Thursday 25th, April 2024
canara news

ಮಹಾರಾಷ್ಟ್ರ ರಾಜ್ಯದಾದ್ಯಂತ ಭಯಾನಕ ಭೀತಿ ತಂದ ಮುಸಲಧಾರೆ

Published On : 29 Aug 2017   |  Reported By : Rons Bantwal


ಎಲ್ಲೂ ಗಣಪತಿ ವಿಸರ್ಜಿಸಿ: ಬಿಎಂಸಿ - ನಿತ್ಯಾನಂದರ ನಿವಾಸವೂ ಜಲಾವೃತ

(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಆ. 29, ವಾಣಿಜ್ಯನಗರಿ ಮುಂಬಯಿ ಇಂದು ಅಕ್ಷರಶಃ ಸಾಗರವಾಗಿ ಪರಿಣಮಿಸಿತ್ತು. ಕಾರಣ ಕಳೆದ ಸೋಮವಾರ ರಾತ್ರಿಯಿಂದಲೇ ಭಾರೀ ಪ್ರಮಾಣದ ಮಳೆ ಸುರಿದ ಪರಿಣಾಮ ರಾಷ್ಟ್ರದ ಆಥಿರ್üಕ ರಾಜಧಾನಿ ಮುಂಬಯಿ ಜನತೆ ನಿರುಪಯೋಗ ಪಡುವಂತಾಯಿತು.

ಮಹಾರಾಷ್ಟ್ರ ರಾಜ್ಯದಾತ್ಯಂತದಲ್ಲೇ ಭಯ ತಂದೊದಗಿಸಿದ ಮುಸಲಧಾರೆಯು ಬೃಹನ್ಮುಂಬಯಿ ಮಹಾನಗರದ ಜನತೆಯನ್ನು ತಲ್ಲಣ ಗೊಳಿಸಿ ಭೀತಿಯನ್ನೇ ಸೃಷ್ಠಿಸಿತು. ಸುಮಾರು ಹನ್ನೆರಡು ವರ್ಷಗಳ ಬಳಿಕದ ಭೀಕರ ಮಳೆ ಇದಾಗಿದ್ದು ಕೇವಲ ಇಪ್ಪತ್ತ ಮೂರು ತಾಸುಗಳಲ್ಲಿ ಕ್ಷಣ ಬಿಡದೆ 212 ಸೆಂಟಿ ಮೀಟರ್ ಮಳೆ ಸುರಿದು ಮತ್ತೊಂದು ದಾಖಲೆ ನಿರ್ಮಿಸಿತು. ಮಳೆಯ ರಭಸಕ್ಕೆ ಗಟಾರಗಳÀು ತುಂಬಿತುಳುಕಿ ರಸ್ತೆ, ಮೈದಾನಗಳನ್ನೇ ಆವರಿಸಿ ಜಲಾವೃತಗೊಂಡವು.

ಕೆಲಸಕ್ಕೆಂದು ಕಛೇರಿ ಸೇರಿದವರು ರೈಲು, ಬಸ್ಸು, ವಾಹನಗಳಲ್ಲಿ ಹತ್ತಾರು ಗಂಟೆಗಳ ಕಾಲ ಬಂಧಿತರಾದರೆ ಮಕ್ಕಳ ಪಾಲಕರು ಮಕ್ಕಳನ್ನು ಹುಡುಕಿಕೊಂಡು ಬರುವಷ್ಟರಲ್ಲಿ ಅವರೂ ನೆರೆಗೆ ಸಿಕ್ಕಾಕಿ ಕೊಂಡರು. ಕೆಲವರಂತು ತಮ್ಮ ರಕ್ಷಣೆಗೆ ನೀರಿನಿಂದ ಕಾಲ್ಕಿತ್ತರು. ಎಸಿ ಬಳಸಿ ಕಾರುಗಳಲ್ಲಿ ಓಡಾಡುತ್ತಿರುವರೂ ನೀರಿನ ಅರ್ಭಟಕ್ಕೆ ಸಿಲುಕಿ ನೀರಿನ ಮಟ್ಟ ಏರಿದಂತೆ ಕಾರೂಗಳನ್ನೇ ಬಿಟ್ಟು ಪರಾರಿಯಾದರು. ರೈಲು, ಬಸ್ಸು, ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡ ಕಾರಣ ರಸ್ತೆಗಳ ಮಧ್ಯೆಯಲ್ಲೆ ಸಿಲುಕಿದ ಪ್ರಯಾಣಿಕರು ಹಸಿವಿನಿಂದ ತಡಪಡಿಸಿದರು. ದಿನಪೂರ್ತಿ ಕಾರ್ಮೋಡದಿಂದ ಕೂಡಿದ ಮಹಾನಗರದ ಬಾಂದ್ರಾ ಸಾಂತಕ್ರೂಜ್ ಅಂಧೇರಿ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯೂ ಇಲ್ಲವಾಗಿ ಕತ್ತಲೆಯಲ್ಲೇ ಕಾಲ ಕಳೆಯುವಂತಾಯಿತು.

ಎಲ್ಲೆಲ್ಲೂ ಗಣಪತಿ ವಿಸರ್ಜಿಸಿ-ಬಿಎಂಸಿ ಮನವಿ:
ಇಂದು ಐದನೇ ದಿನದ ಗಣಪತಿ ವಿಸಜನೆಯಾದ ಕಾರಣ ಮುಸಲಧಾರೆಯ ಅಬ್ಬರಕ್ಕೆ ಜಲಾವೃತಗೊಂಡ ಮುಂಬಯಿಯಲ್ಲಿ ಗಣಪತಿ ವಿಸರ್ಜನಾ ವಿಧಿ ಪ್ರೆಶ್ನಾರ್ಥಕವಾಯಿತು. ಇದನ್ನರಿತ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ)ಯು ಮುನ್ನಚ್ಚರಿಕೆಯಾಗಿಸಿ ಯಾರೂ ಜಲಾವೃತ ಜಾಗಗಳಿಗೆ ತೆರಳದಂತೆ ಕಟ್ಟೆಚ್ಚರ ನೀಡಿ ತಮ್ಮತಮ್ಮ ಸ್ಥಳಿಯ ಕೆರೆ, ನದಿ, ಸಮುದ್ರಗಳಲ್ಲೇ ಗಣಪತಿ ವಿಸರ್ಜನೆ ಮಾಡುವಂತೆ ಗಣೇಶ ಭಕ್ತರಲ್ಲಿ ಮನವಿ ಮಾಡಿತು.

ನಿತ್ಯಾನಂದರ ನಿವಾಸ ಜಲಾವೃತ:
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅವರ ಸಾಂತಕ್ರೂಜ್ ಪೂರ್ವದ ವಕೋಲಾ ಅಲ್ಲಿನ ಚೈತನ್ಯನಗರದಲ್ಲಿನ ಸ್ನೇಹ ಹೌಸಿಂಗ್ ಸೊಸೈಟಿ ಅವಾರಣವೂ ಸಂಪೂರ್ಣವಾಗಿ ಜಲಾವೃತ ಗೊಂಡಿದ್ದು ರಾತ್ರಿ ವರೆಗೂ ಈ ಕಾಂಪೌಂಡ್‍ನಿಂದ ಯಾರೂ ಮನೆಯಿಂದ ಹೊರಒಳ ಬರಲು ಸಾಧ್ಯವಾಗದೇ ಪರದಾಡ ಬೇಕಾಯಿತು.

 

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here