Thursday 25th, April 2024
canara news

ಬಾರ್ಕೂರುನ ಕಚ್ಚೂರು ನಾಗೇಶ್ವರ ದೇವಸ್ಥಾನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ

Published On : 28 Aug 2017   |  Reported By : Rons Bantwal


ಕಚ್ಚೂರು ನಾಗೇಶ್ವರ ದೇವಸ್ಥಾನ ಅತ್ಯಂತ ಕಾರಣಿಕ ಕ್ಷೇತ್ರ : ಸಚಿವ ಮಧ್ವರಾಜ್

(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಮಾ.27: ಪುರಾಣಿಕವಾಗಿ ಅತ್ಯಂತ ಕಾರಣಿಕ ಕ್ಷೇತ್ರ ಎಂದೇ ಮಾನ್ಯಗೊಂಡ ಕಚ್ಚೂರು ನಾಗೇಶ್ವರ ದೇವಸ್ಥಾನ ಒಂದು ಮಹಿಮಾ ಕ್ಷೇತ್ರವಾಗಿದೆ. ಆದುದರಿಂದಲೇ ರಾಜ್ಯದ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಯಾವುದೇ ಸಮಾಜಕ್ಕೂ ನೀಡದ ದೇಣಿಗೆಯನ್ನು ಈ ಕ್ಷೇತ್ರಕ್ಕೆ ನೀಡಿದ್ದಾರೆ. ಇದು ಇಲ್ಲಿಯ ಕಾರಣಿಕಕ್ಕೆ ಸಾಕ್ಷಿ ಆಗಿದೆ ಎಂದು ಕರ್ನಾಟಕ ರಾಜ್ಯದ ಮೀನುಗಾರಿಕಾ, ಯುವಜನಸೇವೆ-ಕ್ರೀಡೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಇಂದಿಲ್ಲಿ ಭಾನುವಾರ ಉಡುಪಿ ಬಾರ್ಕೂರು ಅಲ್ಲಿನ ಕಚ್ಚೂರು ಶ್ರೀನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಭಂಡಾರಿ ಮಹಾಮಂಡಲದ ವತಿಯಿಂದ ಸುಮಾರು ರೂಪಾಯಿ15ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಭಂಡಾರಿ ಸಮುದಾಯ ಭವನ ಮತ್ತು ಸ್ವಾಗತ ಗೋಪುರದ ಶಿಲಾನ್ಯಾಸ ಕಾರ್ಯಕ್ರಮವನನ್ನುದ್ದೇಶಿಸಿ ಸಚಿವ ಮಧ್ವರಾಜ್ ಮಾತನಾಡಿದರು.

ಭಂಡಾರಿ ಮಹಾ ಮಂಡಲದ ಸಂಸ್ಥಾಪಕಧ್ಯಕ್ಷ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ ಹಾಗೂ ನಾಗೇಶ್ವರ ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಸಮಾರಂಭದಲ್ಲಿ ಅರ್ಗನಿಕ್ ಇಂಡಸ್ಟ್ರೀಸ್ ಮುಂಬಯಿ ಇದರ ಆಡಳಿತ ನಿರ್ದೇಶಕ ಆನಂದ್ ಎಂ.ಶೆಟ್ಟಿ ನೂತನ ಸಮುದಾಯ ಭವನಕ್ಕೆ ಶಿಲಾನ್ಯಾಸ ನೆರವೇರಿಸಿ ಶುಭಾರೈಸಿದರು.

ಕಾರ್ಯಕ್ರಮದಲ್ಲಿ ಕಾರ್ಕಳದ ಮಾಜಿ ಶಾಸಕ ಹೆಚ್.ಗೋಪಾಲ ಭಂಡಾರಿ, ವಿಕೇ ಇಂಡಸ್ಟ್ರೀಸ್ ಸಮೂಹ ಮುಂಬಯಿ ಇದರ ಆಡಳಿತ ನಿರ್ದೇಶಕ ಕರುಣಾಕರ್ ಎಂ.ಶೆಟ್ಟಿ, ಸಮಾಜ ಸೇವಕ ಹಾಗೂ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ತುಳು ಚಲನಚಿತ್ರ ನಟ ಹಾಗೂ ನಿರ್ಮಾಪಕ ಡಾ| ರಾಜಶೇಖರ್ ಆರ್.ಕೋಟ್ಯಾನ್, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನ್‍ಚಂದ್ರ ಶೆಟ್ಟಿ, ಭಂಡಾರಿ ಮಹಾ ಮಂಡಲದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಕಾರ್ಯದರ್ಶಿ ಯು.ಸತೀಶ್ ಭಂಡಾರಿ ಕಾಡಬೆಟ್ಟು, ಬಾಲಕೃಷ್ಣ ಪಿ.ಭಂಡಾರಿ ಮುಂಬಯಿ ಮತ್ತು ವಿವಿಧ ವಲಯದ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮುದಾಯ ಬಂಧುಗಳ ಮತ್ತು ಹಿತೈಷಿಗಳ ಹೃನ್ಮದ ಉದಾರತೆಯಿಂದ ಇಂತಹ ಭವ್ಯ ಯೋಜನೆಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಿದೆ. ಸರ್ವರಿಗೂ ಕಚ್ಚೂರು ನಾಗೇಶ್ವರ ದೇವರು ಅನುಗ್ರಹಿಸಲಿ ಎಂದು ಕಡಂದಲೆ ಸುರೇಶ್ ಭಂಡಾರಿ ಅಧ್ಯಕ್ಷೀಯ ನುಡಿಗಳನ್ನಾಡಿ ತಿಳಿಸಿದರು.

ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ತಂತ್ರಿಗಳಾದ ಬ್ರಹ್ಮಶ್ರೀ ಶ್ರೀಕಾಂತ ಸಾಮಗ ಪ್ರಧಾನ ಪೂಜೆ ನೆರವೇರಿಸಿದ್ದು, ಪ್ರಧಾನ ಅರ್ಚಕ ವಿಶ್ವನಾಥ ಶಾಸ್ತ್ರಿ ಪೂಜಾಧಿಗಳನ್ನು ನಡೆಸಿ ತೀರ್ಥ ಪ್ರಸದಾವನ್ನಿತ್ತು ಹರಸಿದರು. ನಿರಂಜನ ಭಂಡಾರಿ ಮತ್ತು ವನಿತಾ ನಿರಂಜನ್ ದಂಪತಿ ಪೂಜಾಧಿಗಳ ಜಯಮಾನತ್ವ ವಹಿಸಿದ್ದರು.

ಸಮಾರಂಭದಲ್ಲಿ ಭಂಡಾರಿ ಸೇವಾ ಸಂಘ ಮುಂಬಯಿ ಅಧ್ಯಕ್ಷ ನ್ಯಾ| ಶೇಖರ್ ಪಿ.ಭಂಡಾರಿ, ನಾಗೇಶ್ವರ ದೇವಸ್ಥಾನದ 2017ನೇ ವಾರ್ಷಿಕೋತ್ಸವ ಸಮಿತಿ ಮುಂಬಯಿ ಅಧ್ಯಕ್ಷ ಡಾ| ಅತ್ತೂರು ಶಿವರಾಮ ಕೆ.ಭಂಡಾರಿ, ಕಡಂದಲೆ ಶೋಭಾ ಎಸ್.ಭಂಡಾರಿ ಕಡಂದಲೆ ಸೌರಭ್ ಎಸ್.ಭಂಡಾರಿ, ದೇವಸ್ಥಾನ ಸಮಿತಿ ಮತ್ತು ಸೇವಾ ಟ್ರಸ್ಟ್‍ನ ಇತರೇ ಪದಾಧಿಕಾರಿಗಳು ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಅಮಿತಾ ಗಿರೀಶ್ ಭಂಡಾರಿ ಪ್ರಾರ್ಥನೆಯನ್ನಾಡಿದರು. ಟ್ರಸ್ಟ್‍ನ ಕೋಶಾಧಿಕಾರಿ ಸಂಜೀವ ಭಂಡಾರಿ ಬನ್ನಂಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಭಂಡಾರಿ ಅತಿಥಿüಗಳನ್ನು ಪರಿಚಯಿಸಿ ಗೌರವಿಸಿದರು. ಸೇವಾ ಟ್ರಸ್ಟ್‍ನ ಕಾರ್ಯದರ್ಶಿ ಸೋಮಶೇಖರ ಎಂ.ಭಂಡಾರಿ ಧನ್ಯವದಿಸಿದರು.


 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here