Friday 29th, March 2024
canara news

ಗುರು ನಾರಾಯಣ ತುಳು ನಾಟಕೋತ್ಸವ-2017 ಆಹ್ವಾನಪತ್ರ ಬಿಡುಗಡೆ ಆ.12-15ರ ನಾಲ್ಕು ದಿನ ಬಿಲ್ಲವ ಭವನದಲ್ಲಿ ನಾಟಕೋತ್ಸವ

Published On : 14 Jul 2017


ಮುಂಬಯಿ, ಜು.14: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಂಸ್ಕøತಿಕ ಉಪಸಮಿತಿ ಈ ಬಾರಿ ಆಯೋಜಿಸಿರುವ ಗುರು ನಾರಾಯಣ ತುಳು ನಾಟಕೋತ್ಸವ-2017ರ ಆಮಂತ್ರಣ ಪತ್ರಿಕೆಯನ್ನು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಉಪಸ್ಥಿತಿಯಲ್ಲಿ ನಡೆಸಲ್ಪಟ್ಟ ಸರಳ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ಇಂದಿಲ್ಲಿ ಗುರುವಾರ ರಾತ್ರಿ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದÀ ಸಮಾಲೋಚನಾ ಕೊಠಡಿಯಲ್ಲಿ ಬಿಡುಗಡೆ ಗೊಳಿಸಿ ನಾಟಕೋತ್ಸವಕ್ಕೆ ಶುಭಾರೈಸಿದರು.

ಈ ಸಂದರ್ಭದಲ್ಲಿ ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಭಾಸ್ಕರ ವಿ.ಬಂಗೇರ, ಶಂಕರ ಡಿ. ಪೂಜಾರಿ, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ. ಕಾರ್ಕಳ, ಯುವಾಭ್ಯುದಯ ಸಮಿತಿ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರ್, ಸಾಮಾಜಿಕ ಮತ್ತು ಶಾಲಾ ಉಪಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್, ಅಕ್ಷಯ ಮಾಸಿಕದ ಸಹಾಯಕ ಸಂಪಾದಕ ಹರೀಶ್ ಕೆ.ಹೆಜ್ಮಾಡಿ, ಹಿರಿಯ ಕಲಾವಿದ ಸಂಗೀತಕಾರ ಪದ್ಮನಾಭ ಸಸಿಹಿತ್ಲು ಉಪಸ್ಥಿತರಿದ್ದರು.

ಕಳೆದ ವರ್ಷ ಯಶಸ್ವೀಯಾಗಿ ನಡೆಸಲ್ಪಟ್ಟ ಗುರುನಾರಾಯಣ ನಾಟಕ ಸ್ಪರ್ಧೆಯ ಬಗ್ಗೆ ಪ್ರಸಿದ್ಧ ರಂಗ ಕಲಾವಿದ ಮೋಹನ್ ಮಾರ್ನಾಡ್ ಮತ್ತು ಲೇಖಕ ಓಂದಾಸ್ ಕಣ್ಣಂಗಾರ್ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು.

ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಸ್ವಾಗತಿಸಿದರು. ಸಾಂಸ್ಕøತಿಕ ಉಪಸಮಿತಿ ಕಾರ್ಯಧ್ಯಕ್ಷ ದಯಾನಂದ ಆರ್.ಪೂಜಾರಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು ಪ್ರಸ್ತಾವಿಕವಾಗಿ ಮಾತನಾಡಿ ಇದೇ ಬರುವ ತಾರೀಕು 12.08.2017ರಿಂದ 15.08.2017ರ ನಾಲ್ಕು ದಿನಗಳ ಕಾಲಾವಧಿ ಬಿಲ್ಲವ ಭವನದಲ್ಲಿ ಈ ಬಾರಿ ನಾಟಕೋತ್ಸವ ಆಯೋಜಿಸಲಾಗಿ ದ್ದು ಆ ಬಗ್ಗೆ ಸ್ಥೂಲವಾದ ಮಾಹಿತಿಯನ್ನಿತ್ತು ಧನ್ಯವದಿಸಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here