Saturday 20th, April 2024
canara news

ಕುಂದಾಪುರ ಸಂತ ಮೇರಿಸ್ ಶಾಲೆಯಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Published On : 16 Sep 2017   |  Reported By : Bernard J Costa


ಕುಂದಾಪುರ: ಸ್ವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಸಂತ ಮೇರಿಸ್ ಕುಂದಾಪುರದ ಫ್ರೌಢ ಶಾಲೆಯಲ್ಲಿ ಉಡುಪಿ ಜಿಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಛೇರಿ, ಉಡುಪಿ, ಕ್ಷೇತ್ರ  ಶಿಕ್ಷಣಾಧಿಕಾರಿಗಳ ಕಛೇರಿ, ಕುಂದಾಪುರ ವಲಯ, ಮತ್ತು ಕುಂದಾಪುರದ ಫ್ರೌಢ ಶಾಲೆ ಹಾಗೂ ಸಂತ ಮೇರಿಸ್ ಕುಂದಾಪುರದ ಹಿರಿಯ ಪ್ರಾಥಮಿಕ ಶಾಲಾ ವತಿಯಿಂದ ಉಡುಪಿ ಜಿಲ್ಲಾ ಮಟ್ಟದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ  2017 ಸೆ.15 ರಂದು ನೆಡೆಯಿತು.

 

 

 

ಈ ಸಮಾರಂಭವನ್ನು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಿ ‘ಮಕ್ಕಳ ಪ್ರತಿಭೆಗಳನ್ನು ಶಿಕ್ಷಕರು ಎಳೆವೆಯಲ್ಲಿ ಗುರುತಿಸಿ, ಪೆÇ್ರೀತ್ಸಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದು, ಅದಕ್ಕಾಗಿ ಸರಕಾರ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ, ಇಂಥ ಕಾರ್ಯಕ್ರಮಗಳಿಂದ, ಪ್ರತಿಬೆಗಳು ಹೊರ ಬಂದು ನಮ್ಮ ಜಿಲ್ಲೆ ಅಭಿವ್ರದ್ದಿ ಪಥದಲ್ಲಿ ಸಾಗಲಿ’ ಎಂದು ಶುಭ ಹಾರೈಸಿದರು. ವಿಧಾನ ಪರಿಷತ್ ಸದಸ್ಯ ಮಾಜಿ ಮಂತ್ರಿಗಳಾದ ಕೋಟಾ ಶ್ರೀನಿವಾಸ್ ಪೂಜಾರಿ ಅಧ್ಯಕ್ಷತೆ ವಹಿಸಿ ‘ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಒಳಿತಾಗಲಿ’ ಎಂದು ಹಾರೈಸಿದರು

ಉಡುಪಿ ಧರ್ಮ ಕ್ಷೇತ್ರದ ಕೆಥೋಲಿಕ್ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯದರ್ಶಿ ಅ|ವ|ಫಾ| ಲಾರೆನ್ಸ್ ಡಿಸೋಜಾ ‘ಕಾರ್ಯಕ್ರಮದ ಯಶಸ್ಸಿಗೆ ಆಶಿರ್ವಚನ ನೀಡಿ ‘ದೇವರು ಮನುಷ್ಯನನ್ನು ಹುಟ್ಟಿಸುವಾಗ ಬರೆ ಕೈಯಲ್ಲಿ ಹುಟ್ಟಿಸಿಲ್ಲಾ, ಅವನಿಗೆ ಯಾವುದಾದರೊಂದು ಪ್ರತಿಭೆಯನ್ನು ನೀಡೆ ನೀಡುತ್ತಾನೆ, ಆದರಿಂದ ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡು ಸಾಧನೆ ಮಾಡ ಬೇಕೆಂದು’ ಸಂದೇಶ ನೀಡಿದರು. ಕುಂದಾಪುರ ಕೆಥೋಲಿಕ್ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯದರ್ಶಿ, ವಲಯ ಪ್ರಧಾನ ವ|ಫಾ|ಅನಿಲ್ ಡಿಸೋಜಾ ಕಾರ್ಯಕ್ರಮಕ್ಕೆ ಬೆಲೂನು ಮತ್ತು ಭಾವುಟವನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಮತ್ತು ಪುರಮೆರವಣಿಗೆಗೆ ಚಾಲನೆ ನೀಡಿ ‘ನಮ್ಮ ಈ ಶಾಲೆಯ ಸುವರ್ಣಮಹತ್ಸೋಮ ಆಚರಿಸುವ ಈ ಸಮಯದಲ್ಲಿ ಈ ಅವಕಾಶ ಒದಗಿ ಬಂದದಕ್ಕೆ ನಮಗೆ ಹೆಮ್ಮೆ ಎನ್ನಿಸುತ್ತದೆ, ಸ್ಪರ್ಧಾಗಳು ಸೋಲು ಗೆಲುವು ಸಮವಾಗಿ ಸ್ವೀಕರಿಸ ಬೇಕೆಂದು’ ಸಂದೇಶ ನೀಡಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿ. ಪಂ. ಶಿಕ್ಷಣ ಮತ್ತು ಆರೋಗ್ಯ ಸಾಯಿ ಸಮಿತಿ ಅಧ್ಯಕ್ಷ ಉದಯ ಎಸ್.ಕೊಟಿಯಾನ್, ಕುಂದಾಪುರ ವಲಯ ಕ್ಷೇತ್ರ ಶಿಕ್ಷಾಣಾಧಿಕಾರಿ ಅಶೋಕ್ ಕಾಮತ್, ನಗರ ಪ್ರಾಧಿಕಾರ ಅಧ್ಯಕ್ಷ ವಿಕಾಸ್ ಹೆಗ್ಡೆ, ಪುರ ಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ, ಉಡುಪಿ ಜಿಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಹೆಗ್ಡೆ, ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸದಾರಾಮ ಶೆಟ್ಟಿ, ಇವರೆಲ್ಲರೂ ಶುಭ ಕೊರೀದರು. ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ವ|ಫಾ| ಪ್ರವೀಣ್‍ಅಮ್ರತ್ ಮಾರ್ಟಿಸ್, ಸಂತ ಮೇರಿಸ್ ಪ್ರೌಢ ಶಾಲಾ ಸುವರ್ಣ ಮಹತ್ಸೋವ ಸಮಿತಿಯ ಅಧ್ಯಕ್ಷ ಎಲ್.ಜೆ.ಫೆರ್ನಾಂಡಿಸ್, ಸಂತ ಮೇರಿಸ್ ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಿನಿ ಡೊರತಿ ಸುವಾರಿಸ್, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯೆ ಮುಖ್ಯೋಪಾಧ್ಯಿನಿ ಸಿಸ್ಟರ್ ಜೋಯ್ಸ್‍ಲಿನ್, ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಸ್ವಾಗತಿಸಿದರು. ದೈ.ಶಿ.ಶಿ. ಚಂದ್ರ ಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಸಂತ ಮೇರಿಸ್ ಪ್ರೌಢ ಶಾಲಾ ಮುಖ್ಯೋಪಾಧ್ಯಿನಿ ಸಿಸ್ಟರ್ ಚೇತನ ವಂದಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comments

S.Jagannath ,retired teacher , SJHS ,Sakleshpur, Mysore. mobilenumber 9590975474    20 Sep 2017

I wish all success to the authority and the staff involved.

S.Jagannath ,retired teacher , SJHS ,Sakleshpur, Mysore. mobilenumber 9590975474    20 Sep 2017

Came to know that you are celebrating Golden Jublee this year. I wish grand success to the authority and the staff in the celebration of the Golden Jublee .Then the I Prathibha Karanji conducted by youschool is really very nice and educative.The way that you have conducted and the discipline that youhave maintained is really appreciating. I wish once again all success to the authority and the staff involved.


Comment Here