Thursday 25th, April 2024
canara news

ಕನ್ನಡ ಸಂಘ ಸಾಂತಕ್ರೂಜ್ ಸಂಸ್ಥೆಯಿಂದ 71ನೇ ಸ್ವಾತಂತ್ರ್ಯೋತ್ಸವ ಆಚರಣೆ

Published On : 16 Aug 2017   |  Reported By : Rons Bantwal


ಮಕ್ಕಳಲ್ಲಿ ರಾಷ್ಟ್ರಪ್ರೇಮ ರೂಪಿಸುವ ಅಗತ್ಯವಿದೆ-ಎಲ್.ವಿ ಅವಿೂನ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.15: ಭಾರತೀಯ ವಿಶಾಲ ಭೂಮಿಯಲ್ಲಿ ಭ್ರಾತೃತ್ವ ಭಾವಮೂಡಿಸಿದ ಇಲ್ಲಿನ ಸಂಸ್ಕೃತಿ ಮನುಕುಲದಲ್ಲಿ ಸಾಂಘಿಕತೆ ಸಾರಿದೆ. ಇಂತಹ ಭವ್ಯ ಭಾರತದಲ್ಲಿ ಸದಾಶಯ ಸಹಬಾಳ್ವೆಯ ಧರ್ಮಾಚರಣೆಯಿಂದ ಅಭಿಜಾತ ಜೀವನ ರೂಪಿಸಿಕೊಳ್ಳಲು ಸಾಧ್ಯ. ಆದುದರಿಂದಲೇ ನಾವೂ ಈ ಸಂಘದ ಮುಖೇನ ಸದಾ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳನ್ನು ಹಮ್ಮಿಕೊಳ್ಳುವಂತಾಗಿದೆ. ಸದಸ್ಯರ ಮತ್ತು ಹಿತೈಷಿಗಳ ಸಹಯೋಗದಿಂದ ನಮ್ಮ ಸಂಘವು ಅಮೃತಮಹೋತ್ಸವದ ಸಂಭ್ರಮದಲ್ಲಿರುವುದೇ ಸಂಸ್ಥೆಯ ಹಿರಿಮೆಯಾಗಿದೆ ಎಂದು ಕನ್ನಡ ಸಂಘ ಸಾಂತಕ್ರೂಜ್ ಅಧ್ಯಕ್ಷ ಎಲ್.ವಿ ಅವಿೂನ್ ನುಡಿದರು.

ಇಂದಿಲ್ಲಿ ಮಂಗಳವಾರ ಬೆಳಿಗ್ಗೆ ತನ್ನ ವಕೋಲಾ ಅಲ್ಲಿನ ಸ್ವಕಚೇರಿಯಲ್ಲಿ ಸಂಘದ ಕಚೇರಿಯಲ್ಲಿ ರಾಷ್ಟ್ರದ 71ನೇ ಸ್ವಾತಂತ್ರ್ಯೋತ್ಸವವನ್ನು ಶ್ರದ್ಧೆಯಿಂದ ಸಂಭ್ರಮಿಸಿದ ಶುಭಾವಸರದಲ್ಲಿ ರಾಷ್ಟ್ರಗೀತೆಯೊಂದಿಗೆ ಧ್ವಜರೋಹಣ ನೇರವೇರಿಸಿ ತನ್ನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಿ ಎಲ್‍ವಿ ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಾದರೂ ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತರೆಣಿಸಿದರೂ ನಮ್ಮವರಿಗೆ ನಮ್ಮವರಿಂದಾಗುವ ದಬ್ಬಾಳಿಕೆಯೇ ಜಾಸ್ತಿಯಾಗಿದೆ. ಆದರೂ ಇತ್ತೀಚಿನ ದಿನಗಳಿಂದ ಇದೂ ಕ್ಷಿಣಿಸುತ್ತಿದೆ. ಅಂತೆಯೇ ಎಲ್ಲಾವಿಧಗಳಿಂದಲೂ ಭ್ರಷ್ಟಾಚಾರ ಮುಕ್ತವಾಗಿ ದೇಶವು ನವನಿರ್ಮಾನ ಆಗುವಲ್ಲಿ ಭಾರತೀಯರು ಶ್ರಮಿಸಬೇಕು. ರಾಷ್ಟ್ರೀಯ ಆಚರಣೆಗಳು ಪ್ರತೀಯೋರ್ವ ಭಾರತೀಯನಿಗೂ ಅತ್ಯಮೂಲ್ಯ ವಾದದ್ದು. ನಾವು ರಾಷ್ಟ್ರವನ್ನು ಗೌರವಿಸಿ ರಕ್ಷಿಸಿದಾಗಲೇ ರಾಷ್ಟ್ರವೂ ನಮ್ಮ ರಕ್ಷಣೆ ಮಾಡತ್ತದೆ. ಅದಕ್ಕಾಗಿ ವಿಶೇಷವಾಗಿ ಮಕ್ಕಳಲ್ಲಿ ರಾಷ್ಟ್ರಪ್ರೇಮ, ಭಾವೈಕ್ಯತಾ ಭಾವನೆ ಮೂಡಿಸಿ ಬೆಳೆಸಬೇಕು. ಮಾನವೀಯ ನೆಲೆಗಟ್ಟಿನ ಮೇಲೆ ಸಮನ್ವಯ ದೃಷ್ಟಿಕೋನದಿಂದ ಬದುಕನ್ನು ಬೆಸೆಯುವಲ್ಲಿ ಶ್ರಮಿಸಬೇಕು ಎಂದರು.

ಈ ಶುಭಾವಸರದಲ್ಲಿ ಸಂಘದ ಗೌರವ ಕೋಶಾಧಿಕಾರಿ ಸಿಎ| ರಮೇಶ್ ಎ.ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶಿವರಾಮ ಕೋಟ್ಯಾನ್, ಜಿ.ಆರ್ ಬಂಗೇರ, ಸುಮಾ ಎಂ.ಪೂಜಾರಿ, ಶಿಕ್ಷಣ ಸಮಿತಿ ಕಾರ್ಯದರ್ಶಿ ಸುಧಾಕರ್ ಉಚ್ಚಿಲ್, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಲಕ್ಷ್ಮೀ ಎನ್.ಕೋಟ್ಯಾನ್ ಸದಸ್ಯರುಗಳಾದ ಲಿಂಗಪ್ಪ ಅವಿೂನ್, ಚಂದಯ್ಯ ಪೂಜಾರಿ, ಗಿರೀಶ್ ಶೆಟ್ಟಿ, ಇರಾ ಲಾಲ್, ಶೋಭಾ ಶೆಟ್ಟಿ, ಯಾದವ ಶೆಟ್ಟಿ, ದಿವ್ಯಾ ಶೆಟ್ಟಿ, ಜೋತ್ಸಾ ್ಯ ಶೆಟ್ಟಿ, ಮೋನಪ್ಪ ಕರ್ಕೇರ ಹಾಗೂ ಪರಿಸರದ ಇನ್ನಿತರ ರಾಷ್ಟ್ರಪ್ರೇಮಿಗಳು ಉಪಸ್ಥಿತರಿದ್ದರು.

ಸಂಘದ ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here