Saturday 20th, April 2024
canara news

ಮುಂಬಯಿಯಲ್ಲಿ ನಡೆಸಲ್ಪಟ್ಟ ಪ್ರತಿಷ್ಠಿತ ಟೈಮ್ಸ್ ನೌ ಪುರಸ್ಕಾರ ಪ್ರಶಸ್ತಿಯೊಂದಿಗೆ ಗೌರವಿಸಲ್ಪಟ್ಟ ರೊನಾಲ್ಡ್ ಕೊಲಾಸೋ

Published On : 11 Jul 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.11: ಮಾಧ್ಯಮ ಲೋಕದ ಹೆಸರಾಂತ ಟೈಮ್ಸ್ ನೆಟ್‍ವರ್ಕ್ ಸಮೂಹವು ವಾರ್ಷಿಕವಾಗಿ ಕೊಡಮಾಡುವ ಪ್ರತಿಷ್ಠಿತ ಅನಿವಾಸಿ ಭಾರತೀಯ ಪುರಸ್ಕಾರ ಪ್ರದಾನ ಸಮಾರಂಂಭ ಇಂದಿಲ್ಲಿ ಮಂಗಳವಾರ ರಾತ್ರಿ ಮುಂಬಯಿ ಮಹಾನಗರದ ಕಲೀನಾದಲ್ಲಿನ ಗ್ರ್ಯಾಂಡ್ ಹೈಯ್ಯತ್ ಸಭಾಂಗಣದಲ್ಲಿ ನೇರವೇರಿತು.

 

ಈ ಬಾರಿ ನಾಲ್ಕನೇ ವಾರ್ಷಿಕ ಪುರಸ್ಕಾರ ಪ್ರದಾನ ವರ್ಣರಂಜಿತ ಭವ್ಯ ಸಮಾರಂಭದಲ್ಲಿ ಪ್ರಶಸ್ತಿಗೆ ಈ ಬಾರಿ ಆಯ್ಕೆಯಾದ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೂಲದ ಪ್ರಸಿದ್ಧ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೋ ಅವರಿಗೆ ವರ್ಷದ ಅನಿವಾಸಿ ಭಾರತೀಯ ಪ್ರಶಸ್ತಿ ಪ್ರದಾನಿಸಿ ಗೌರವಿತು. ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತ ಲೆಫ್ಟಿನೆಂಟ್ ಜನರಲ್ ಎಸ್.ಬಾಲಕೃಷ್ಣನ್ ಅವರು ಕೊಲಾಸೋ ಅವರಿಗೆ ಪ್ರಶಸ್ತಿಫಲಕ ಪ್ರದಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಗೌರವ ಅತಿಥಿüಗಳಾಗಿ ಐಸಿಐಸಿಐ ಬ್ಯಾಂಕ್‍ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದಾ ಕೋಚರ್, ಸುದೇಶ್ ಶರ್ಮಾ, ಡಾ| ಕಿರಣ್ ಕುಮಾರ್, ಬಾಹುಬಲಿ ಚಿತ್ರದ ಲೇಖಕ ಕೆ.ವಿ ವಿಜಯೇಂದ್ರ ಪ್ರಸಾದ್ ಸೇರಿದಂತೆ ವಿಶ್ವದಾದ್ಯಂತದ ನೂರಾರು ಗಣ್ಯ ಮಹಾನೀಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜೀನ್ ಆರ್.ಕೊಲಾಸೋ, ಇಂಟರ್‍ನೇಶನಲ್ ಫೆಡರೇಶನ್ ಆಫ್ ಕರ್ನಾಟಕ ಕ್ರಿಶ್ಚನ್ ಅಸೋಸಿಯೇಶನ್‍ನ (ಇಫ್‍ಕಾ) ರಾಜ್ಯ ಸಂಚಾಲಕ ಡೆನಿಸ್ ಡಿಸಿಲ್ವಾ, ಫೆÇ್ಲೀರಿನ್ ರೋಚ್, ರೋಶನ್ ಕಾಸ್ತೆಲಿನೋ (ಎಂಆರ್‍ಪಿಎಲ್) ಇನ್ನಿತರ ಗಣ್ಯರು ಹಾಜರಿದ್ದು ಪ್ರಶಸ್ತಿ ಸ್ವೀಕೃತ ಕೊಲಾಸೋ ದಂಪತಿಗೆ ಶುಭಾರೈಸಿದರು.

ಟೈಮ್ಸ್ ನೆಟ್‍ವರ್ಕ್ ಸಮೂಹದ ಎನ್.ಕೆ ಆನಂದ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಪ್ರಶಸ್ತಿಗೆ ಭಾಜನರಾದ ಸರ್ವರಿಗೂ ಶುಭಾರೈಸಿದರು. ನಟಿ ಮತ್ತು ಸಂಗೀತಗಾರ್ತಿ ಸೋಫಿ ಚೌಧರಿ ಕಾರ್ಯಕ್ರಮ ನಿರೂಪಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here