Friday 29th, March 2024
canara news

ಕನಾ೯ಟಕ ಸಂಘ ಮುಂಬಯಿ : 'ಜಾನಪದ ಉತ್ಸವ - ಜಾನಪದ ವರುಷ' - ಸಮಾರೋಪ

Published On : 24 Nov 2014   |  Reported By : Omdas K


ಕಲೆ ಬದುಕಬೇಕಾದರೆ ಕಲಾವಿದರ ಆಥಿ೯ಕ ಸ್ಥಿತಿ ಗಟ್ಟಿಯಾಗಬೇಕು : ಐ. ಎಂ. ವಿಠ್ಠಲಮೂತಿ೯

ಮುಂಬಯಿ : ಬದುಕಿಗೆ ನೆರವು ದೊರೆತಾಗಲೆ ಕಲೆ ಉಳಿಯುವುದು. ಯಾವುದೇ ಒಂದು ಕಲೆಯು ಸನ್ಮಾನ - ಸಂಶೋಧನೆ ಮಾಡುವುದರಿಂದ ಉಳಿಯುವುದಿಲ್ಲ. ಥೀಸೀಸ್ನಿಂದ ಕಲಾವಿದರ ಹೊಟ್ಟೆ ತುಂಬುವುದಿಲ್ಲ. ಕಲೆ ಬದುಕಬೇಕಾದರೆ ಕಲಾವಿದರ ಆಥಿ೯ಕ ಸ್ಥಿತಿ ಗಟ್ಟಿಯಾಗಬೇಕು. ಕಲಾವಿದರಿಗೆ ಹೆಚ್ಚೆಚ್ಚು ಅವಕಾಶಗಳು ಸಿಗಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಐ. ಎಂ. ವಿಠಲಮೂತಿ೯ಯವರು ಹೇಳಿದರು.

ಸುವರ್ಣ ಕನಾ೯ಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕನಾ೯ಟಕ ಸಂಘ ಮುಂಬಯಿ ಆಶ್ರಯದಲ್ಲಿ 'ಅಕ್ಕ - 2014' ಅಮೇರಿಕದಲ್ಲಿ ಭಾಗವಹಿಸಿದ್ದ ಶ್ರೇಷ್ಠ ಜಾನಪದ ಕಲಾವಿದರಿಂದ 'ಜಾನಪದ ಉತ್ಸವ - ಜಾನಪದ ವರುಷ' ಎಂಬ ವಿಶಿಷ್ಟ ಜಾನಪದ ಕಾರ್ಯಕ್ರಮವು ಸಂಘದ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ನ. 16ರಂದು ದಿನವಿಡೀ ಜರಗಿದ್ದು, ಸಂಜೆ 'ಸಮರೋಪ' ಸಮಾರಂಭದಲ್ಲಿ ಅವರು ವಿಶೇಷ ಅತಿಥಿ ಸ್ಥಾನದಿಂದ ಮಾತನಾಡಿದರು.

ಅಮೆರಿಕದಲ್ಲಿ ಜರಗಿದ 'ಅಕ್ಕ' ಸಮ್ಮೇಳನಕ್ಕೆ ಜಾನಪದ ಕಲಾವಿದರನ್ನು ಕರೆದೊಯ್ದು ಎಲ್ಲರ ಪ್ರಶಂಸೆ ಗಿಟ್ಟಿಸಿದ ಶ್ರೀನಿವಾಸ ಜಿ. ಕಪ್ಪಣ್ಣ ಅವರು ಕಲಾವಿದರನ್ನು ಮುಂಬಯಿಗೂ ಕರೆತಂದು ಜಾನಪದ ಕಲೆಗಳ ಪ್ರದರ್ಶನ ಹಮ್ಮಿಕೊಳ್ಳಲು ಕಾರಣವಾಗಿರುವುದಕ್ಕೆ ಅವರನ್ನು ಅಭಿನಂದಿಸಿದ ವಿಠಲಮೂತತಿ೯ಯವರು, ಕಲೆಗೆ ಪ್ರೋತ್ಸಾಹ ಕೊಡುವ ಕೆಲಸವನ್ನು ಜನರು ಮಾಡುವಂತಾಗಬೇಕು. ಇಂದು ಬೆಂಗಳೂರಿನಲ್ಲಿಯೂ ಶಾಲಾ ಕಾಲೇಜುಗಳ ಪ್ರತಿಭಾಸ್ಪಧೆ೯ಗಳಲ್ಲಿ ಜನಪದ ಕಲೆಗಳಾದ ಕಂಸಾಳೆ, ಚೌಡಿಕೆ, ತಮಟೆ.. ಇತ್ಯಾದಿಗಳನ್ನು ಪ್ರದಶಿ೯ಸುತ್ತಿರುವುದು ಯುವ ಪೀಳಿಗೆಯ ಮೇಲೆ ಬೀರಿದ ಪ್ರಭಾವಕ್ಕೆ ಸಾಕ್ಷಿಯಾಗುವುದು ಎಂದರು. ಕನಾ೯ಟಕ ಸಂಘ ಇಂದು ಈ ಕಲಾವಿದರಿಗೆ ಅವಕಾಶ ನೀಡಿದ್ದು ಸಂತೋಷ ತಂದಿದೆ. ಅದಕ್ಕಾಗಿ ಈ ಸಂಘವನ್ನು ಅಭಿನಂದಿಸುತ್ತೇನೆ ಎಂದರು.

ಅಮೇರಿಕ 'ಅಕ್ಕ' ಸಂಸ್ಥೆಯ ಅಧ್ಯಕ್ಷರಾದ ಹಳೇಕೊಟೆ ವಿಶ್ವಾಮಿತ್ರ ಅವರು ಸಮಾರಂಭದ ಗೌ. ಅತಿಥಿ ಸ್ಥಾನದಿಂದ ಮಾತನಾಡುತ್ತಾ ಈ ಜಾನಪದ ಕಲಾವಿದರ ಪ್ರದರ್ಶನ 'ಅಕ್ಕ' ಸಮ್ಮೇಳನದಲ್ಲಿ ಜರಗಿದ್ದು ಸುಮಾರು ಐದು ಸಾವಿರ ಜನರು ವೀಕ್ಷಿಸಿ ಸಂತೋಷಪಟ್ಟರು. 3 ದಿನಗಳ ಸಮ್ಮೇಳನ ಅಪೂರ್ವವಾಗಿತ್ತು. ಹಾಗೆಯೇ ಮುಂಬಯಿಯಲ್ಲೂ ಪ್ರದರ್ಶನ ನಡೆದಿರುವುದು ಸಂತೋಷದ ಸಂಗತಿ. ಮುಂಬಯಿ ನಗರದಲ್ಲಿ ಕನ್ನಡ ಉಳಿಸಿ ಬೆಳೆಸುವ ಕಾರ್ಯವನ್ನು ಸಂಘವು ಮಾಡುತ್ತಿರುವುದು ಆನಂದವಾಗಿದೆ ಎಂದು ಸಂಘದ ಕಾರ್ಯ ವೈಖರಿಯನ್ನು ಅಭಿನಂದಿಸಿದರು.
ಚೌಡಿಕೆ ಕಲಾವಿದೆ ರಾಧಾಬಾಯಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ತನಗೆ ತನ್ನ ತವರು ಮನೆಗೆ ಬಂದಷ್ಟು ಖುಶಿ ತಂದಿದೆ. ಮಕ್ಕಳು ಈ ಜಾನಪದ ಕಲೆಯಲ್ಲಿ ಆಸಕ್ತಿ ಇರಿಸಬೇಕೆಂದು ತಿಳಿಸಿದರು.

ಸಭಾ ಕಾರ್ಯಕ್ರಮವನ್ನು ಖ್ಯಾತ ರಂಗನಿದೇ೯ಶಕ ಡಾ, ಭರತ್ ಕುಮಾರ್ ಪೊಲಿಪು ನಿರೂಪಿಸಿ ಅತಿಥಿಗಳನ್ನು ಪರಿಚಯಿಸಿದರು.

ಕನಾ೯ಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ ಜಾನಪದ ಕಲಾವಿದರನ್ನು ಪರಿಚಯಿಸಿದರು, ಕನಾ೯ಟಕ ಸಂಘದ ಗೌ, ಕಾರ್ಯದಶಿ೯ ಓಂದಾಸ್ ಕಣ್ಣಂಗಾರ್ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಪ್ರಕಾಶ್ ಜಿ. ಬುಡೆ೯, ಉಪಾಧ್ಯಕ್ಷ ಶ್ರೀನಿವಾಸ ಜೋಕಟ್ಟೆ, ಗೌ. ಕಾರ್ಯದಶಿ೯ ಓಂದಾಸ್ ಕಣ್ಣಂಗಾರ್ ವೇದಿಕೆಯ ಗಣ್ಯರನ್ನು , ಕಲಾವಿದರನ್ನು ಶಾಲು ಸ್ಮರಣಿಕೆ , ಪುಷ್ಪಗುಚ್ಚ ನೀಡಿ ಗೌರವಿಸಿದರು.

ವೇದಿಕೆಯಲ್ಲಿ ತಮಟೆ ಕಲಾವಿದ ಮುನಿವೆಂಕಟಪ್ಪ, ಗಾಯಕರಾದ ಶಂಕರ್, ಮಂಜುನಾಥ್, ಜಯಂತಿ ಶ್ರೀನಿವಾಸ್, ಸವಿತಾ ಗಣೇಶ್ ಪ್ರಸಾದ್, ಸಿ. ಎ. ನರಸಿಂಹಮೂತಿ೯ ಮೊದಲಾದವರು ಉಪಸ್ಥಿತರಿದ್ದರು.

ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಶಾಲೆಯಮಕ್ಕಳು ಉಪಸ್ಥಿತರಿದ್ದು ಕಲಾವಿದರ ಜಾನಪದ ಹಾಡಿಗೆ ವೇದಿಕೆಗೆ ಬಂದು ನೃತ್ಯ ಮಾಡಿದರು. ಶಾಲಾ ವಿದ್ಯಾಥಿ೯ಗಳು ಹಾಗೂ ಶಿಕ್ಷಕರು ತಮಗೆ ತಿಳಿದ ಕೆಲವು ಜಾನಪದ ಹಾಡುಗಳನ್ನು ಪ್ರಸ್ತುತ ಪಡಿಸಿದರು.

ಈ ಸಂದರ್ಭದಲ್ಲಿ ತಮಟೆ, ಡೊಳ್ಳು, ಕಂಗೀಲು ನೃತ್ಯ ಇತ್ಯಾದಿ ಪ್ರದರ್ಶನಗಳೂ ನಡೆದವು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here