Saturday 24th, March 2018
canara news

ಮುತಾಲಿಕ್ ಗೆ ಹಿಂದೂ ಧರ್ಮದ ಪಾರುಪತ್ಯ ಕೊಟ್ಟಿಲ್ಲ: ಸಚಿವ ರಮಾನಾಥ ರೈ

Published On : 09 Oct 2017   |  Reported By : Canaranews network


ಮಂಗಳೂರು: ಪ್ರಮೋದ್ ಮುತಾಲಿಕ್ ಒಬ್ಬ ದಾರಿಹೋಕ. ಆತನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಕಿಡಿ ಕಾರಿದರು.ಪ್ರತಿ ಹಿಂದೂ ಕುಟುಂಬ ರಕ್ಷಣೆಗೆ ತಲವಾರ್ ಹೊಂದಿರಬೇಕು ಎಂಬ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ವಿರುದ್ಧ ಮಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಮೋದ್ ಮುತಾಲಿಕ್ ಗೆ ಯಾರು ಹಿಂದೂ ಧರ್ಮದ ಪಾರುಪತ್ಯ ಕೊಟ್ಟಿಲ್ಲ.

ಹಿಂದೂ ಧರ್ಮದ ಬಗ್ಗೆ ಪ್ರಮೋದ್ ಮುತಾಲಿಕ್ ಅಂಥವರಿಂದ ಉಪದೇಶ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.ಇನ್ನು, ಚಕ್ರವರ್ತಿ ಸೂಲಿಬೆಲೆ ಬಗ್ಗೆ ಹೀಯಾಳಿಸಿ ನಾನು ಮಾತನಾಡಿಲ್ಲ ಎಂದು ಸಮಜಾಯಿಷಿ ನೀಡಿದ ರೈ, ಹೀಯಾಳಿಸಿ ಮಾತನಾಡಿದ್ದರೆ ಸಾಕ್ಷ್ಯ ಕೊಡಿ. ಜನರು ಏನು ತಪ್ಪು ಮಾಡಿದರೂ ಅದಕ್ಕೆ ನಾನು ಜವಾಬ್ದಾರನಲ್ಲ. ಚಕ್ರವರ್ತಿ ಸೂಲಿಬೆಲೆ ಬಗೆಗಿನ ನನ್ನ ಹೇಳಿಕೆಗೆ ಪಶ್ಚಾತ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದರು.
More News

ಶಿಕಾರಿಗೆ ಹೋಗಿದ್ದ ಯುವಕರು ಶವವಾಗಿ ಪತ್ತೆ
ಶಿಕಾರಿಗೆ ಹೋಗಿದ್ದ ಯುವಕರು ಶವವಾಗಿ ಪತ್ತೆ
 14 ವರ್ಷದ ಬಳಿಕ ಅತ್ಯಾಚಾರ ಪ್ರಕರಣದ ಆರೋಪಿ ಸೆರೆ
14 ವರ್ಷದ ಬಳಿಕ ಅತ್ಯಾಚಾರ ಪ್ರಕರಣದ ಆರೋಪಿ ಸೆರೆ
ಅಶಕ್ತರ ಕಣ್ಣೀರು ಒರೆಸುವ ಮುನಿಯಾಲು ಉದಯ ಕೆ.ಶೆಟ್ಟಿ
ಅಶಕ್ತರ ಕಣ್ಣೀರು ಒರೆಸುವ ಮುನಿಯಾಲು ಉದಯ ಕೆ.ಶೆಟ್ಟಿ

Comment Here