Wednesday 24th, April 2024
canara news

ದೇವಮಾನವನನ್ನು ಜೈಲಿಗಟ್ಟಿದ ಕಾಸರಗೋಡಿನ ಸಿಬಿಐ ಅಧಿಕಾರಿ ನಾರಾಯಣನ್

Published On : 29 Aug 2017   |  Reported By : Canaranews Network


ಮಂಗಳೂರು: ದೇರಾ ಸಚ್ಚಾ ಸೌದದ ಮುಖ್ಯಸ್ಥ, ಸ್ವಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಬಂಧನ, ಶಿಕ್ಷೆ, ದೇಶಾದ್ಯಂತ ಚರ್ಚೆಯಾಗುತ್ತಿದೆ. ಭಾರೀ ಜನ ಬೆಂಬಲ, ರಾಜಕೀಯ, ಅಧಿಕಾರಿ ವಲಯದಲ್ಲೂ ಪ್ರಭಾವಿಯಾಗಿದ್ದ ಸಿಂಗ್ ನನ್ನು ಜೈಲುಗಟ್ಟುವುದರ ಹಿಂದೆ ಸಿಬಿಐ ಅಧಿಕಾರಿಯೊಬ್ಬರು ಆಹೋರಾತ್ರಿ ಕಾರ್ಯಾಚರಣೆ ನಡೆಸಿರುವುದು ಬೆಳಕಿಗೆ ಬಂದಿದೆ.

ಕಾಸರಗೋಡು ಜಿಲ್ಲೆಯ ಉಪ್ಪಳ ಮುಳಿಂಜ ನಿವಾಸಿ ಮುಳಿಂಜ ನಾರಾಯಣನ್ (65) ಎಂಬವರೇ ಈ ಅಧಿಕಾರಿ.1970 ರಲ್ಲಿ ಕಾಸರಗೋಡಿನ ವಿದ್ಯಾನಗರ ಸರಕಾರಿ ಕಾಲೇಜಿನ ವಿಜ್ಞಾನ ಪದವಿ ಪಡೆದ ಬಳಿಕ ನಾರಾಯಣನ್ ರು ಸಿಬಿಐಗೆ ಸೇರ್ಪಡೆಯಾಗಿದ್ದರು. ಅವರು ಎಸ್.ಐ. ರ್ಯಾಂಕ್ ನಿಂದ ಸಿಬಿಐನಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ತಮ್ಮ ದಕ್ಷ ಸೇವೆಯಿಂದ ಭಡ್ತಿ ಪಡೆಯುತ್ತಾ ಹೋದ ಅವರು ಸಿಬಿಐ ಡಿಐಜಿ ಹುದ್ದೆಗೇರಿ ನಂತರ ಸೇವೆಯಿಂದ ನಿವೃತ್ತರಾಗಿದ್ದರು. ಸದ್ಯ ನಾರಾಯಣನ್ ರು ದೆಹಲಿಯಲ್ಲಿ ವಾಸವಾಗಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here