Tuesday 23rd, April 2024
canara news

ಮುಗುಳ್ನಗೆಯ ಶಾಂತತೆಗಾಗಿ ಬೈಕ್‍ನಲ್ಲಿ ರಾಷ್ಟ್ರ ಪರ್ಯಾಟನೆಯಲ್ಲಿರುವ ಉಡುಪಿ ಬೆಡಗಿ ರಾಧಿಕಾ ಜೆ.ರಾವ್ ಮುಂಬಯಿಗೆ ಆಗಮನ

Published On : 05 Oct 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.05: ಕಳೆದ ಎಪ್ರಿಲ್ 9ರ ಭಾನುವಾರ ಅನಂಗ ತ್ರಯೋದಶೀ ಮತ್ತು ಕ್ರೈಸ್ತರ ಪಾಲಿನ ಶಾಂತಿ ಸಾರುವ ಪಾಮ್ ಸಂಡೇ (ಶುಭಭಾನುವಾರ) ಮತ್ತು ಜೈನರ ಮಹಾವೀರ ಜಯಂತಿ ಶುಭದಿನ ಚೆನ್ನೈ ಇಲ್ಲಿನ ಕೊಯಂಬೇಡು ನಿವಾಸದಿಂದ ತನ್ನ ಪ್ರಿಯವಾದ ಬಜಾಜ್ ಎವೇಂಜರ್ ಬೈಕ್‍ನಲ್ಲಿ ಏಕಾಂಗಿಯಾಗಿ ರಾಷ್ಟ್ರ ಪರ್ಯಾಟನೆಗೆ ಹೊರಟಿದ್ದ ಕು| ರಾಧಿಕಾ ಜೆ.ರಾವ್ ಇದೀಗ ರಾಷ್ಟ್ರದ ಆಥಿರ್üಕ ರಾಜಧಾನಿ ಮುಂಬಯಿ ಮಹಾನಗರವನ್ನು ಪ್ರವೇಶಿಸಿದ್ದಾರೆ.

ಪೆÇವಾಯಿ ಚಾಂದಿವಿಲಿ ಇಲ್ಲಿನ ಲೇಕ್ ಹೋಮ್ಸ್‍ಗೆ ಆಗಮಿಸಿದ ರಾಧಿಕಾ ರಾವ್‍ಗೆ ಕಲ್ಯಾಣ್ಪುರ ಮೂಲದ ಮುಂಬಯಿಯ ಉದ್ಯಮಿ, ಬಿಎಸ್‍ಕೆಬಿಎ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ವಿಶ್ವಸ್ಥ ಸದಸ್ಯ ಬಿ.ರಮಾನಂದ ರಾವ್ ಮತ್ತು ಲಕ್ಷಿ ್ಮೀ ಆರ್.ರಾವ್ (ದಂಪತಿ) ಹಾಗೂ ವಿಕ್ರಾಂತ್ ಆರ್.ರಾವ್ ಪರಿವಾರವು ಅತ್ಮೀಯವಾಗಿ ಬರಮಾಡಿ ಕೊಂಡರು.

ಉಡುಪಿ ಕಲ್ಯಾಣ್ಪುರ ಇಲ್ಲಿನ ಮೂಡುಕುದ್ರು ಇಲ್ಲಿನ ವಾಸುದೇವ ರಾವ್ ಮತ್ತು ಭಾರತಿ ರಾವ್ ದಂಪತಿ ಸುಪುತ್ರ ಐಟಿ ಉದ್ಯೋಗಿ ಜನಾರ್ದನ ವಿ.ರಾವ್ ಮತ್ತು ಕೇಂದ್ರ ಸರಕಾರಿ ಉದ್ಯೋಗಿ ಸರಸ್ವತಿ ಜೆ.ರಾವ್ ಸುಪುತ್ರಿ ರಾಧಿಕಾ ರಾವ್ ಚೆನ್ನೈ ಇಲ್ಲಿನ ಕೊಯಂಬೇಡ್ ನಿವಾಸಿ ಬಿಕಾಂ ಪದವೀಧರೆ ಆಗಿದ್ದು ಫೆÇಟೋಗ್ರಾಫಿ ಡಿಪೆÇ್ಲೀಮಾ ಮಾಡಿದ್ದು ಸದ್ಯ ಮದ್ರಾಸ್ ವಿಶ್ವವಿದ್ಯಲಯದಿಂದ ಸೊಶಿಯೋಲಾಗಿ ವಿಷಯದಲ್ಲಿ ಎಂಎಸ್ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.

ದೈನಂದಿನವಾಗಿ ಸುರ್ಯೋದಯದಿಂದ ಸುರ್ಯೋಸ್ತಮದ ತನಕ ಮಾತ್ರ ಜಿಪಿಎಸ್ ಮೂಲಕ ರಸ್ತೆಗಳನ್ನು ಬೇಧಿಸುತ್ತಾ ಬೈಕ್‍ನಲ್ಲಿ ಸವಾರಿ ಮಾಡುತ್ತಿದ್ದಾರೆ. ಉಡಲು ನಾಲ್ಕು ಜೋಡಿ ಬಟ್ಟೆ, ಮೆಡಿಕಲ್ ಕಿಟ್, ಟಯರ್‍ಗಳಿಗೆ ಗಾಳಿ ತುಂಬಿಸಲು ಏರ್‍ಪಂಪ್ ಮತ್ತು ಮೊಬಾಯ್ಲ್ ಚಾರ್ಜರ್ ಜೊತೆಗಿರಿಸಿ ಬಜಾಜ್ ಎವೆಂಜರ್ಸ್ ಕ್ಲಬ್ ಸಹಯೋಗದೊಂದಿಗೆ ಹೋದಲ್ಲೆಲ್ಲಾ ಆಶ್ರಯ ಪಡೆದು ಏಕಾಂತತೆಯಲ್ಲಿ ಸಾಗುತ್ತಿದ್ದಾರೆ. ತಂದೆಯ ಮಾರ್ಗದರ್ಶನದೊಂದಿಗೆ ಈ ದಿಟ್ಟ ಯೋಜನೆಯನ್ನು ಶೀಘ್ರವೇ ಪೂರೈಸಲು ಸುಮಾರು 6 ಲಕ್ಷ ಮೊತ್ತವನ್ನು ವಿನಿಯೋಗಿಸಲಿದ್ದಾರೆ. ಫ್ರೀಲಾನ್ಸ್ ಫೆÇೀಟೋಗ್ರಾಫರ್, ಬೈಕ್ ಯಂತ್ರಕರ್ಮಿ (ಮೆಕ್ಯಾನಿಕ್) ಅನುಭವಸ್ಥೆಯಾದ ಈಕೆ ಬಾಕ್ಸಿಂಗ್, ಸ್ವಆಶ್ರಿತೆ ಆಗಿದ್ದು ಮೈಕೈ, ಬೆನ್ನುನೋವು ಇತ್ಯಾದಿಗಳಿಂದ ಮುಕ್ತರೆಣಿಸಿಸಲು ದಿನಾಲೂ ತಪ್ಪದೆ ಯೋಗವನ್ನು ಅಭ್ಯಾಸಿಸಿ ಕೊಂಡಿರುವರು.

ಅನುರಾಗ, ಆನಂದ ಮತ್ತು ಶಾಂತಿ ನೆಲೆಗಾಗಿ ರಾಷ್ಟ್ರದ ಎಲ್ಲಾ 29 ರಾಜ್ಯಗಳನ್ನು 4 ರಾಜ್ಯ ಸಂಸ್ಥಾನಗಳನ್ನು ಬೈಕ್ ಮೂಲಕ ಸುತ್ತಾಡುವ ಅಪೂರ್ವ ಸಾಧನೆ ಕೈಗೆತ್ತಿಕೊಂಡಿದ್ದಾರೆ. ಇದೀಗಲೇ ಅರ್ಧ ವರ್ಷದಿಂದ (6 ತಿಂಗಳು) ಬೈಕ್‍ನೊಂದಿಗೆ ಏಕಾಂಗಿ ಆಗಿ (ಸೊಲೋ ಬೈಕ್ ರೈಡಿಂಗ್) ರಸ್ತೆ ಮೂಲಕ ಮೊದಲಾಗಿ ಮಳೆಗಾಲದ ಮುನ್ನ ಭಾರತದ ಪೂರ್ವ ರಾಜ್ಯಗಳ ಭೇಟಿಗೈದು ನಂತರ ಉತ್ತರ ಭಾರತದ ಭೇಟಿಯೊಂದಿಗೆ ದೇಶದ ರಾಜಧಾನಿ ದೆಹಲಿಗೆ ತೆರಳಿ ಅಲ್ಲಿನ ಗಣ್ಯಾಧಿಗಣ್ಯರನ್ನು ಭೇಟಿ ಮಾಡಿರುವರು. ಕಳೆದ ತಿಂಗಳಲ್ಲಿ ಬಿಹಾರ ರಾಜ್ಯದ ಮಾಜಿ ಮುಖ್ಯಾಂತ್ರಿ ಲಾಲೂಪ್ರಸಾದ್ ಯಾದವ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. 26ರ ಹರೆಯದ ಈ ಕುವರಿ ಆಗಿದ್ದರೂ ಹಿರಿಕಿರಿಯ ರಾಷ್ಟ್ರ ರಾಜ್ಯದ ನಾಯಕರು, ಗಣ್ಯಾಧಿಗಣ್ಯರು, ಜನಸಾಮಾನ್ಯರನ್ನೂ ಭೇಟಿಗೈದು ಅವರೊಂದಿಗೆ ಮಂದಹಾಸ (ಮುಗುಳುನಗೆ ಸ್ಮೈಲಿಂಗ್ ಫೆÇೀಟೋ) ಬೀರುವ ಫೆÇೀಟೊ ಕ್ಲಿಕ್ಕಿಸಿ ರಾಷ್ಟ್ರದಲ್ಲಿ ನೆಮ್ಮದಿ ನೆಲೆಸಲು ಸದಾ ಹಸನ್ಮುಖರಾಗಿ ಬಾಳುವ ಸಂದೇಶ ನೀಡುತ್ತಿದ್ದಾರೆ. ತಾನು ಕ್ಲಿಕ್ಕಿಸಿದ ಜೋಪಾನವಾಗಿರಿಸಿದ ಎಲ್ಲಾ ಛಾಯಾಚಿತ್ರಗಳನ್ನು ತಾಯ್ನಾಡಿಗೆ ಮರಳಿದ ಬಳಿಕ ಪ್ರದರ್ಶನಕ್ಕಿರಿಸಿ ತನ್ನ ರಾಷ್ಟ್ರ ಪರ್ಯಾಟನೆಯ ಅನುಭವ ಇತ್ಯಾದಿಗಳನ್ನು ವಿಶ್ಲೇಷಿಸಲಿದ್ದೇನೆ ಎಂದು ರಾಧಿಕಾ ಜೆ.ರಾವ್ ತಿಳಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here