Tuesday 16th, January 2018
canara news

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಹಿಳಾ ವಿಭಾಗದಿಂದ ಭಜನಾ ಸ್ಪರ್ಧೆ

Published On : 08 Oct 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.07: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗವು ತನ್ನ ಸ್ಥಳೀಯ ಸಮಿತಿಯ ಮಹಿಳೆಯರಿಗಾಗಿ ಭಜನಾ ಸ್ಪರ್ಧೆ ಆಯೋಜಿಸಿತ್ತು.

ಇಂದಿಲ್ಲಿ ಶನಿವಾರ ಅಪರಾಹ್ನ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ನಡೆಸಲ್ಪಟ್ಟ ಭಜನಾ ಸ್ಪರ್ಧೆಯನ್ನು ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮತ್ತು ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಗೌ| ಜೊತೆ ಕಾರ್ಯದರ್ಶಿ ಜೆ.ಎಂ ಕೋಟ್ಯಾನ್, ಮಹಿಳಾ ವಿಭಾಗದ ಉಪಾಧ್ಯಕ್ಷೆಯರಾದ ಪ್ರಭಾ ಕೆ.ಬಂಗೇರ, ವಿಲಾಸಿನಿ ಕೆ.ಸಾಲ್ಯಾನ್, ಯಶೋಧಾ ಎನ್.ಪೂಜಾರಿ, ಸಾಮಾಜಿಕ ಮತ್ತು ಧಾರ್ಮಿಕ ಸಮಿತಿ ಕಾರ್ಯದರ್ಶಿ ರವೀಂದ್ರ ಎ.ಅವಿೂನ್, ಶಾಲಾ ಸಮಿತಿಯ ಕಾರ್ಯದರ್ಶಿ ವಿಶ್ವನಾಥ್ ತೋನ್ಸೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಅಸೋಸಿಯೇಶನ್‍ನ ಕೇಂದ್ರ ಕಚೇರಿ ಸೇರಿದಂತೆ 18 ಮಂಡಳಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡವು. ವೀಣಾ ಶಾಸ್ತ್ರಿ ಮತ್ತು ಅಪರ್ಣಾ ಭಟ್ ಸ್ಪರ್ಧೆಯ ತೀರ್ಪುಗಾರರಾಗಿದ್ದು, ಶೇಖರ್ ಸಸಿಹಿತ್ಲು (ಹಾರ್ಮೋನಿಯಂ) ಮತ್ತು ಜನಾರ್ದನ ಸಾಲ್ಯಾನ್ (ತಬಲಾ) ಸಂಗೀತವಾದನಗಳೊಂದಿಗೆ ಸ್ಪರ್ಧೆಗೆ ಸಹಯೋಗವಿತ್ತರು. ಮಹಿಳಾ ವಿಭಾಗದ ಗೌರವ ಕಾರ್ಯದರ್ಶಿ ಸುಮಿತ್ರಾ ಎಸ್.ಬಂಗೇರ ಸ್ವಾಗತಿಸಿ ಸ್ಪರ್ಧೆಯನ್ನು ನಿರ್ವಹಿಸಿದರು.

ಭವನದ ವ್ಯವಸ್ಥಾಪಕ ಭಾಸ್ಕರ್ ಟಿ.ಪೂಜಾರಿ, ಪದ್ಮನಾಭ ಸಸಿಹಿತ್ಲು, ವಾಸು ಸುವರ್ಣ ಅಂಧೇರಿ, ಮಹಿಳಾ ವಿಭಾಗದ ಜತೆ ಕಾರ್ಯದರ್ಶಿ ಗಳಾದ ಡಾ| ಗೀತಾಂಜಲಿ ಎಲ್.ಸಾಲ್ಯಾನ್, ಲಕ್ಷ್ಮೀ ಎಸ್.ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯೆಯರಾದ ಶೋಭಾ ಎಸ್.ಪೂಜಾರಿ, ಚಂದ್ರಕಲಾ ಆರ್.ಸುವರ್ಣ, ಸಬಿತಾ ಪೂಜಾರಿ, ಸುಮಲತಾ ವಿ.ಅವಿೂನ್, ಜಯಂತಿ ಎಸ್.ಕೋಟ್ಯಾನ್, ವತ್ಸಲಾ ಕೆ.ಪೂಜಾರಿ, ಲೀಲಾ ಡಿ. ಪೂಜಾರಿ, ಪ್ರೇಮಾ ಆರ್.ಕೋಟ್ಯಾನ್, ವಿಶೇಷ ಆಮಂತ್ರಿತ ಸದಸ್ಯೆಯರಾದ ಭವಾನಿ ಸಿ.ಕೋಟ್ಯಾನ್, ಪೂಜಾ ಪುರುಷೋತ್ತಮ್, ವನಿತಾ ಎ.ಪೂಜಾರಿ, ಗಿರಿಜಾ ಚಂದ್ರಶೇಖರ್, ರೇಖಾ ಸದಾನಂದ್ ಸೇರಿದಂತೆ ಅಸೋಸಿಯೇಶನ್‍ನ ಸ್ಥಳೀಯ, ಸಮನ್ವಯ ಸಮಿತಿಗಳ ಮುಖ್ಯಸ್ಥರು, ಸದಸ್ಯೆಯನೇಕರು ಹಾಜರಿದ್ದರು.

ರಾತ್ರಿ ನಡೆಸಲ್ಪಟ್ಟ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ಸಮಾಜ ಸೇವಕ ವಾಮನ ಡಿ.ಪೂಜಾರಿ, ಉದ್ಯಮಿ ಸಮಾಜ ಸೇವಕಿ ಪ್ರೇಮಾ ಸುವರ್ಣ ಉಪಸ್ಥಿತರಿದ್ದು ವಿಜೇತ ಭಜನಾ ಮಂಡಳಿಗಳಿಗೆ ಪಾತ್ರಿತೋಷಕಗಳನ್ನು ಪ್ರದಾನಿಸಿ ಅಭಿನಂದಿಸಿದರು.
More News

ಕುಂದಾಪುರಾಂತ್ ಸಾಂತ್ ಜುಜೆ ವಾಜ್‍ಚೆ ವಾರ್ಷಿಕ್ ಮಹಾ ಪರಬ್
ಕುಂದಾಪುರಾಂತ್ ಸಾಂತ್ ಜುಜೆ ವಾಜ್‍ಚೆ ವಾರ್ಷಿಕ್ ಮಹಾ ಪರಬ್
ಬಿಎಸ್‍ಕೆಬಿಎಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ-ಮಕರ ಸಂಕ್ರಾಂತಿ ಆಚರಣೆ
ಬಿಎಸ್‍ಕೆಬಿಎಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ-ಮಕರ ಸಂಕ್ರಾಂತಿ ಆಚರಣೆ
ಗುರುನಾರಾಯಣ ನೈಟ್ ಹೈಸ್ಕೂಲ್ ಸಂಭ್ರಮಿಸಿದ 57ನೇ ವಾರ್ಷಿಕೋತ್ಸವ
ಗುರುನಾರಾಯಣ ನೈಟ್ ಹೈಸ್ಕೂಲ್ ಸಂಭ್ರಮಿಸಿದ 57ನೇ ವಾರ್ಷಿಕೋತ್ಸವ

Comment Here