Thursday 22nd, February 2018
canara news

ಜು.16: ಶ್ರೀ ರಜಕ ಸಂಘ ಮುಂಬಯಿ ನವೀಕೃತ ಆಡಳಿತ ಕಚೇರಿ ಉದ್ಘಾಟನೆ

Published On : 12 Jul 2017   |  Reported By : Rons Bantwal


ಮುಂಬಯಿ, ಜೂ.12: ರಜಕ ಸಂಘ ಮುಂಬಯಿ ಇದರ ಡಿ-11, ದಾಮೋದರ್ ಭವನ್, 36-ವಿ ಪಿ ರೋಡ್, ವಿಲೇಪಾರ್ಲೆ ಪಶ್ಚಿಮ, ಮುಂಬಯಿ ಇದರಲ್ಲಿನ ಆಡಳಿತ ಕಚೇರಿ (ಆ್ಯಡ್ಮಿನಿಸ್ಟ್ರೇಟಿವ್ ಆಫೀಸ್) ನವೀಕೃತ ಗೊಳಿಸಲಾಗಿದ್ದು ಇದೇ ಜುಲಾಯಿ 16ನೇ ಆದಿತ್ಯವಾರ ಪೂರ್ವಾಹ್ನ 10.00 ಗಂಟೆಗೆ ಪುನಾರಂಭಿಸಲಾಗುವುದು ಎಂದು ರಜಕ ಸಂಘದ ಅಧ್ಯಕ್ಷ ಸತೀಶ್ ಎಸ್.ಸಾಲಿಯಾನ್ ತಿಳಿಸಿದ್ದಾರೆ.

ಆ ಪ್ರಯುಕ್ತ ಅಂದು ಬೆಳಿಗ್ಗೆ 9.00 ಗಂಟೆಗೆ ಗಣಹೋಮ ತದಾ ನಂತರ ನವೀಕೃತ ಕಚೇರಿ ಉದ್ಘಾಟನೆ, 10.40 ಗಂಟೆಯಿಂದ ಸಂಘದ ಪಶ್ಚಿಮ, ಮಧ್ಯ, ವಸಾಯಿ, ಡೊಂಬಿವಿಲಿ, ನವಿಮುಂಬಯಿ ವಲಯಗಳಿಂದ ಭಜನೆ, ಮಧ್ಯಾಹ್ನ 12.20 ಗಂಟೆಗೆ ಮಂಗಳಾರತಿ, ಅನ್ನದಾನ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 2.30 ಗಂಟೆಗೆ ಪೂಜೆ, ಸನ್ಮಾನ ಕಾರ್ಯಕ್ರಮಗಳಿಂದ ಗುರುವಂದನಾ ಕಾರ್ಯಕ್ರಮ, 3.30 ಗಂಟೆಗೆ ಪ್ರತಿಭಾ ಪುರಸ್ಕಾರ, ವಿದ್ಯಾಥಿರ್ü ವೇತನ, ಪುಸ್ತಕ ವಿತರಣಾ ಕಾರ್ಯಕ್ರಮ ನಡೆಸಲಾಗುವುದು ಎಂದು ಉಪಾಧ್ಯಕ್ಷ ದಾಸು ಸಿ.ಸಾಲ್ಯಾನ್ ತಿಳಿಸಿದ್ದಾರೆ.

ಮುಂಬಯಿ ಮಹಾನಗರ ಮತ್ತು ಉಪನಗರದಲ್ಲಿನ ಸರ್ವ ರಕಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಗದ ಕಾರ್ಯದರ್ಶಿ ಸುಮಿತ್ರಾ ಆರ್.ಪಲಿಮಾರ್ ಈ ಮೂಲಕ ವಿನಂತಿಸಿದ್ದಾರೆ.

 
More News

“ಗುಮಟ್ ವಿಶ್ವದಾದ್ಯಂತ ಹೆಸರುವಾಸಿಯಾದ ಕೊಂಕಣಿಗರ ಜನಪದ ಪ್ರಕಾರ”
“ಗುಮಟ್ ವಿಶ್ವದಾದ್ಯಂತ ಹೆಸರುವಾಸಿಯಾದ ಕೊಂಕಣಿಗರ ಜನಪದ ಪ್ರಕಾರ”
ಸರ್ವೋತ್ಕೃಷ್ಟ ಉತ್ಪಾದಕ ಪ್ರಶಸ್ತಿಗೆ ಭಾಜನರಾದ ಚಂದ್ರಶೇಖರ್ ಶೆಟ್ಟಿ
ಸರ್ವೋತ್ಕೃಷ್ಟ ಉತ್ಪಾದಕ ಪ್ರಶಸ್ತಿಗೆ ಭಾಜನರಾದ ಚಂದ್ರಶೇಖರ್ ಶೆಟ್ಟಿ
ಪದೇ ಪದೇ ಏಕೆ ರಾಜೀನಾಮೆ ನೀಡುತ್ತೀರಿ? ಎಂದು ಹಾಲಾಡಿಯವರನ್ನು ಪ್ರಶ್ನಿಸಿ ಮೊಳಹಳ್ಳಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ರಾಕೇಶ್ ಮಲ್ಲಿ
ಪದೇ ಪದೇ ಏಕೆ ರಾಜೀನಾಮೆ ನೀಡುತ್ತೀರಿ? ಎಂದು ಹಾಲಾಡಿಯವರನ್ನು ಪ್ರಶ್ನಿಸಿ ಮೊಳಹಳ್ಳಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ರಾಕೇಶ್ ಮಲ್ಲಿ

Comment Here