Thursday 18th, April 2024
canara news

ಭಜನಾ ಕಮ್ಮಟದಲ್ಲಿ ಭಜನಾ ತರಬೇತಿ

Published On : 15 Sep 2017   |  Reported By : Rons Bantwal


ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಗಳಾದ ಪೂಜ್ಯನೀಯ ಡಾ|| ಡಿ ವೀರೇಂದ್ರ ಹೆಗ್ಗೆಡೆಯವರ ಮಾರ್ಗದರ್ಶನದಲ್ಲಿ 11.09.2017 ರಿ0ದ 19 ನೇ ವರ್ಷದ ಭಜನಾ ಕಮ್ಮಟ ತರಬೇತಿಯು ಮಹೋತ್ಸವ ಸಭಾ ಭವನದಲ್ಲಿ ನಡೆಯುತ್ತಿದೆ. ಈ ವರ್ಷ 119 ಭಜನಾ ಮ0ಡಳಿಗಳಿ0ದ 211 ಶಿಬಿರಾರ್ಥಿಗಳು ಭಜನೆಯಲ್ಲಿ ಭಾಗವಹಿಸಿರುತ್ತಾರೆ. ವಿಶೇಷವಾಗಿ 63 ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿರುತ್ತಾರೆ, ಕಳೆದ ಮೂರು ದಿನಗಳಲ್ಲಿ ಶ್ರೀಮತಿ ಮನೋರಮಾ ತೋಳ್ಪಡಿತ್ತಾಯ, ಶ್ರೀಮತಿ ಉಷಾ ಹೆಬ್ಬಾರ್ ಹಾಗೂ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಯವರು ಆಗಮಿಸಿ ಭಜನಾ ತರಬೇತಿಯನ್ನು ನೀಡಿರುತ್ತಾರೆ.

ಈ ದಿನ ಭಜನಾ ಕಮ್ಮಟದ ನಾಲ್ಕನೇ ದಿನವಾಗಿದ್ದು ಪ್ರಪ್ರಥಮ ಬಾರಿಗೆ ಭಜನಾ ಕಮ್ಮಟದಲ್ಲಿ ಉತ್ತರಾದಿ ಶೈಲಿಯ ಭಜನಾ ತರಬೇತಿ ನೀಡಲು ಶ್ರೀ ಪುಟ್ಟರಾಜು ಗವಾಯಿಯವರ ಶಿಷ್ಯರಾದ ಈರಪ್ಪ ಕೆ. ಪತ್ತಾರ್ ರವರ ತ0ಡ ಆಗಮಿಸಿರುತ್ತಾರೆ. ದಿನಾ0ಕ 17.09.2017 ರ0ದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಭಜನಾ ಮ0ಗಳೋತ್ಸವ ನಡೆಯಲಿದ್ದು ಅ0ದಾಜು 300 ಮ0ಡಳಿಗಳಿ0ದ 5000 ಭಜಕರು ಭಾಗವಹಿಸುವ ನಿರೀಕ್ಷೆ ಇದೆ. ದಿನಾಂಕ:15.09.2017 ರಂದು ಬಿ.ಕೆ. ಸುಮಿತ್ರ ಹಾಗೂ 16.09.2017 ರಂದು ಶ್ರೀ ಶಂಕರ ಶ್ಯಾನುಭಾಗ್‍ರವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲಿದ್ದಾರೆ.

ಕಮ್ಮಟದ ಸಂಧರ್ಭದಲ್ಲಿ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು, ಶ್ರೀ ಹರ್ಷೇಂದ್ರಕುಮಾರ್, ಶ್ರೀಮತಿ ಸುಪ್ರಿಯ ಹರ್ಷೇಂದ್ರ ಕುಮಾರ್ ಹಾಗೂ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ, ಶ್ರೀ ಧಾಮ ಮಾಣಿಲ. ಇವರು ಉಪಸ್ಥಿತರಿದ್ದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here