Thursday 25th, April 2024
canara news

ಜು.12: ಮುಲುಂಡ್ ಪೂರ್ವದ ಮರಾಠ ಮಂಡಲ ಸಭಾಗೃಹದಲ್ಲಿ ಕನ್ನಡ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ-ಬಬ್ರುವಾಹನ-ಕಾಳಗ ತಾಳಮದ್ದಲೆ

Published On : 11 Jul 2017   |  Reported By : Rons Bantwal


ಮುಂಬಯಿ, ಜು.11: ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ಹಾಗೂ ಮುಲುಂಡ್ ಫ್ರೆಂಡ್ಸ್ (ರಿ.) ವತಿಯಿಂದ ಉಪನಗರ ಮುಲುಂಡ್ ಪೂರ್ವದಲ್ಲಿನ ವಿಪಿಎಂ ಕನ್ನಡ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಮವಸ್ತ್ರ ವಿತರಣೆ ಹಾಗೂ ಬಬ್ರುವಾಹನ-ಕಾಳಗ ತಾಳಮದ್ದಲೆ ಕಾರ್ಯಕ್ರಮವನ್ನು ಇದೇ ಜು.12ರ ಬುಧವಾರ ಸಂಜೆ 3.00 ಗಂಟೆಗೆ ಮುಲುಂಡ್ ಪೂರ್ವದ ಮರಾಠ ಮಂಡಲ ಸಭಾಗೃಹದಲ್ಲಿ ಆಯೋಜಿಸಿದೆ.

     

C. Palethady                              Aarti Krishna                         Dinesh Amin Mattu

        

Dr. Surendra V.Shetty                    Suresh Shetty Yeyyadi                         Eshwar I.Ail

   

Yogish Bhat Chintana                      Manu Parikka

ಕಳೆದ ಹಲವಾರು ವರುಷದಿಂದ ಮುಲುಂಡ್ ಪರಿಸರದಲ್ಲಿ ಮುಲುಂಡ್ ಫ್ರೆಂಡ್ಸ್ ಹಾಗೂ ಕಜಾಪ ಮಹರಾಷ್ಟ್ರ ಘಟಕವು ಉಭಯ ಸಂಸ್ಥೆಗಳ ಅಧ್ಯಕ್ಷ, ಯುವ ಸಮಾಜ ಸೇವಕ ಸುರೇಶ್ ಶೆಟ್ಟಿ ಯೆಯ್ಯಾಡಿ ಅವರ ಮುಂದಾಳತ್ವದಲ್ಲಿ ಕ್ರೀಡಾ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕøತಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸೇವಾ ನಿರತವಾಗಿದೆ. ಅಂತೆಯೇ ವಿಪಿಎಂ ಕನ್ನಡ ಶಾಲೆಯ ಹತ್ತನೆಯ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾಥಿüರ್üಗಳಿಗೆ ಶೈಕ್ಷಣಿಕ ನಿಧಿ, ಪ್ರತಿಭಾ ಪುರಸ್ಕಾರ ಹಾಗೂ ಇತರ ಮಕ್ಕಳಿಗೆ ಸಮವಸ್ತ್ರ ವಿತರಣೆ ನೀಡಿ ಗೌರವಿಸುತ್ತಿದೆ.

ಜು.12ರಂದು ಜರುಗುವ ಕಾರ್ಯಕ್ರಮದ ಅಧ್ಯಕ್ಷತೆ ಕನ್ನಡಿಗರ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ವಹಿಸಲಿದ್ದು, ಮುಖ್ಯ ಅತಿಥಿüಯಾಗಿ ಕರ್ನಾಟಕ ರಾಜ್ಯ ಅನಿವಾಸಿ ಭಾರತೀಯ ಘಟಕದ ಉಪಾಧ್ಯಕ್ಷೆ ಆರತಿ ಕೃಷ್ಣ ಹಾಗೂ ಗೌರವ ಅತಿಥಿüಗಳಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹಾಗಾರ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಸಮಾಜ ಸೇವಕ ಡಾ| ಸುರೇಂದ್ರ ವಿ.ಶೆಟ್ಟಿ, ಉದ್ಯಮಿ ಸಮಿತ್ ಎನ್.ಆಳ್ವ ಕೋಲಾಪುರ, ಹೋಟೇಲ್ ಉದ್ಯಮಿ ಜಯಪ್ರಕಾಶ್ ಶೆಟ್ಟಿ ಮುಲುಂಡ್ ಭಾಗವಹಿಸಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಈಶ್ವರ ಐ.ಐಲ್, ಯೋಗೀಶ್ ಭಟ್ ಚಿಂತನಾ ಅವರಿಗೆ `ಸÀಮಾಜರತ್ನ' ಹಾಗೂ ಮನು ಪರಿಕ್ಕರ್ ಕಾಸರಗೋಡು ಅವರಿಗೆ `ಜಾನಪದ ಸಿರಿ' ಪ್ರಶಸ್ತಿ ಪ್ರದಾನಿಸಲಾಗುವುದು.

ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅಜೆಕಾರು ಕಲಾಭಿಮಾನಿ ಬಳಗ ಮುಂ¨ಯಿ ಸಂಸ್ಥೆಯು ಊರಿನ ನುರಿತ ಕಲಾವಿದ ಕೂಡುವಿಕೆಯಲ್ಲಿ `ಬಬ್ರುವಾಹನ ಕಾಳಗ' ಎಂಬ ಪೌರಣಿಕಾ ಪ್ರಸಂಗದ ತಾಳಮದ್ದಲೆ ನಡೆಸಲಿದೆ. ಈ ಕಾರ್ಯಕ್ರಮಕ್ಕೆ ಶಿಕ್ಷಣ ಪ್ರೇಮಿಗಳು ಹಾಗೂ ಕಲಾಪ್ರೇಮಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸ ಬೇಕಾಗಿ ಉಭಯ ಸಂಸ್ಥೆಗಳ ಸರ್ವ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here