Saturday 24th, March 2018
canara news

ಕುಂದಾಪುರ ಧರ್ಮಗುರುಗಳ ನೂತನ ವಸತಿ ಗ್ರಹ ಉದ್ಘಾಟನೆ ಆಶಿರ್ವಚನ

Published On : 08 Oct 2017   |  Reported By : Bernard D'Costa


ಪೋಷಕಿ ರೊಜರಿ ಅಮ್ಮನ ಹಬ್ಬ – ಇಗರ್ಜಿಯ 447 ನೇ ವರ್ಷಾಚರಣೆ 

ಕುಂದಾಪುರ,ಆ.8: ಚಾರಿತ್ರಿಕ ಹಿನ್ನೆಲೆಯುಳ್ಳ ಮಂಗ್ಳೂರು ಮತ್ತು ಉಡುಪಿ ಧರ್ಮ ಪ್ರಾಂತ್ಯಗಳಲ್ಲೇ ಅತ್ಯಂತ ಪುರಾತನ ಇಗರ್ಜಿಗಳಲ್ಲಿ ಎರಡೆನೇಯದಾದ ಪೋಷಕಿ ಪವಿತ್ರ ರೊಜರಿ ಮಾತೆಗೆ ಸಮರ್ಪಿಸಲ್ಪಟ್ಟ ಇಗರ್ಜಿಯ ಧರ್ಮಗುರುಳ ವಾಸ್ತ್ಯವದ ನೂತನ ನಿವಾಸವನ್ನು ಪವಿತ್ರ ರೊಜರಿ ಮಾತೆಯ ವಾರ್ಷಿಕ ಹಬ್ಬ ಹಾಗೂ ಕುಂದಾಪುರ ಪವಿತ್ರ ಧರ್ಮ ಸಭೆಗೆ 447 ವರ್ಷದ ಸಂಭ್ರಮದ ದಿನ ಆಕ್ಟೋಬರ್ 7 ರಂದು ಸಂಜೆ, ಇಗರ್ಜಿಯ ಪ್ರಧಾನ ಧರ್ಮಗುರುಗಳಾದ ವಂ|ಫಾ| ಅನಿಲ್ ಡಿಸೋಜಾ ಉದ್ಘಾಟಿಸಿ, ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಆಶಿರ್ವಚನವನ್ನು ಮಾಡಿದರು.

 

ಅದಕ್ಕೆ ಮುನ್ನ ಉಪಕಾರ ಸ್ಮರಣೆಗಾಗಿ ಬಿಷಪ್ ಐಸಾಕ್ ಲೋಬೊ ಇವರ ನೇತ್ರತ್ವದಲ್ಲಿ ದಿವ್ಯ ಬಲಿಪೂಜೆಯನ್ನು ಅರ್ಪಿಸಲಾಯಿತು. ಈ ಬಲಿ ಪೂಜೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಕಥೋಲಿಕ್ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯದರ್ಶಿ ಅತೀ|ವಂ| ಲಾರೆನ್ ಡಿಸೋಜಾ ‘ರೊಜರಿ ಮಾತೆಯ ಚರಿತ್ರೆಯನ್ನು ನೆನಪಿಸಿ, ರೋಜರಿ ಮಾತೆ ನಮ್ಮ ಪ್ರಾಥನೆಯನ್ನು ಯಾವತ್ತೂ ಆಲಿಸುತ್ತಾರೆ, ರೊಜರಿ ಮಾತೆ ಜಯವನ್ನು ಪಾಲಿಸುವ ಮಾತೆ’ ಎಂದು ಪ್ರವಚನ ನೀಡಿದರು. ಮಿಲಾಗ್ರಿಸ್ ಕ್ತಾಥೆಡ್ರಲ್ ಚರ್ಚಿನ ರೆಕ್ಟರ್ ವಂ| ಸ್ಟಾ ್ಯನ್ಲಿ ಪಾಯ್ಸ್, ಕೆರ್ರೆಕಟ್ಟೆ ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಕ್ಷೇವಿಯರ್ ಪಿಂಟೊ, ಕುಂದಾಪುರ ಸಹಾಯಕ ವಂ|ಫಾ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ. ಸಂತ ಮೇರಿಸ್ ಪಿಯು ಕಾಲೇಜ್ ಪ್ರಾಂಶುಪಾಲ ವಂ|ಫಾ ಪ್ರವೀಣ್ ಅಮ್ರತ್ ಮಾರ್ಟಿಸ್, ಹಿಂದೆ ಸೇವೆ ನೀಡಿದ ವಂ|ಫಾ|ಪ್ರಕಾಶ್ ಡಿಸೋಜಾ, ವಲಯದ ಇನ್ನಿತರ ಅನೇಕ ಧರ್ಮಗುರುಗಳು, ಅತಿಥಿ ಧರ್ಮಗುರುಗಳು ಮತ್ತು ಬಹುಸಂಖ್ಯೆಯಲ್ಲಿ ಭಕ್ತಾದಿಗಳು ಈ ದಿವ್ಯ ಬಲಿಪೂಜೆಯಲ್ಲಿ ಭಾಗಿಯಾದರು.

ಸಭಾಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ ಬಿಶಪ್ ಜೆರಾಲ್ಡ್ ‘ನಿವಾಸಗಳಲ್ಲಿ ಮೂರು ವಿಧದ ನಿವಾಸಗಳಿವೆ, ಒಂದು ಸ್ವಂತ ತಮ್ಮ ತಮ್ಮ ನಿವಾಸ ಇದು ಧಾರ್ಮಿಕ ಕ್ರಿಯೆಗಳ ಜೊತೆ, ಕುಟುಂಬದೊಡನೆ ಬೆರೆತು ಜಿವಿಸಿ ಜೀವನ ರೂಪಿಸಿಕೊಳ್ಳುವ ಮನೆ, ಎರಡೆನೇದು ದೇವರ ನಿವಾಸ ದೇವಾಲಯ, ಅಲ್ಲಿ ಧಾರ್ಮಿಕ ಆಚರಣೆ, ಭಕ್ತಿಯೊಡನೆ ದೇವರ ಜೊತೆ ಸಂಬಂಧ ಇಟ್ಟು ಕೊಳ್ಳುವ ಮನೆ, ಮುರನೇಯದು ಧರ್ಮಗುರುಗಳ ಮನೆ ಇಲ್ಲಿ ನೆಲೆಸುವ ಧರ್ಮಗುರುಗಳು ಧಾರ್ಮಿಕ ಸೇವೆ ನೀಡುವುದರ ಜೊತೆ ಲೌಕಿಕ ಸಮಸ್ಯೆಗಳನ್ನು ಪರಿಹಾರ ದೊರಕಿಸಿ ಕೊಳ್ಳುವ ಮನೆ, ಹಾಗಾಗಿ ಈ ಮೂರು ಮನೆಗಳಿಗೂ ಮನುಷ್ಯನಿಗೆ ಹತ್ತಿರದ ಸಂಬಂಧ ಇರುತ್ತದೆ ಎನ್ನುತ್ತಾ, ಈ ನಿವಾಸದಲ್ಲಿ ವಾಸ್ತವ್ಯ ಮಾಡುವ ಧರ್ಮಗುರುಗಳಿಂದ ನಿಮಗೆ ಉತ್ತಮ ಸೇವೆ ಸಿಗಲಿ, ಈ ನಿವಾಸದಲ್ಲಿ ವಾಸ್ತವ್ಯ ಮಾಡುವ ಧರ್ಮಗುರುಗಳಿಗೆ ಸಮಾಧಾನ ಸಂತೋಷ ಮತ್ತು ರಕ್ಷಣೆ ದೊರಕಲಿ’ ಎಂದು ಅವರು ಹಾರೈಸಿದರು.

ಮುಖ್ಯ ಅತಿಥಿಯಾಗಿ ವಿಧಾನ ಸಭಾ ಸಚೇತಕ ಐವನ್ ಡಿಸೋಜಾ ಹಾಜರಿದ್ದು ಅವರು ಶುಭ ಕೋರಿದರು. ವಾಡೆಗಳ ಗುರಿಕಾರರು ಪಾಲನ ಮಂಡಳಿ ಸದಸ್ಯರಿಂದ ಭಾರತೀಯ ಪರಂಪರೆಯಂತೆ ಬ್ಯಾಂಡು ವಾದನಗಳೊಂದಿಗೆ ಹೊರೆ ಕಾಣಿಕೆಯನ್ನು ಸಮರ್ಪಿಸಿದ್ದು ವಿಶೇಶವಾಗಿತ್ತು. ಅತಿ ಹೆಚ್ಚು ಧನ ದಾನ ನಿಡಿದ ಪೀಟರ್ ಜೆ. ಆಲ್ಮೇಡ ಮತ್ತು ದೇವಾಲಯ ಸಂಬಂಭದದ ಜಾಗದ ಸಂಬಂಧದ ತಕ್ರಾರಿಗೆ ಪರಿಹಾರ ನೀಡಿದ ಸುಬ್ರಮ್ಹಣ್ಯ ಗಾಣಿಗ ಅವರನ್ನು ಸನ್ಮಾನಿಸಲಾಯಿತು. ಪ್ರಧಾನ ಧರ್ಮಗುರು ಫಾ|ಅನಿಲ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿಸೋಜಾ ಸ್ವಾಗತವನ್ನು ಕೊರೀದರು, ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ ವಂದಿಸಿದರು, ಡಯಾನಾ ಡಿಆಲ್ಮೇಡಾ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು.
More News

 14 ವರ್ಷದ ಬಳಿಕ ಅತ್ಯಾಚಾರ ಪ್ರಕರಣದ ಆರೋಪಿ ಸೆರೆ
14 ವರ್ಷದ ಬಳಿಕ ಅತ್ಯಾಚಾರ ಪ್ರಕರಣದ ಆರೋಪಿ ಸೆರೆ
ಅಶಕ್ತರ ಕಣ್ಣೀರು ಒರೆಸುವ ಮುನಿಯಾಲು ಉದಯ ಕೆ.ಶೆಟ್ಟಿ
ಅಶಕ್ತರ ಕಣ್ಣೀರು ಒರೆಸುವ ಮುನಿಯಾಲು ಉದಯ ಕೆ.ಶೆಟ್ಟಿ
ಪ್ರವಾದಿಯವರ ಅನುಸರಣೆ ಇಹ-ಪರ ವಿಜಯಕ್ಕೆ ಹೇತು
ಪ್ರವಾದಿಯವರ ಅನುಸರಣೆ ಇಹ-ಪರ ವಿಜಯಕ್ಕೆ ಹೇತು

Comment Here