Saturday 20th, April 2024
canara news

ಧರ್ಮಸ್ಥಳದಲ್ಲಿ ಶೇಣಿ ಸಂಸ್ಮರಣೆ : ಯಕ್ಷಗಾನ ಕಲಾವಿದರು ಪಾತ್ರಗಳಿಗೆ ಜೀವಂತಿಕೆ ತುಂಬಬೇಕು: ವೀರೇಂದ್ರ ಹೆಗ್ಗಡೆ

Published On : 21 Aug 2017   |  Reported By : Rons Bantwal


ಮುಂಬಯಿ, ಆ.21: ಯಕ್ಷಗಾನ ಕಲಾವಿದರು ಪರಕಾಯ ಪ್ರವೇಶ ಮಾಡಿ ಪಾತ್ರಗಳಿಗೆ ಜೀವಂತಿಕೆ ತುಂಬುವ ಪ್ರಯತ್ನ ಮಾಡಬೇಕು. ನಿತ್ಯವೂ ಕಲಿತು ಕಲೆಯನ್ನು ಉಳಿಸಿ ಬೆಳೆಸಬೇಕು ಎಂದÀು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಕರೆಯಿತ್ತರು.

ಸುರತ್ಕಲ್‍ನ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್‍ನ ಆಶ್ರಯದಲ್ಲಿ ಇಂದಿಲ್ಲಿ ಸೋಮವಾರ ಧರ್ಮಸ್ಥಳದಲ್ಲಿ ಆಯೋಜಿಸಲಾದ ಶೇಣಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಎಮ್.ಕೆ .ರಮೇಶ ಆಚಾರ್ಯ ಅವರನ್ನು ಸನ್ಮಾನಿಸಿ ಶೇಣಿ ಸಂಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಾ| ಹೆಗ್ಗಡೆ ಮಾತನಾಡಿದರು.

ಕಲಾವಿದರು ಪರಕಾಯ ಪ್ರವೇಶ ಮಾಡಿ ಆ ಪಾತ್ರವಾಗಿಯೇ ರಂಗಸ್ಥಳಕ್ಕೆ ಬರಬೇಕು. ಪಾತ್ರಧಾರಿಯಾಗುವ ಬದಲು ಪಾತ್ರವಾಗಿಯೇ ಮಾತನಾಡಬೇಕು, ಅಭಿನಯಿಸಬೇಕು. ಹರಿಕಥೆ, ತಾಳಮದ್ದಳೆ ಹಾಗೂ ಯಕ್ಷಗಾನದಲ್ಲಿ ಪರಿಣತರಾಗಿ ಅಪಾರ ಪಾಂಡಿತ್ಯ ಮತ್ತು ಪ್ರೌಢ ಅನುಭವ ಹೊಂದಿದ ಶೇಣಿ ಗೋಪಾಲಕೃಷ್ಣ ಭಟ್ ಯಕ್ಷಗಾನ ಕಲೆಗೆ ಮೌಲ್ಯ ತುಂಬಿದರು. ಅವರ ವಾಕ್ ಚಾತುರ್ಯದಿಂದ ಯಕ್ಷಗಾನ ಕಲೆಯ ದಿಗ್ಗಜರಾಗಿ ಮೆರೆದರು, ವಿಜೃಂಭಿಸಿದರು. ಇಂತಹ ಶ್ರೇಷ್ಠ ಕಲಾವಿದರಿಂದಾಗಿ ಕೌತುಕವಾಗಿದ್ದ ಯಕ್ಷಗಾನ ಬೌದ್ಧಿಕವಾಗ ಪ್ರಬುದ್ಧರಾದ ಹಾಗೂ ವಿಮರ್ಶಕರಾದ ಅಭಿಮಾನಿಗಳಿUಂದ ಸೆಳೆಯುವಲ್ಲಿ ಯಶಸ್ವಿ ಆಯಿತು. ಧರ್ಮಸ್ಥಳ ಮೇಳದಲ್ಲಿ ಕೂಡಾ ಶೇಣಿ ಸಲ್ಲಿಸಿದ ಸೇವೆಯನ್ನು ಹೆಗ್ಗಡೆಯವರು ಸ್ಮರಿಸಿದರು.

ಹರಿದಾಸ ಗಂಭೀರ, ಪಿ.ವಿ ರಾವ್, ಮತ್ತು ಭುಜಬಲಿ ಧರ್ಮಸ್ಥಳ ಅಭಿನಂದನಾ ಭಾಷಣ ಮಾಡಿದರು. ಹಿರಿಯ ಯಕ್ಷಗಾನ ಕಲಾವಿದ ಎಮ್.ಕೆ .ರಮೇಶ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ ಎಂ.ಕೆ ರಮೇಶ ಆಚಾರ್ಯ ಯಕ್ಷಗಾನ ರಂಗದಲ್ಲಿ ತನಗೆ ನೋವಿಗಿಂತ ಹೆಚ್ಚು ನಲಿವೇ ಸಿಕ್ಕಿದೆ. ಆಥಿರ್üಕ ಸಂಗ್ರಹಕ್ಕಿಂತಲೂ ಸಜ್ಜನರ ಅಭಿಮಾನ ಮತ್ತು ಪ್ರೋತ್ಸಾಹ ಪಡೆದಿರುವುದು ತನಗೆ ಅತ್ಯಂತ ತೃಪ್ತಿ ಮತ್ತು ಸಂತೋಷವನ್ನುಂಟುಮಾಡಿದೆ ಎಂದರು. ತಾನು ಶೇಣಿ ಒಡನಾಡಿಯಾಗಿ 19 ವರ್ಷಗಳ ಕಾಲ ಕಲಾ ಸೇವೆ ಮಾಡಿರುವುದನ್ನು ಸ್ಮರಿಸಿದ ಅವರು ಶೇಣಿ ಯಕ್ಷಗಾನ ರಂಗದ ಶಕ ಪುರುಷ ಎಂದು ಬಣ್ಣಿಸಿದರು.

ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಹರಿಕೃಷ್ಣ ಪುನರೂರು ಧನ್ಯವಾದವಿತ್ತರು. ಬಳಿಕ "ಸತ್ಯ ಹರಿಶ್ಚಂದ್ರ" ಯಕ್ಷಗಾನ ಬಯಲಾಟ ನಡಯಿತು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here