇವರ ಕೃಪೆಗೆ ಪಾತ್ರರಾಗುವಂತೆ ಶಾಖಾ ವ್ಯವಸ್ಥಾಪಕ ವಿಷ್ಣು ಕಾರಂತ್ ತಿಳಿಸಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here