Thursday 25th, April 2024
canara news

ಜಾಗತಿಕ ಪ್ರತಿಷ್ಠಿತ ಟೈಮ್ಸ್ ನೌ ಮಾಧ್ಯಮ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೋ ಆಯ್ಕೆ

Published On : 11 Jul 2017   |  Reported By : Ronida Mumbai


(ಚಿತ್ರ / ಮಾಹಿತಿ : ರೊನಿಡಾ ಮುಂಬಯಿ)

ಮುಂಬಯಿ, ಜು.11: ಮಾಧ್ಯಮ ಜಗತ್ತಿನ ದಿಗ್ಗಜವೆಣಿಸಿದ ಟೈಮ್ಸ್ ನೌ ಮಾಧ್ಯಮ ಚಾನೆಲ್ ಸಂಸ್ಥೆಯು ವಾರ್ಷಿಕವಾಗಿ ಕೊಡಮಾಡುವ ಪ್ರತಿಷ್ಠ ಜಗದ್ವ್ಯಾಪಿ ಅನಿವಾಸಿ ಭಾರತೀಯ ಪುರಸ್ಕಾರಕ್ಕೆ ಈ ಬಾರಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೂಲದ ಪ್ರಸಿದ್ಧ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೋ ಭಾಜನರಾಗಿದ್ದಾರೆ.

ಜಾಗತಿಕ ವಲಯದ ಪ್ರಸಿದ್ಧ ಮಾಧ್ಯಮಗಳಲ್ಲಿ ಒಂದಾದ ಟೈಮ್ಸ್ ಸಮೂಹದ ಟೈಮ್ಸ್ ನೌ ಇಂಗ್ಲೀಷ್ ಮಾಧ್ಯಮ ಚಾನೆಲ್ 2014 ಸಾಲಿನಿಂದ ಭಾರತೀಯರಾಗಿದ್ದು ವಿದೇಶದಲ್ಲಿ ಉದ್ಯಮದಲ್ಲಿ ತೊಡಗಿಸಿ ಕೊಂಡು ತಮ್ಮ ಸಾಧನೆಯ ಮೂಲಕ ಯಶಸ್ವಿ ಕಂಡ ಅನಿವಾಸಿ ಭಾರತೀಯರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಈ ಪ್ರಶಸ್ತಿಯು ಆರು ವಿವಿಧ ಕ್ಷೇತ್ರಗಳಲ್ಲಿ ಉದ್ಯಮಶೀಲತೆ (ಆಂಟರ್‍ಪ್ರಿನರ್‍ಶಿಪ್), ಉದ್ಯೋಗ (ಪೆÇ್ರಫೆಶನಲ್), ವಿದ್ಯಾಥಿರ್s (ಸ್ಟೂಡೆಂಟ್), ಕಲೆ/ ಮನೋರಂಜನೆ (ಆರ್ಟ್ / ಎಂಟರ್‍ಟೇನ್ಮೆಂಟ್), ಮಾನವೀಯ ಒಲವು (ಫಿಲಾಂಥ್ರಾಪಿ) ಮತ್ತು ಸಮಾಜ ಸೇವೆ ಮತ್ತು ದೇಶಕಾಗಿ ನೀಡಿದ ಗಣನೀಯ ಸೇವೆಗಾಗಿ (ಸೋಶಿಯಲ್ ಗುಡ್ ಆ್ಯಂಡ್ ಕಾಂಟ್ರಿಬ್ಯೂಶನ್ ಟು ಇಂಡಿಯಾ) ನೀಡಲಾಗುತ್ತದೆ.

ಸಮುದ್ರದಾಚೆ ನೆಲೆಸಿರುವ ಭಾರತೀಯರು ಹಾಗೂ ಭಾರತೀಯ ನಿವಾಸಿ ಯುಎಸ್‍ಎ, ಕೆನಡಾ, ಸಿಂಗಾಪುರ, ಲಂಡನ್ (ಯುಕೆ), ಮೀಡಲ್ ಈಸ್ಟ್, ದುಬಾಯಿ, ಸೌದಿ ಅರೇಬಿಯಾ, ಬಾಹ್ರೇನ್, ಕತಾರ್ ಮತ್ತು ಕುವೈಟ್ ಮೊದಲಾದ ಕೊಲ್ಲಿ ರಾಷ್ಟ್ರಗಳಲ್ಲಿ ವಾಸವಾದ ಅನಿವಾಸಿ ಭಾರತೀಯರು ಈ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ವಿವಿಧ ಕ್ಷೇತ್ರದ ಉದ್ಯಮಿಗಳ ಅನನ್ಯ ಸೇವೆ ಮನಗಂಡು ಕನಿಷ್ಠ ಐದು ಬಾರಿ ಮೌಲ್ಯಮಾಪನದ ನಂತರ ಈ ಪ್ರಶಸ್ತಿಗೆ ಅಂತಿಮವಾಗಿ ವಿಜೇತರನ್ನು ಹಾರಿಸಲಾಗುವುದು.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮೂಲದ ರೊನಾಲ್ಡ್ ಕೊಲಾಸೊ ಓರ್ವ ಯಶಸ್ವಿ ಉದ್ಯಮಿ ಆಗಿದ್ದು, ಸಮಾಜ ಸೇವೆ ಜೊತೆಗೆ ಸಾಮಾಜಿಕ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಉದಾರದಾನಿ ಆಗಿ ಸೇವಾ ನಿರತರಾಗಿ ಲೋಕೋಪಕಾರಿ ಆಗಿ ಜನಾನುರೆಣಿಸಿದ್ದಾರೆ. ಯಾವುದೇ ಜಾತಿ, ಧರ್ಮ, ಪಂಥ, ಮತ, ಬಾಷೆ, ಭೇದವಿಲ್ಲದೆ ವಿಶೇಷವಾಗಿ ದಕ್ಷಿಣ ಕನ್ನಡದ ಜನತೆಗೆÉ, ಬಡವ ಬಲ್ಲಿದವರಿಗೆ, ಹಲವಾರು ಸಂಘ ಸಂಸ್ಥೆಗಳಿಗೆ ತನ್ನಿಂದಾಗ ಅಪಾರ ಸೇವೆ ಸಲ್ಲಿಸಿದ್ದಾರೆ. ಕೊಲಸೋ ಅವರು ಅನೇಕ ಕುಟುಂಬಗಳಿಗೆ ಮೂಲಭೂತ ಸೌಕರ್ಯವನ್ನು ನೀಡುವಲ್ಲಿ ಯಶಸ್ವಿ ಕಂಡಿದ್ದು ಕರ್ನಾಟಕ ರಾಜ್ಯದಾದ್ಯಂತ ಪ್ರವಾಸಗೈದು ಸಾವಿರಾರು ಜನತೆಯ ಸೇವೆಯಲ್ಲಿ ತೊಡಗಿಸಿ ಕೊಂಡಿರುವರು.

ಇವರ ಸಮಾಜ ಸೇವೆಗೆ ದೇಶ ಮತ್ತು ವಿದೇಶಗಳಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. 2015ರಲ್ಲಿ 80 ರಾಷ್ಟ್ರಗಳ ಪೈಕಿ ಓರ್ವರನ್ನಾಗಿ ಆಸ್ಟ್ರೇಲಿಯಾ ರಾಷ್ಟ್ರದ ಪ್ರಧಾನಮಂತ್ರಿ ಅವರು ಇಂಟರ್‍ನ್ಯಾಷನಲ್ ರೆಕಗ್ನಿಶನ್ ಆವಾರ್ಡ್ ಥ್ರೂ ಲೀಡರ್‍ಶಿಫ್ ಇನ್ ಸರ್ವಿಸ್ ಎಕ್ಸ್‍ಲೆನ್ಸಿ ಪುರಸ್ಕಾರ ನೀಡಿ ಗೌರವಿಸಿದ ಭಾರತೀಯರಲ್ಲಿ ಕೊಲಾಸೋ ಅವರೋರ್ವರು. ಇತ್ತೀಚಿಗೆ ಯುಎಸ್ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏರ್ಪಡಿಸಿ ಔತಣಕೂಟದಲ್ಲಿ ಆಮಂತ್ರಣ ಸ್ವೀಕರಿಸಿ ಪಾಲ್ಗೊಂಡವರಲ್ಲಿ ಕೊಲಾಸೋ ಸೇರಿದ್ದರು.

ಟೈಮ್ಸ್ ನೌ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಇಂದು (ಜು.11) ಮಂಗಳವಾರ ಸಂಜೆ ಮುಂಬಯಿ ನಗರದ ಗ್ರ್ಯಾಂಡ್ ಹೈಯ್ಯತ್‍ನಲ್ಲಿ ನೇರವೇರಲಿದ್ದು ಭಾರತೀಯ ಪ್ರತಿಷ್ಠಿತ ಉದ್ಯಮಿ ರೊನಾಲ್ಡ್ ಕೊಲಾಸೋ ಪಾಲ್ಗೊಂಡು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here