Monday 18th, December 2017
canara news

ಅ.15: ಅಸಲ್ಫಾದಲ್ಲಿ ಯಕ್ಷಧ್ವನಿ ಮುಂಬಯಿ ಸಂಸ್ಥೆಯ 13ನೇ ವಾರ್ಷಿಕೋತ್ಸವ

Published On : 08 Oct 2017   |  Reported By : Rons Bantwal


ಮುಂಬಯಿ ಯಕ್ಷರಂಗದ ಸಂವಾದ ಗೋಷ್ಠಿ-`ವೀರ ವೈಷ್ಣವ' ಯಕ್ಷಗಾನ

ಮುಂಬಯಿ, ಅ.07: ಯಕ್ಷಧ್ವನಿ ಮುಂಬಯಿ ಸಂಸ್ಥೆಯ 13ನೇ ವಾರ್ಷಿಕೋತ್ಸವ ಸಂಭ್ರಮ ಇದೇ ಅ.15ನೇ ಆದಿತ್ಯವಾರ ಅಪರಾಹ್ನ ಘಾಟ್ಕೋಪರ್ ಪಶ್ಚಿಮದ ಅಸಲ್ಫಾ ಇಲ್ಲಿನ ಶ್ರೀ ಗೀತಾಂಬಿಕಾ ಸೇವಾ ಸಮಿತಿ ಸಂಚಾಲಕತ್ವದ ದೇವಸ್ಥಾನದ ಶ್ರೀ ಗೀತಾಂಬಿಕಾ ಸಭಾಗೃಹದಲ್ಲಿ ಜರುಗಲಿದೆ.

ಆ ಪ್ರಯುಕ್ತ ಅಪರಾಹ್ನ 2.30 ಗಂಟೆಗೆ ಸುರೇಂದ್ರಕುಮಾರ್ ಹೆಗ್ಡೆ ಅಧ್ಯಕ್ಷತೆ ಮತ್ತು ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಸಮನ್ವಯಕತ್ವದಲ್ಲಿ ಮುಂಬಯಿ ಯಕ್ಷರಂಗದ ಸಾಧಕ ಭಾದಕಗಳ ಬಗ್ಗೆ ಮುಕ್ತ ಸಂವಾದ ಗೋಷ್ಠಿ ನಡೆಸಲಾಗುವುದು. ಇದರಲ್ಲಿ ಪೆÇಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರು ಯಕ್ಷಗಾನ ಅಂದು-ಇಂದು-ಮುಂದು ವಿಚಾರವಾಗಿ, ದಾಮೋದರ ಶೆಟ್ಟಿ ಇರುವೈಲು ಅವರು ಯಕ್ಷಗಾನ ಪ್ರದರ್ಶನ ಹಾಗೂ ಸಾಧಕ ಭಾದಕಗಳು , ಜಿ.ಟಿ ಆಚಾರ್ಯ ಅವರು ಅರ್ಥಗಾರಿಕೆ ಮತ್ತು ವಾಸು ಶೆಟ್ಟಿ ಮಾರ್ನಾಡ್ ಅವರು ಯಕ್ಷಗಾನ ಸಂರಕ್ಷಣ-ಸಂವರ್ಧನೆಗೆ ಮುಂಬಯಿ ಯಕ್ಷಗಾನ ರಂಗದ ಕೊಡುಗೆ ವಿಷಯವಾಗಿ ಸಂವಾದ ನಡೆಸಲಿದ್ದು, ಸುಮಾರು ಹತ್ತು ಯಕ್ಷಗಾನ ಮಂಡಳಿಗಳು ಭಾಗವಹಿಸಲಿವೆ.

    

Raja Tumbe                            Ravichandra Kannadikatte

ಸಂಜೆ 4.45 ಗಂಟೆಗೆ ಶ್ರೀ ಗೀತಾಂಬಿಕಾ ಸೇವಾ ಸಮಿತಿ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಅಧ್ಯಕ್ಷತೆಯಲ್ಲಿ ಯಕ್ಷಧ್ವನಿ ಸಂಸ್ಥೆಯ 13ನೇ ವಾರ್ಷಿಕೋತ್ಸವ ಸಮಾರಂಭ ನಡೆಸಲಾಗುತ್ತಿದ್ದು, ಶ್ರೀ ಉಮಾ ಮಹೇಶ್ವರೀ ದೇವಸ್ಥಾನ ಜೆರಿಮೆರಿ ಇದರ ಪ್ರಧಾನ ಆರ್ಚಕ ಎಸ್.ಎನ್ ಉಡುಪ ಉದ್ಘಾಟಿಸಲಿದ್ದಾರೆ.

ಸಮಾರಂಭದಲ್ಲಿ ಅತಿಥಿüಗಳಾಗಿ ಶೇಖರ ಶೆಟ್ಟಿ ಇನ್ನಾ, ಡಾ| ದಯಾನಂದ ಕುಂಬ್ಳ, ದಾಮೋದರ ಶೆಟ್ಟಿ ಇರುವೈಲು, ಪ್ರವೀಣ್ ಶೆಟ್ಟಿ ಪುತ್ತೂರು, ರಮೇಶ್ ಶೆಟ್ಟಿ ಪಯ್ಯಾರು, ಸಂಕಯ್ಯ ಶೆಟ್ಟಿ ಪುಣೆ, ಸುಧಾಕರ್ ಬೆಳ್ಚಡ, ಸುಧಾಕರ್ ಜಿ. ಪೂಜಾರಿ ಘಾಟ್ಕೋಪರ್, ಶಂಭು ಕೆ.ಸನಿಲ್ ಭಾಂಡೂಪ್, ಚಂದ್ರಹಾಸ ಶೆಟ್ಟಿ ಉಜಿರೆ, ಸದಾನಂದ ಎಸ್.ಶೆಟ್ಟಿ ಕಿನ್ನಿಗೋಳಿ, ರಮೇಶ್ ಸಾಲ್ಯಾನ್, ಧರ್ಮಪಾಲ ಪಿ.ಕೋಟ್ಯಾನ್, ಸ್ಥಾನೀಯ ಮಾಜಿ ನಗರ ಸೇವಕ ಸಂಜಯ್ ಡಿ.ಬಳೆರಾವ್ ಆಗಮಿಸಿ ಯಕ್ಷಗಾನ ಗಾನಸುರಭಿ ಪ್ರಸಿದ್ಧ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಇವರನ್ನು ಸತ್ಕರಿಸಿ ಅಭಿನಂದಿಸುವರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ನಿರ್ದೇಶನ ಮತ್ತು ಭಾಗವತಿಕೆ, ಪೆÇಲ್ಯ ಲಕ್ಷಿ ್ಮೀನಾರಾಯಣ ಶೆಟ್ಟಿ ಮತ್ತು ರವಿಚಂದ್ರ ಕನ್ನಡಿಕಟ್ಟೆ ಅತಿಥಿü ಭಾಗವತಿಕೆ, ಗಣೇಶ್ ಮಯ್ಯ ವರ್ಕಾಡಿ (ಚೆಂಡೆ), ಅಕ್ಷಯಕುಮಾರ್ ವಿಟ್ಲ (ಮದ್ದಲೆ) ಯೊಂದಿಗೆ ಬಂಟ್ವಾಳ ಜಯರಾಮ ಆಚಾರ್ಯ ಇವರ ಹಾಸ್ಯಾಭಿನಯದಲ್ಲಿ `ವೀರ ವೈಷ್ಣವ' ಯಕ್ಷಗಾನ ಬಯಲಾಟ ಪ್ರದರ್ಶಿಸಲಾಗುವುದು ಎಂದು ಯಕ್ಷ ಧ್ವನಿ ಮುಂಬಯಿ ಸಂಸ್ಥೆಯ ಸಂಚಾಲಕ ರಾಜ ತುಂಬೆ (9892315074) ತಿಳಿಸಿದ್ದಾರೆ.

ನಾಡಿನ ಸಮಸ್ತ ತುಳು-ಕನ್ನಡಿಗ ಕಲಾಭಿಮಾನಿಗಳು, ಯಕ್ಷಗಾನ ಪ್ರಿಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸುವಂಂತೆ ಯಕ್ಷ ಧ್ವನಿ ಸಂಯೋಜಕ ಕಾರ್ತಿಕೇಯ ಆರ್.ತುಂಬೆ ವಿನಂತಿಸಿದ್ದಾರೆ.
More News

ಕಟೀಲಿನಲ್ಲಿ
ಕಟೀಲಿನಲ್ಲಿ "ಕ೦ಬಳಬೆಟ್ಟು ಭಟ್ರೆನ ಮಗಲ್" ತುಳು ಸಿನೆಮಾಗೆ ಮೂಹೋರ್ತ
ವಿದ್ಯಾರ್ಥಿ ಗಳಿಗಾಗಿ ಚಿತ್ರ ಕಲಾ ಸ್ಫರ್ಧೆ
ವಿದ್ಯಾರ್ಥಿ ಗಳಿಗಾಗಿ ಚಿತ್ರ ಕಲಾ ಸ್ಫರ್ಧೆ
ಚೆಂಬೂರು ಕರ್ನಾಟಕ ಸಂಘದಿಂದ ಜರುಗಿಸಲ್ಪಟ್ಟ 62ನೇ ವಾರ್ಷಿಕ ಮಹಾಸಭೆ
ಚೆಂಬೂರು ಕರ್ನಾಟಕ ಸಂಘದಿಂದ ಜರುಗಿಸಲ್ಪಟ್ಟ 62ನೇ ವಾರ್ಷಿಕ ಮಹಾಸಭೆ

Comment Here