Saturday 20th, April 2024
canara news

ಸೋಷಿಯಲ್ ಮೀಡಿಯಾದಲ್ಲಿರುವ ಜನರಿಗೆ ಗೌರಿಯ ಅಂತಃಕರಣ ತಿಳಿದಿಲ್ಲ:ಕುಂದಾಪುರ ಪತ್ರಕರ್ತ ಸಂಘದ ಅಧ್ಯಕ್ಷ. ಶಶಿಧರ

Published On : 10 Sep 2017   |  Reported By : Bernard D'Costa


ಕುಂದಾಪುರ: ತನ್ನ ತಂದೆ ಪಿ.ಲಂಕೇಶ್ ಸಾವಿನ ಬಳಿಕ ಅವರ ನಿಲುವುಗಳನ್ನು ಮುಂದುವರೆಸಿಕೊಂಡು ಹೋಗಲು ಐಶರಾಮಿ ಜೀವನವನ್ನು ಬಿಟ್ಟು ಸಂಪೂರ್ಣ ಚಳವಳಿಗಾಗಿ ತೊಡಗಿಸಿಕೊಂಡವರು ಗೌರಿ ಲಂಕೇಶ್. ಒಂದು ಸಣ್ಣ ಪತ್ರಿಕೆಯ ಮೂಲಕ ಇಡೀ ರಾಜ್ಯದಲ್ಲಿ ಹೆಸರು ಗಳಿಸಿದ್ದು ಮಾತ್ರವಲ್ಲದೆ ನಮ್ಮೆಲ್ಲರ ಮನಸ್ಸಿನಲ್ಲಿಯೂ ನೆಲೆ ನಿಂತಿದ್ದಾರೆ. ಇಂದು ಗೌರಿ ಲಂಕೇಶ್ ಹತ್ಯೆಯ ಕುರಿತು ಕೆಲವು ಮಾಧ್ಯಮಗಳು ತನಿಖೆಯ ಹಾದಿ ತಪ್ಪಿಸುತ್ತಿವೆ. ಮಾಧ್ಯಮಗಳ ಈ ನಡೆ ಅತ್ಯಂತ ಖೇದನೀಯ. ಗೌರಿ ಲಂಕೇಶ್ ಟೆರರಿಸ್ಟ್ ಅನ್ನೋ ರೀತಿಯಲ್ಲಿ ಮಾಧ್ಯಮಗಳಲ್ಲಿ ಪ್ಯಾನಲ್ ಡಿಸ್ಕಶನ್ ಆಗುತ್ತಿದೆ ಹೊರತು ಓರ್ವ ದಿಟ್ಟ ಪತ್ರಕರ್ತೆಗೆ ಶ್ರದ್ದಾಂಜಲಿ ಸಲ್ಲಿಸುವ ಕಾರ್ಯಕ್ರಮಗಳು ಆಗುತ್ತಿಲ್ಲವೆಂದು ಪ್ರಗತಿಪರ ಚಿಂತಕ, ಪತ್ರಕರ್ತ ಹಾಗೂ ಗೌರಿ ಲಂಕೇಶ್ ಆಪ್ತ ಶಶಿಧರ ಹೆಮ್ಮಾಡಿ ಕಳವಳ ವ್ಯಕ್ತಪಡಿಸಿದರು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸಮುದಾಯ ಕುಂದಾಪುರ ಇವರ ನೇತೃತ್ವದಲ್ಲಿ ಶುಕ್ರವಾರ ಸಂಜೆ ತಾಲೂಕು ಪಂಚಾಯತ್ ಮುಂಭಾಗದಲ್ಲಿ ನಡೆದ ಪತ್ರಕರ್ತೆ, ಸಂಪಾದಕಿ ಗೌರಿ ಲಂಕೇಶ್ ಅವರಿಗೆ ನುಡಿನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಇಂದು ಸೋಷಿಯಲ್ ಮೀಡಿಯಾದಲ್ಲಿ ಗೌರಿ ಲಂಕೇಶ್ ಅವರನ್ನು ದೇಶದ್ರೋಹಿ, ನಕ್ಸಲೈಟ್ ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿದೆ. ಗಾಂಧೀಜಿ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ನಾರಾಯಣಗುರು ಏನು ಹೇಳಿದ್ದಾರೊ ಅದನ್ನೆ ಗೌರಿ ಲಂಕೇಶ್ ಹೇಳಿದ್ದರು. ಅದಕ್ಕಿಂತ ಒಂದಕ್ಷರನು ಅವರು ಜಾಸ್ತಿ ಹೇಳಿರಲಿಲ್ಲ. ಅಲ್ಲದೇ ನಕ್ಸಲರ ಮನವೊಲಿಸಿ ಅವರನ್ನು ಮುಖ್ಯವಾಹಿನಿಗೆ ಕರೆತರುವ ಕೆಲಸವನ್ನೂ ಗೌರಿ ಲಂಕೇಶ್ ಮಾಡುತ್ತಿದ್ದರು. ಇಂದು ಸೋಷಿಯಲ್ ಮೀಡಿಯಾದಲ್ಲಿರುವ ಜನರಿಗೆ ಗೌರಿಯವರ ಅಂತಃಕರಣ ತಿಳಿದಿಲ್ಲ. ಗೌರಿಯೊಳಗಿನ ಮಾನವೀಯತೆ ಅವರಿಗೆ ಗೊತ್ತಿಲ್ಲ ಎಂದು ಶಶಿಧರ ಹೆಮ್ಮಾಡಿ ನುಡಿದರು.

ಗೌರಿ ಎತ್ತಿದ ಪ್ರಶ್ನೆಗಳನ್ನೆ ನಾವೂ ಎತ್ತುತ್ತೇವೆ: ರಾಮಕೃಷ್ಣ ಹೇರ್ಳೆ

ಇಡೀ ರಾಜ್ಯದ ಜನರು ಕಾದು ಕೂತು ಓದುವ ಪತ್ರಿಕೆಯನ್ನು ಗೌರಿ ಲಂಕೇಶ್ ಕೊಟ್ಟಿದ್ದರು. ಮಾನವೀಯ ಸಹಬಾಳ್ವೆ, ಶಾಂತಿಗಾಗಿ ಹೋರಾಡುತ್ತಿರುವ ಓರ್ವ ಸಾಮಾನ್ಯ ಮಹಿಳೆಯನ್ನು ಕದ್ದುಮುಚ್ಚಿ ಗುಂಡಿಕ್ಕಿ ಕೊಲೆ ಮಾಡರುವುದು ಅವರಲ್ಲಿನ ಭಂಡತನಕ್ಕೆ ಉದಾಹರಣೆ ಎಂದು ಪತ್ರಕರ್ತ, ಚಿಂತಕ ರಾಮಕೃಷ್ಣ ಹೇರ್ಳೆ ಕಿಡಿಕಾರಿದರು.

ಒಂದು ಗೌರಿಯನ್ನು ಕೊಂದರೆ ವಿಚಾರಗಳು, ಚಿಂತನೆಗಳು ನಾಶವಾಗಬಹುದು ಎಂದು ಹಂತಕರು ಅಂದುಕೊಂಡಿರಬಹುದು. ಪನ್ಸಾರೆ, ದಾಬೋಲ್ಕರ್, ಕಲ್ಬುರ್ಗಿಯ ಹತ್ಯೆಯ ಬಳಿಕ ಹೇಗೆ ಗೌರಿ ಅದೇ ವಿಚಾರಗಳನ್ನು ಎತ್ತಿ ಪ್ರಶ್ನೆ ಮಡುತ್ತಿದ್ದರೊ ಗೌರಿ ಹತ್ಯೆ ಬಳಿಕ ನಾವೆಲ್ಲರೂ ಅದನ್ನು ಮುಂದುವರೆಸುತ್ತೇವೆ. ಒಬ್ಬರನ್ನು ಕೊಲ್ಲುವುದರಿಂದ ವಿಚಾರಗಳು, ಚಿಂತನೆಗಳು ಸಾಯುವುದಿಲ್ಲ ಎಂದು ರಾಮಕೃಷ್ಣ ಹೇರ್ಳೆ ಹೇಳಿದರು.

ಗಾಂಧಿ ಕೊಂದವರೆ ಗೌರಿಯನ್ನು ಕೊಂದವರು: ಪೆÇ್ರ. ಹಯವದನ್ ಮೂಡಸಗ್ರಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಗಾಂಧಿ ಸಂತತಿ ಜಾಸ್ತಿಯಾಗಬೇಕಿತ್ತು, ಬದಲಾಗಿ ಗೋಡ್ಸೆ ಸಂತತಿಗಳು ಜಾಸ್ತಿಯಾಗುತ್ತಿವೆ. ಗೌರಿ ಹತ್ಯೆಯಿಂದ ನಾವೆಲ್ಲರೂ ಕ್ಷಣ ಕಾಲ ವಿಚಲಿತರಾಗಿದ್ದೇವೆ. ಆದರೆ ನಾವು ಖಂಡಿತ ಹೆದರೋದಿಲ್ಲ. ಗೌರಿ ಲಂಕೇಶ್ ಮಾಡಿರುವುದು ನೂರಕ್ಕೆ ನೂರು ಸರಿ. ಗಾಂಧಿ ಕಲಿಸಿದ ಭಾರತ ನಮಗೆ ಬೇಕು. ಇದಕ್ಕಾಗಿ ಹೋರಾಟ ಮಾಡುತ್ತೇವೆ. ಗಾಂಧೀಜಿಯನ್ನು ಕೊಂದ ಸಂತತಿಯೇ ಗೌರಿ ಲಂಕೇಶ್ ಅವರನ್ನು ಹತ್ಯೆಗೈದವರು ಎಂದು ಗೌರಿ ಲಂಕೇಶ್ ಆಪ್ತ, ಚಿಂತಕ ಪೆÇ್ರ. ಹಯವದನ್ ಮೂಡಸಗ್ರಿ ಹೇಳಿದರು.

ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ, ಹಿರಿಯ ಪತ್ರಕರ್ತ ಎಎಸ್‍ಎನ್ ಹೆಬ್ಬಾರ್, ಅಭಿಲಾಷ, ಸಮುದಾಯದ ಉದಯ ಗಾಂವ್ಕರ್, ನಗರ ಕಾಂಗ್ರೆಸ್ ಮುಂದಾಳು ವಿನೋದ ಕ್ರಾಸ್ತ, ಕವಿ ಸಚಿನ್ ಅಂಕೋಲಾ ಮುಂತಾದವರು ಮಾತನಾಡಿದರು.

ಮೊಂಬತ್ತಿ ಬೆಳಗಿ ಗೌರಿ ಲಂಕೇಶ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಪತ್ರಕರ್ತರ ಸಂಘದ ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ, ಪತ್ರಕರ್ತರಾದ ಮಝರ್, ಜಾನ್ ಡಿಸೋಜಾ, ಉದಯ ಆಚಾರ್, ಐಶ್ವರ್ಯ ಬೀಜಾಡಿ ರಾಘವೇಂದ್ರ ಬಳ್ಕೂರು, ಸುನೀಲ್ ಬೈಂದೂರು, ದಿನೇಶ್ ರಾಯಪ್ಪನಮಠ, ಕೇಶವ ಸಸಿಹಿತ್ಲು, ಪ್ರಭಾಕರ ಆಚಾರ್, ಸತೀಶ್, ಬರ್ನಾಡ್ ಡಿಕೋಸ್ತಾ, ದಯಾನಾಯಕ್, ಸಮುದಾಯದ ಜಿ.ವಿ ಕಾರಂತ, ಸದಾನಂದ ಬೈಂದೂರು, ಸಂದೇಶ ಕುಂದಾಪುರ, ವಿಕ್ರಮ್, ರಮನಾಥ ಭಂಡಾರಿ, ಶಂಕರ್ ಆನಗಳ್ಳಿ ಡಿವೈಎಫ್‍ಐನ ಸುರೇಶ ಕಲ್ಲಾಗರ, ರಾಜಾ ಬಿಟಿಆರ್, ಗಣೇಶ ಕಲ್ಲಾಗರ ಸ್ಟಾರ್ ಪ್ರೆಂಡ್ಸ್ ನ ಗಣೇಶ್ ಮೆಂಡನ್, ರಾಜಾ ಮಠದಬೆಟ್ಟು ಮುಂತಾದವರು ಉಪಸ್ಥಿತರಿದ್ದರು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here