Thursday 14th, December 2017
canara news

ಬ್ಲಡ್ ಹೆಲ್ಪ್‍ಲೈನ್ ಕರ್ನಾಟಕ ಸಂಭ್ರಮಿಸಿದ ಪ್ರಥಮ ವಾರ್ಷಿಕೋತ್ಸ ಹಾಗೂ ರಕ್ತದಾನ ಶಿಬಿರ

Published On : 09 Aug 2017   |  Reported By : Rons Bantwal


ಶಿಕ್ಷಣ ದಾನದಂತೆ ರಕ್ತದಾನ ಕೂಡ ಶ್ರೇಷ್ಠದಾನ : ಸಚಿವ ಖಾದರ್

ಮುಂಬಯಿ, ಆ.09: ಬ್ಲಡ್ ಹೆಲ್ಪïಲೈನ್ ಸಮಾಜಕ್ಕೆ ಮತ್ತು ದೇಶಕ್ಕೆ ಪೂರಕವಾಗುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಅನ್ನದಾನ, ಶಿP್ಷÀಣ ದಾನದಂತೆ ರಕ್ತದಾನ ಕೂಡ ಶ್ರೇಷ್ಠದಾನವಾಗಿದೆ. ರಕ್ತದಾನದ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ದೂರ ಮಾಡಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಹುಟ್ಟಿಸಬೇಕು ಎಂದು ಆಹಾರ ಸಚಿವ ಯು.ಟಿ ಖಾದರ್ ಹೇಳಿದರು.

ಖಾದರ್ ಅವರು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ರವಿವಾರ ನಗರದ ಫೆÇೀರಂ ಫಿಝಾ ಮಾಲ್‍ನಲ್ಲಿ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪೆÇ್ರ| ಪಟ್ಟಾಭಿರಾಮ ಸೋಮಯಾಜಿ ರಕ್ತದಾನ ಮಾಡುವ ಸಂದರ್ಭ ಹಲವು ತೊಂದರೆಗಳನ್ನು ಎದುರಿಸುವ ಸಾಧ್ಯತೆ ಇದೆ. ಹಾಗಾಗಿ ರಕ್ತದಾನ ಮಾಡಲು ಆಸ್ಪತ್ರೆಗೆ ತೆರಳುವ ಸಂದರ್ಭ ಯಾವುದೇ ತೊಡಕುಗಳು ಆಗದಂತೆ ಸರಕಾರ ಮುನ್ನೆಚ್ಚರಿಕೆ ವಹಿಸಬೇಕಿದೆ. ಅದಕ್ಕಾಗಿ ಸಂಘದ ಆಯ್ದ ಸಕ್ರಿಯ ರಕ್ತದಾನಿಗಳಿಗೆ ಸರಕಾರದ ಗುರುತಿನ ಚೀಟಿ ಅಗತ್ಯವಿದೆ ಎಂದು ಸಲಹೆ ನೀಡಿದರು.

ಶಾಸಕರಾದ ಮೊಯ್ದಿನ್ ಬಾವ, ಜೆ.ಆರ್. ಲೋಬೊ, ಚೊಕ್ಕಬೆಟ್ಟು ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಝï ದಾರಿಮಿ, ಮಾಜಿ ಮೇಯರ್ ಕೆ. ಅಶ್ರಫ್ ಶುಭ ಹಾರೈಸಿದರು.

ನಂಡೊ ಪೆಂಙಲ್ ಅಭಿಯಾನದ ಸ್ವಾಗತ ಸಮಿತಿಯ ಅಧ್ತಕ್ಷ ಎ.ಎಚ್. ನೌಷದ್ ಹಾಜಿ ಸುರಲ್ಪಾಡಿ, ಸುಹೈಲ್ ಕಂದಕ್, ನವಾರhÉï ಉಳ್ಳಾಲ್, ಯೂಸುಫ್ ಉಳಾಯಿಬೆಟ್ಟು, ಶರೀಫ್ ಉಳಾಯಿಬೆಟ್ಟು, ರಫೀಕ್ ಮಾಸ್ಟರ್, ರಾಝಿಕ್ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.

ಬ್ಲಡ್ ಹೆಲ್ಪ್ ಲೈನ್‍ನ ಎಡ್ಮಿನ್‍ಗಳಾದ ಇಫ್ತಿಕಾರ್ ಕೃಷ್ಣಾಪುರ, ಮುಸ್ತಫಾ ಅಡ್ಡೂರು ದೆಮ್ಮಲೆ, ಇಮ್ರಾನ್ ಅಡ್ಡೂರು, ಮುಝಮ್ಮಿಲ್ ನೂಯಿ ಅಡ್ಡೂರು, ಫಯಾರhÉï ಅಲಿ ದೆಮ್ಮೆಲೆ ಕಾರ್ಯಕ್ರಮ ಸಂಘಟಿಸಿದ್ದರು.

ಈ ಸಂದರ್ಭ ರಾಜ್ಯ ಆಹಾರ ಆಯೋಗದ ಸದಸ್ಯ ಬಿ.ಎ ಮುಹಮ್ಮದ್ ಆಲಿ ಕಮ್ಮರಡಿ, ಉದ್ಯಮಿ ಝಕಾರಿಯಾ ಜೋಕಟ್ಟೆ, ಅಕ್ಷರ ಸಂತ ಹರೇಕಳ ಹಾಜಬ್ಬ, ಸಂಚಾರಿ ನಿಯಂತ್ರಕ ರವೂಫ್ ಅವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ ಸಚಿವ ಯು.ಟಿ.ಖಾದರ್ ಸಹಿತ 130 ಮಂದಿ ರಕ್ತದಾನಗೈದರು. ಬ್ಯಾರಿ ಝುಲ್ಫಿ ನೇತೃತ್ವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಜೊತೆಗೆ ಮಕ್ಕಳಿಗೆ ಹಾಗು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
More News

ಬೃಹನ್ಮುಂಬಯಿಗೆ ಚಿತ್ತೈಸಿದ ಶ್ರೀ ಜೈನಮಠದ ಪೀಠಾಧಿಪತಿ ಶಾಂತಿಭೂಷಣ ಸ್ವಸ್ತಿ  ಶ್ರೀ ಲಕ್ಷಿ ್ಮಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ
ಬೃಹನ್ಮುಂಬಯಿಗೆ ಚಿತ್ತೈಸಿದ ಶ್ರೀ ಜೈನಮಠದ ಪೀಠಾಧಿಪತಿ ಶಾಂತಿಭೂಷಣ ಸ್ವಸ್ತಿ ಶ್ರೀ ಲಕ್ಷಿ ್ಮಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ
ನಮ್ಮ ಗ್ರಾಮ ನಮ್ಮ ಮಕ್ಕಳು ಮಕ್ಕಳಿಗೆ ಕರಕುಶಲ ವಸ್ತು ಪ್ರಾತ್ಯಕ್ಷಿತೆ ಮಾಹಿತಿ ಶಿಬಿರ-2017
ನಮ್ಮ ಗ್ರಾಮ ನಮ್ಮ ಮಕ್ಕಳು ಮಕ್ಕಳಿಗೆ ಕರಕುಶಲ ವಸ್ತು ಪ್ರಾತ್ಯಕ್ಷಿತೆ ಮಾಹಿತಿ ಶಿಬಿರ-2017
ಸಾವಿನಲ್ಲಿ ರಾಜಕಾರಣ ಮಾಡುವವರು ರಾಕ್ಷಸರು : ಪ್ರಕಾಶ್ ರೈ
ಸಾವಿನಲ್ಲಿ ರಾಜಕಾರಣ ಮಾಡುವವರು ರಾಕ್ಷಸರು : ಪ್ರಕಾಶ್ ರೈ

Comment Here