Wednesday 24th, April 2024
canara news

ಮಂಗಳೂರು ಪ್ರೆಸ್ ಕ್ಲಬ್‍ನಲ್ಲಿ `ಹೆಲ್ತ್ ಪ್ಲಸ್‍ಪ್ರೋ' ಮೆಡಿಕಲ್ ಡಿರೆಕ್ಟರಿ ಬಿಡುಗಡೆ

Published On : 20 Jul 2017   |  Reported By : Rons Bantwal


ಸ್ವಸ್ಥ ಸಮಾಜಕ್ಕೆ ಮೆಡಿಕಲ್ ಕೈಪಿಡಿಗಳು ಪೂರಕವಾಗಿವೆ: ಪಾಲೆತ್ತಾಡಿ

ಮಂಗಳೂರು, ಜು.19: ಸ್ವಸ್ಥ ಸಮಾಜಕ್ಕೆ ಮೆಡಿಕಲ್ ಕೈಪಿಡಿಗಳು ಪೂರಕವಾಗಿವೆ. ತಂತ್ರಜ್ಞಾನದ ಮತ್ತು ದಾವಂತದ ಈ ಕಾಲದಲ್ಲಿ ಮೆಡಿಕಲ್ ಕ್ಷೇತ್ರವು ವ್ಯಾಪಕವಾಗಿದ್ದು, ಇದರ ತಪಾಸಣೆಗಾಗಿ ಇಂತಹ ಕೈಪಿಡಿಗಳು ಅಗತ್ಯವಾಗಿರುತ್ತದೆ. ಇದು ಬರೀ ಡೈರಿಕ್ಟರಿ ಆಗಿರದೆ ಜನಸಾಮಾನ್ಯರ ಆರೋಗ್ಯದ ಕಾಳಜಿಯನ್ನು ಹೊಂದುವಂತಾಗಲಿ. ಕೈಪಿಡಿ ಪ್ರಕಾಶಕದಿಂದ ವೈದ್ಯಕೀಯ ಲೋಕಕ್ಕೆ ಇನ್ನಷ್ಟು ಮಾಹಿತಿ ಕೃತಿಗಳ ಪ್ರಕಾಶವಾಗಲಿ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ನುಡಿದರು.

ಗುರುವಾರ ಪೂರ್ವಾಹ್ನ ನಗರದ ಲೇಡಿಹಿಲ್ ಅಲ್ಲಿನ ಮಂಗಳೂರುನ ಪ್ರೆಸ್ ಕ್ಲಬ್‍ನಲ್ಲಿ ನಗರದ ಮಾಧ್ಯಮ ಪ್ರವರ್ತಕ ಸಂಸ್ಥೆ ಪ್ರೋವಿೂಡಿಯಾ ಸೊಲ್ಯೂಶನ್ಸ್ ಇಂದಿಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಹೆಲ್ತ್ ಪ್ಲಸ್‍ಪ್ರೋ ಮೆಡಿಕಲ್ ಡಿರೆಕ್ಟರಿ-2017' ಮೂರನೇ ಆವೃತಿಯನ್ನು ಬಿಡುಗಡೆ ಗೊಳಿಸಿ ಪಾಲೆತ್ತಾಡಿ ಮಾತನಾಡಿದರು.

ಪ್ರಕಾಶಕ ರವೀಂದ್ರ ರಾವ್ ಎಸ್ ಪ್ರಸ್ತಾವಣೆಗೈದು, ಆರು ವರ್ಷಗಳಲ್ಲಿ ಮೂರು ಕೈಪಿಡಿಗಳನ್ನು ಪ್ರಕಾಶಿಸಿ ನಗರ ಮತ್ತು ಗ್ರಾಮೀಣ ಜನತೆಯ ಸಹಾಯಕ್ಕಾಗಿ ನೀಡಿದ್ದೇವೆ. ಆ ಪಯ್ಕಿ 90% ನಗರದ ವೈದ್ಯರ ಮತ್ತು ಮೆಡಿಕಲ್ ಬಗ್ಗೆ ಮಾಹಿತಿ ನೀಡಿದ್ದೇವೆ. ಈ ಕೈಪಿಡಿಯಲ್ಲಿ ವೈದ್ಯಕೀಯ ಲೋಕದ ಆಧುನಿಕ ಮಾಹಿತಿಗಳು ಲಭ್ಯವಾಗಿವೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಗೌರವ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ, ಬ್ಯೂಮೋಂಡ್ಸ್ ಹೇರ್ ಫಿಕ್ಸಿಂಗ್‍ನ ನಿರ್ದೇಶಕ ಮಹೇಶ್ ಮಾಲ್ವಾಡಿಕರ್, ನಗರದ ಹೆಸರಾಂತ ಶಸ್ತ್ರವೈದ್ಯ ಡಾ| ಸತೀಶ್ಚಂದ್ರ ಬಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್, ವ್ಹಿಜನ್ ಗ್ರಾಫಿಕ್ಸ್‍ನ ಮಹ್ಮದ್ ಹನೀಫ್, ಪತ್ರಕರ್ತ ಅರೀಫ್ ದೇರಳಕಟ್ಟೆ, ತೇಜಸ್ವಿನಿ ರಾವ್ ಹಾಜರಿದ್ದು ಮೆಡಿಕಲ್ ಡಿರೆಕ್ಟರಿ ಪ್ರಕಾಶಕ ರವೀಂದ್ರ ರಾವ್ ಎಸ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here