Friday 29th, March 2024
canara news

ಚೆಂಬೂರುನ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಕೂಟ ಮಹಾಜಗತ್ತು ಮುಂಬಯಿ ಅಂಗ ಸಂಸ್ಥೆಯ 8ನೇ ವಾರ್ಷಿಕ ಮಹಾಸಭೆ-ಶ್ರೀ ಸತ್ಯನಾರಾಯಣ ಮಹಾಪೂಜೆ

Published On : 05 Sep 2017   |  Reported By : Rons Bantwal


ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಸೆ.04: ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಮುಂಬಯಿ ಅಂಗ ಸಂಸ್ಥೆಯು ಇಂದಿಲ್ಲಿ ರವಿವಾರ ಬೆಳಿಗ್ಗೆ ಚೆಂಬೂರು ಇಲ್ಲಿನ ಛೆಡಾ ನಗರದ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ಸತ್ಯನಾರಾಯಣ ಮಹಾ ಪೂಜೆ ಸಂಪನ್ನಗೊಳಿಸಿತು. ಬಳಿಕ ಸಂಸ್ಥೆಯ ಅಧ್ಯಕ್ಷ ಯು.ಎನ್ ಐತಾಳ್ ಅಧ್ಯಕ್ಷತೆಯಲ್ಲಿ ಎಂಟನೇ ವಾರ್ಷಿಕ ಮಹಾಸಭೆ ಜರುಗಿಸಿತು.

ಮಠದ ನಾಗ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಪುರೋಹಿತ ಸುಬ್ರಹ್ಮಣ್ಯ ಐತಾಳ ತಮ್ಮ ಪೌರೋಹಿತ್ಯದಲ್ಲಿ ಮುಂಬಯಿ ಅಂಗ ಸಂಸ್ಥೆಯ ವಾರ್ಷಿಕ ಶ್ರೀ ಸತ್ಯಾನಾರಾಯಣ ಮಹಾ ಪೂಜೆ ನೆರವೇರಿಸಿ ಅನುಗ್ರಹಿಸಿದರು. ರವಿ ರಾವ್ ಮತ್ತು ವೀಣಾ ಆರ್.ರಾವ್ ದಂಪತಿ ಪೂಜಾಧಿಗಳಲ್ಲಿ ಸಹಭಾಗಿಗಳಾಗಿದ್ದರು. ಅತ್ಯಾಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಸಂಸ್ಥೆಯ ಸದಸ್ಯರು, ಕೂಟ ಬಂಧುಗಳು ಪೂಜಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿದರು.

ಪೂರ್ವಾಹ್ನ ಯು.ಎನ್ ಐತಾಳ್ ತನ್ನ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಸಿದ್ದು, ಮುಂಬಯಿ ಅಂಗ ಸಂಸ್ಥೆಯ ಉಪಾಧ್ಯಕ್ಷ ಪಿ.ವಿ ಐತಾಳ, ಜೊತೆ ಕಾರ್ಯದರ್ಶಿ ಶ್ರೀಮತಿ ನಾಗರತ್ನ ಹೊಳ್ಳ, ಆಡಳಿತ ವಿಶ್ವಸ್ಥ ಸದಸ್ಯರುಗಳಾದ ಹೆಚ್.ಕೆ ಕಾರಂತ್ ಮತ್ತು ರಮೇಶ್ ಎಂ.ರಾವ್ ವೇದಿಕೆಯಲ್ಲಿ ಆಸೀನರಾಗಿದ್ದು, ಕಾರ್ಯದರ್ಶಿ ಮತ್ತು ಕೂಟ ಬ್ರಾಹ್ಮಣರ ಮುಖವಾಣಿ ಗುರು ನರಸಿಂಹವಾಣಿ ತ್ರೈಮಾಸಿಕದ ಸಂಪಾದಕ ಪಿ.ಸಿ.ಎನ್ ರಾವ್ ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿ ವರ್ಷಾವಧಿ ಕಾರ್ಯಕ್ರಮಗಳ ಸ್ಥೂಲ ಮಾಹಿತಿಯನ್ನಿತ್ತÀರು. ಕೋಶಾಧಿಕಾರಿ ದೀಪಕ್ ಕಾರಂತ್ ಗತವಾರ್ಷಿಕ ಲೆಕ್ಕಪತ್ರಗಳ ಮಾಹಿತಿ ಮಂಡಿಸಿದರು.

ಮಹಾಸಭೆಯಲ್ಲಿ ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಕೇಂದ್ರ ಸಮಿತಿ ಅಧ್ಯಕ್ಷ ಪಿ.ವೆಂಕಟ ರಾವ್, ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್'ಸ್ ಅಸೋಸಿಯೇಶನ್‍ನ ಅಧ್ಯಕ್ಷ ಹಾಗೂ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ವಿಶ್ವಸ್ಥ ಕಾರ್ಯಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಪ್ರಧಾನ ಅಭ್ಯಾಗತರಾಗಿ ಉಪಸ್ಥಿತರಿದ್ದು ಮುಂಬಯಿ ಅಂಗ ಸಂಸ್ಥೆಯ ಪದಾಧಿಕಾರಿಗಳು ಅವರಿಗೆ ಸ್ಮರಣಿಕೆ, ಪುಷ್ಫಗುಪ್ಚ ನೀಡಿ ಗೌರವಿಸಿದರು. ಅತಿಥಿüಗಳು ಸಂದರ್ಭೋಚಿತವಾಗಿ ಮಾತನಾಡಿ ಸಂಸ್ಥೆಯ ಸೇವೆಯನ್ನು ಪ್ರಶಂಸಿಸಿ ಶೀಘ್ರವೇ ಸಂಸ್ಥೆಯು ಸ್ವಂತಿಕೆಯ ಕೂಟ ಬಂಧು ಭವನ ರೂಪಿಸುವಂತಾಗಲಿ ಎಂದು ಹಾರೈಸಿದರು.

ಇದೇ ಶ್ಶುಭಾವಸರದಲ್ಲಿ ಸಂಸ್ಥೆಯಿಂದ ವಾರ್ಷಿಕವಾಗಿ ಕೊಡಮಾಡುವ ಪ್ರತಿಭಾ ಪುರಸ್ಕಾರವನ್ನು ಕು| ಅನಿಷಾ ಆರ್.ಹೆರಳ, ರಕ್ಷಿತ್ ರವಿ ರಾವ್, ಶಶಾಂಕ್ ಪತ್ತುಮುಡಿ, ಕು| ಪವಿತ್ರ ಎಸ್.ಹೊಳ್ಳ, ಕು| ಅರ್ಪಿತಾ ಬಂಟ್ವಾಳ, ವಿನಯ ರವಿ ಕಾರಂತ್ ಅವರಿಗೆ ಪ್ರದಾನಿಸಿದರು ಹಾಗೂ ಮಕ್ಕಳಿಗೆ ವೇತನನಿಧಿ ಹಸ್ತಾಂತರಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರನೇಕರು ಹಾಜರಿದ್ದು, ನಾಗರತ್ನ ಹೊಳ್ಳ ಪ್ರಾರ್ಥನೆಗೈದರು. ಪಿ.ವಿ ಐತಾಳ ಸಭಾ ಕಲಾಪ ನಡೆಸಿ ಪ್ರತಿಭಾನ್ವಿತ ಮಕ್ಕಳ ಯಾದಿ ವಾಚಿಸಿದರು. ಪಿ.ಸಿ.ಎನ್ ರಾವ್ ವಂದಿಸಿದರು.

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here