Tuesday 16th, April 2024
canara news

ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ-ಸ್ಕಾಲರ್‍ಶಿಪ್, ಹೊಲಿಗೆ ಯಂತ್ರ ವಿತರಣೆ

Published On : 19 Jul 2017   |  Reported By : Rons Bantwal


ಸಂಘದಿಂದ ಬಂಟ ಸಮಾಜಕ್ಕೆ ಇನ್ನೂ ಸೇವೆಯಾಗಲಿ: ಕಾಂತಿ ಶೆಟ್ಟಿ

ಮಂಗಳೂರು, ಜು.19: ಬಂಟ ಸಮಾಜದ ಬಡ ವಿದ್ಯಾಥಿರ್üಗಳು ಮತ್ತು ಮಹಿಳೆಯರನ್ನು ಗುರುತಿಸಿ ಸ್ಕಾಲರ್‍ಶಿಪ್ ಮತ್ತು ಹೊಲಿಗೆ ಯಂತ್ರ ವಿತರಣೆ ಸಮಾಜಕ್ಕೆ ಹೆಮ್ಮೆ ಕಾರ್ಯಕ್ರವಾಗಿದೆ. ಬಂಟ ಸಮಾಜ ಸರ್ಕಾರವನ್ನು ಸಂಪರ್ಕಿಸಿದ್ದಲ್ಲಿ ಹಲವು ರೀತಿಯ ಸಹಾಯ ಪಡೆಯಲು ಸಾಧ್ಯವಿದೆ. ಸಮಾಜದ ಮಕ್ಕಳಿಗೆ ಬೆಂಗಳೂರು ಬಂಟರ ಸಂಘ ಪ್ರತಿ ವರ್ಷ ವಿದ್ಯಾಥಿರ್üವೇತನ ನೀಡುತ್ತ ಬಂದಿದೆ. ಸ್ಥಳೀಯ ಸಂಘದ ಪದಾಧಿಕಾರಿಗಳು ಮತ್ತು ಬಂಟರು ಒಗ್ಗೂಡಿದರೆ ಇಲ್ಲೊಂದು ಬಂಟರ ಭವನ ನಿರ್ಮಿಸಲು ಕಷ್ಟವಾಗದು ಎಂದು ಬೆಂಗಳೂರು ಬಂಟರ ಸಂಘದ ಜೊತೆ ಕಾರ್ಯದರ್ಶಿ ಕಾಂತಿ ಶೆಟ್ಟಿ ಹೇಳಿದರು.

 

ಕಳೆದ ಭಾನುವಾರ (ಜು.16) ಗುರುಪುರ ಕುಕ್ಕದಕಟ್ಟೆ ವೈದ್ಯನಾಥ ಸಮುದಾಯ ಭವನದಲ್ಲಿ ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ, ನೂತನ ಪದಾಧಿಕಾರಿಗಳ ಆಯ್ಕೆ, ವಿದ್ಯಾಥಿರ್ü ವೇತನ ಮತ್ತು ಹೊಲಿಗೆ ಯಂತ್ರ ವಿತರಣೆ ಸಮಾರಂಭ ದೀಪ ಬೆಳಗಿಸಿ ಉದ್ಘಾಟಿಸಿ ಕಾಂತಿ ಶೆಟ್ಟಿ ಮಾತನಾಡಿದರು.

ಬಂಟ ಸಮಾಜದ ಅತಿ ಬಡವರ ಗುರುತಿಸಿ, ಸಂಘ ಮಾಡುತ್ತಿರುವ ಕೆಲಸ ಶ್ಲಾಘನೀಯವಾಗಿದೆ. ವಿದ್ಯೆಯಿಂದ ಸಮಾಜದ ಏಳ್ಗೆ ಸಾಧ್ಯ. ಆರಂಭದ ದಿನಗಳಲ್ಲಿ ಈ ಸಂಘದಿಂದೇನಾಗುತ್ತದೆ ಎಂದವರೇ ಹೆಚ್ಚು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಸಂಘ ಮಾಡಿದ ಸಮಾಜಮುಖಿ ಕೆಲಸಗಳು ಸಾಕಷ್ಟಿವೆ. ಆದ್ದರಿಂದಲೇ ಇದೀಗ ಈ ಸಂಘ 10ರಲ್ಲಿ 11 ಆಗದೆ 10ರಲ್ಲಿ ಒಂದು ಆಗಿದೆ ಎಂದು ಆಶೀರ್ವಚನ ನೀಡಿ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಹೇಳಿದರು.

ಸಮಾಜಕ್ಕಾಗಿ ಬಂಟರಿಂದ ಗರಿಷ್ಠ ಪ್ರಮಾಣದ ಕೆಲಸವಾಗಬೇಕು. ಸಮಾಜದಲ್ಲಿ ಕೆಳ-ಮಧ್ಯಮ ವರ್ಗದ ಬಂಟರಿದ್ದಾರೆ ಅವರತ್ತ ದೃಷ್ಟಿ ಹರಿಸಬೇಕು. ನಮ್ಮ ಸಂಸ್ಕøತಿ ತಿದ್ದುವ, ಸಮಾಜದ ಹುಡುಗಿಯರಿಗೆ ನೆಂಟಸ್ಥಿಕೆ ಮತ್ತು ಉದ್ಯೋಗ ನಿಟ್ಟಿನಲ್ಲಿ ಕೆಲಸ ಆಗಬೇಕು ಎಂದು ಮುಖ್ಯ ಅತಿಥಿüಯಾಗಿದ್ದ ಡಾ| ರವಿರಾಜ ಶೆಟ್ಟಿ ಅಭಿಪ್ರಾಯ ಪಟ್ಟರು.

ಬಂಟರ ಸಂಘಕ್ಕೆ ಪುನಾರಾಯ್ಕೆಯಾದ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಮಾತನಾಡಿ, ನಾವು ನೀಡುತ್ತಿರುವ ಈ ಕಿರು ವಿದ್ಯಾಥಿರ್ü ವೇತನವನ್ನು ವಿದ್ಯಾಥಿರ್üಗಳು ದೊಡ್ಡ ಮನಸ್ಸಿನಿಂದ ಸ್ವೀಕರಿಸಬೇಕು. ಯಾಕೆಂದರೆ ಇದು ಗೌರವಪೂರ್ವಕ ಮತ್ತು ಅತ್ಯಂತ ಕಾಳಜಿಯಿಂದ ಸಂಘ ನೀಡುವ ಸಹಾಯಧನವಾಗಿದೆ. ಹೊಲಿಗೆ ಯಂತ್ರವು ಮಹಿಳೆಯರ ಸ್ವ-ಉದ್ಯೋಗ ಸಾಧ್ಯತೆ ಹೆಚ್ಚಿಸಲಿ. ಬೆಂಗಳೂರು ಬಂಟರ ಸಂಘ ನೀಡುತ್ತಿರುವ `ಜೀವನಕ್ಕಾಗಿ ಕಾಮಧೇನು' ಯೋಜನೆಯ ಸಹಾಯಧನವು ನಮ್ಮ ಗೋ-ಪ್ರಿಯರ ಜೀವನ ಉದ್ಧರಿಸಲಿ. ಸಂಘದ ಹೊಸ ಕಟ್ಟಡ ನಿರ್ಮಾಣ ಚಿಂತನೆಯಲ್ಲಿ ಸಮಾಜ ಬಾಂಧವರು ಕೈಜೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಬೆಂಗಳೂರು ಬಂಟರ ಸಂಘದ ಪದಾಧಿಕಾರಿ ವಿಜಯ ಶೆಟ್ಟಿ ಹಾಲಾಡಿ, ಉಮೇಶ್ ಶೆಟ್ಟಿ ಮೇಗಿನಮನೆ, ವಾಮಂಜೂರು ಉದ್ಯಮಿ ಸತೀಶ್ ಶೆಟ್ಟಿ, ಸಂಘದ ಪದಾಧಿಕಾರಿ ಪೆರ್ಮಂಕಿ ಸುದರ್ಶನ ಶೆಟ್ಟಿ ಮೊದಲಾದವರು ಮಾತನಾಡಿದರು.

ಈ ಬಾರಿ 72 ವಿದ್ಯಾಥಿರ್üಗಳಿಗೆ ಸ್ಕಾಲರ್‍ಶಿಪ್, ಐವರು ಮಹಿಳೆಯರಿಗೆ ಹೊಲಿಗೆ ಯಂತ್ರ ಹಾಗೂ ಇಬ್ಬರಿಗೆ ಜೀವನಕ್ಕಾಗಿ ಕಾಮಧೇನು ಚೆಕ್ ನೀಡಲಾಯಿತು. ರಾಜೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರೆ, ಉದಯ ಕುಮಾರ್ ಶೆಟ್ಟಿ ವಂದನಾರ್ಪಣೆಗೈದರು. ವೇದಿಕೆಯಲ್ಲಿ ಉಮೇಶ್ ಮುಂಡ, ಪ್ರವೀಣ್ ಶೆಟ್ಟಿ, ಜನಾರ್ದನ ಶೆಟ್ಟಿ, ವಿಜಯ ಶೆಟ್ಟಿ ಹಾಲಾಡಿ, ರವೀಂದ್ರ ಶೆಟ್ಟಿ, ಕಾಂತಿ ಶೆಟ್ಟಿ, ರವಿರಾಜ್ ಶೆಟ್ಟಿ, ಉಮೇಶ್ ಶೆಟ್ಟಿ, ಸತೀಶ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಲತಾ ಯು ಶೆಟ್ಟಿ, ರಾಜಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಮಾಜದ ಹಲವು ಗಣ್ಯರು ಹಾಗೂ ಸಾಧಕರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಬಾಕ್ಸ್ :
ಮಂಗಳೂರು ಸೈಂಟ್ ಅಲೋಶಿಯಸ್ ರಸ್ತೆಗೆ ಮೂಲ್ಕಿ ಸುಂದರರಾಮ ಶೆಟ್ಟಿ ಹೆಸರಿಡುವ ಪ್ರಸ್ತಾವಕ್ಕೆ ಬಂಟ ಸಮಾಜ ಪೂರ್ಣ ಬೆಂಬಲ ನೀಡಬೇಕು ಎನ್ನುವ ಮಂಗಳೂರು ಬಂಟರ ಸಂಘದ ಪ್ರಸ್ತಾವಕ್ಕೆ ಗುರುಪುರ ಬಂಟರ ಮಾತೃ ಸಂಘದ ಸರ್ವರೂ ಪ್ರಮಾಣ ಸ್ವೀಕರಿಸಿ, ಪೂರ್ಣ ಬೆಂಬಲ ವ್ಯಕ್ತಪಡಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here