Wednesday 24th, April 2024
canara news

ಕತಾರ್ ಕೆಸಿಎಫ್‍ನ ಸಹಾಯ ಹಸ್ತÀ: ಸಂಕಷ್ಟದಲ್ಲಿದ್ದ ಅಬ್ದುಲ್ ಹಮೀದ್ ಮರಳಿ ತಾಯ್ನಾಡಿಗೆ

Published On : 08 Aug 2017   |  Reported By : Rons Bantwal


ಮುಂಬಯಿ, ಆ.08: ಕೆಲವು ವರ್ಷಗಳಿಂದ ಕತಾರ್ ನಲ್ಲಿ ವಾಹನ ಚಾಲಕ ವೃತ್ತಿಯಲ್ಲಿದ್ದ ಬೆಳ್ತಂಗಡಿ ತಾಲ್ಲೂಕಿನ ಕಿಲ್ಲೂರು, ನಾಡ ಎಂಬಲ್ಲಿನ ಅಬ್ದುಲ್ ಹಮೀದ್ ಎಂಬವರು ವಿದೇಶಿಯೊಬ್ಬರಿಂದ ಲಭಿಸಿದ ಹೆಚ್ಚಿನ ವೇತನದ ಬೇರೊಂದು ಉದ್ಯೋಗದ ಆಮಿಷಕ್ಕೆ ಬಲಿಯಾಗಿ ಇದ್ದ ಕೆಲಸವನ್ನೂ ಬಿಟ್ಟು, ಹೆಚ್ಚಿನ ವೇತನ ಸಿಗುವ ಹೊಸ ಕನಸುಗಳೊಂದಿಗೆ ಆ ಹೊಸ ಉದ್ಯೋಗವನ್ನು ಗಿಟ್ಟಿಸಿಕೊಂಡರು. ಕೆಲಕಾಲದ ಪರಿಚಯಸ್ತನಾದುದರಿಂದ ಹಿಂದೆ ಮುಂದೆ ನೋಡದೆ ಕೆಲಸಕ್ಕೆ ಸೇರಿಕೊಂಡರು. ಟ್ರೈಲರ್ ಒಂದರಲ್ಲಿ ಘನವಾಹನ ಚಾಲಕ ಹುದ್ದೆ. ವೇತನವೂ ಹೆಚ್ಚು ಲಭಿಸಿದರೆ ತನ್ನ ಜೀವನದ ಜಂಜಾಟಗಳಿಗೆ ಇನ್ನೇನು ಪರಿಹಾರವಾಗಲಿದೆ ಅಂದುಕೊಂಡು ಮನಸ್ಸಲ್ಲಿ ಕನಸಿನ ಗೋಪುರಗಳನ್ನು ಕಟ್ಟುತ್ತಾ ಹೊಸ ವೃತ್ತಿಯನ್ನಾರಂಭಿಸಿಬಿಟ್ಟರು. ಸಾಮಾನ್ಯವಾಗಿ 10-12 ಗಂಟೆಗಳಷ್ಟಿರುವ ಕೆಲಸವು ಪ್ರಾರಂಭದಿಂದಲೇ ಇಮ್ಮಡಿಯಷ್ಟಾದರೂ ಸುಧಾರಿಸಿಕೊಂಡು ವೃತ್ತಿಯಲ್ಲಿ ತಲ್ಲೀನರಾದರು.. ಇತರ ಕೆಲವು ಚಾಲಕರು ರಜೆಯಲ್ಲಿದ್ದಾರೆ, ಕೆಲವೇ ದಿನಗಳಲ್ಲಿ ಅವರು ಬಂದುಬಿಡುತ್ತಾರೆ ಸಾವರಿಸಿ ಕೊಳ್ಳಿ ಅಂತ ಸಮಜಾಯಿಷಿ ಮಾಡಿ ದಿನ ದೂಡಿಸಿದರು.

ನಂತರದ ದಿನಗಳಲ್ಲಿ ಕಡಿಮೆಯೆಂದರೆ ದಿನಕ್ಕೆ 20 ಗಂಟೆಗಳಷ್ಟಾದರೂ ದುಡಿಯಬೇಕಾದ ಪರಿಸ್ಥಿತಿ ಎದುರಾಗಿತ್ತು. ತುರ್ತಾಗಿ ಬರುವ ಇತರ ಕರೆಗಳಿಗೆ, ಹಗಲು-ರಾತ್ರಿಯೆನ್ನದೆ, ಬಿಡುವಿನ ವೇಳೆಯಲ್ಲಿ ಕಿಂಚಿತ್ತೂ ವ್ಯತ್ಯಾಸವಿಲ್ಲದೆ ಖಂಡಿತ ಎದ್ದು ಹೋಗಲೇ ಬೇಕು. 2-3 ತಿಂಗಳು ಕಳೆಯಿತು,ಪರಿಹಾರ ಕಾಣದೆ ಹೋದಾಗ ಯಾರೋ ಒಬ್ಬರ ಮೋಸದಾಟಕ್ಕೆ ತಾನು ಬಲಿಯಾಗಿದ್ದೇನೆ ಅನ್ನುವುದನ್ನು ಮನಗಂಡ ಹಮೀದ್, ತನ್ನ ಅಸಂತೋಷವನ್ನು ಹೇಳಿಕೊಂಡರು, ಆದರೆ ತನ್ನ ಅಸಹಾಯಕ ವೇದನೆಗೆ ಯಾವುದೇ ಮಾನ್ಯತೆ ಸಿಗದೇ ಇದ್ದಾಗ, ತನಗೆ ಈ ಉದ್ಯೋಗ ಮಾಡಲಾಗುವುದಿಲ್ಲ, ಊರಿಗೆ ಕಳಿಸಿ ಬಿಡಿ ಎಂಬ ಕಠಿಣ ನಿರ್ಧಾರಕ್ಕೆ ಮುನ್ನುಡಿ ಬರೆದರು. ಅಷ್ಟಕ್ಕೂ ಮಣಿಯದ ಕಂಪೆನಿಯವರಲ್ಲಿ ಅಂಗಲಾಚಿದರೂ ತನ್ನ ಮಾಲಕರು ಕಿವಿಗೊಡಲಿಲ್ಲ. ಹೀಗೆ ಮೋಸಕ್ಕೆ ಬಲಿಯಾಗಿದ್ದೇನೆಂದು ಖಚಿತಗೊಂಡಾಗ ಮುಂದೇನು ಮಾಡಬೇಕೆಂದು ತೋಚದೆ ಅತ್ತ ಊರಿಗೆ ಹೋಗಲು ಆಗದೆ ಮುಂದೇನೆ ಮಾಡಬೇಕೆಂದು ದಿಕ್ಕು ತೋಚದೆ ಕಂಗಾಲಾದಾಗ ಪ್ರತಿಭಟನೆಯೇ ಕೊನೆಯ ಅಸ್ತ್ರವೆಂದುಕೊಂಡು ಕೆಲಸಕ್ಕೆ ಹಾಜರಾಗದೆ ತನ್ನ ವಸತಿ ಸ್ಥಳದಲ್ಲೇ ಕಳೆದರು. ರಾಯಭಾರಿ ಕಚೇರಿ ಮತ್ತು ಇತರ ಕಚೇರಿಗಳಿಗೆ ಹಲವು ಬಾರಿ ಅಲೆದಾಡಿ ಯಾವುದೇ ಪ್ರಯೋಜನವಾಗಲಿಲ್ಲ. ಇತ್ತ ಮಾಲಕರಿಂದಲೂ ಯಾವುದೇ ಪ್ರತಿಕ್ರಿಯೆ ಸಿಕ್ಕದೇ ಹೋದಾಗ, ತನ್ನ ಕಷ್ಟವನ್ನು ಊರಿನ ಮತ್ತು ಇತರ ಗಲ್ಫ್ ರಾಷ್ಟ್ರಗಳಲ್ಲಿರುವ ಸ್ನೇಹಿತರಲ್ಲಿ ಹೇಳಿಕೊಂಡಿದ್ದರು.

ಈ ಸಂಕಷ್ಟವನ್ನು ಮನಗಂಡ ಸೌದಿಯಲ್ಲಿರುವ ತನ್ನ ಸ್ನೇಹಿತರಲ್ಲಿ ಯಾರೋ ಒಬ್ಬರು ಅಲ್ಲಿನ ಕೆಸಿಎಫ್ ನಾಯಕರ ಗಮನಕ್ಕೆ ತಂದಿದ್ದು, ಅವರು ತಕ್ಷಣವ್ ಕತ್ತರ್ ಕೆಸಿಎಫ್ ಗೆ ವಿವರ ತಿಳಿಸಿದ್ದು, ಕಾರ್ಯದರ್ಶಿ ಅಬ್ದುರ್ರಹೀಮ್ ಸಅದಿ ಮತ್ತು ಸಾಂತ್ವನ ವಿಭಾಗದ ನಾಯಕ ಅಬ್ದುರ್ರಝಾಕ್ ಮುಂಡ್ಕೂರುರವರು ಕೂಡಲೇ ಕಾರ್ಯಾಚರಣೆಗಿಳಿದರು.ಫಾರೂಕ್ ಕೃಷ್ಣಾಪುರ ಮತ್ತು ಇಮ್ರಾನ್ ಕೂಳೂರು ಇವರ ಸಹಕಾರದೊಂದಿಗೆ ಅವರಿಗೆ ಬೇಕಾದ ಎಲ್ಲಾ ದಾಖಲೆಗಳನ್ನು ವಾರದೊಳಗೆ ಸರಿಪಡಿಸಿ, ಕಂಪೆನಿಯಿಂದ ಪಾಸ್‍ಪೆÇೀರ್ಟ್ ಪಡೆದುಕೊಂಡು, ಎಕ್ಸಿಟ್ ವ್ಯವಸ್ಥೆಯೊಂದಿಗೆ ದಿನಾಂಕ 4/8/2017 ರಂದು ಊರಿಗೆ ಕಳಿಸಿ ಕೊಟ್ಟಿರುತ್ತಾರೆ..

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here