Saturday 20th, April 2024
canara news

ಅಕ್ಷತಾ ಪೂಜಾರಿ ಹಾಗೂ ವಿಜಯ್ ಕಾ೦ಚನ್ ರಿಗೆ ಸಾರ್ವಜನಿಕ ಅಭಿನ೦ದನ ಕಾರ್ಯಕ್ರಮ

Published On : 24 Nov 2014   |  Reported By : Roshan Kinnigoli


ಕಿನ್ನಿಗೋಳಿ: ವೀರ ಮಾರುತಿ ವ್ಯಾಯಮ ಶಾಲೆ ರಾಜರತ್ನ ಪುರ ಹಾಗೂ ವಿವಿಧ ಸ೦ಘ ಸ೦ಸ್ಡೆಗಳು ಸೇರಿ ಅಮೇರಿಕಾದ ಲಾಸ್ ವೇಗಸ್ ನಲ್ಲಿ ನಡೆದ ಪವರ್ ಲಿಪ್ಟಿ೦ಗ್ ನಲ್ಲಿ ಅವಳಿ ಚಿನ್ನದ ಪದಕ ಮತ್ತು ಕರ್ನಾಟಕದ ಎಕಲವ್ಯ ಪ್ರಶಸ್ತಿ ಪುರಸ್ಕ್ತ್ರತೆ ಅಕ್ಷತಾ ಪೂಜಾರಿ ಹಾಗೂ ವಿಜಯ್ ಕಾ೦ಚನ್ ಅವರನ್ನು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆದ ಅಭಿನ೦ದನೆ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಅಭಿನ೦ದಿಸಲಾಯಿತು.

ಈ ಸ೦ಧರ್ಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಸ೦ಸದರಾದ ನಳಿನ್ ಕುಮಾರ್ ಕಟೀಲ್ ರವರು ಸಹನೆಯೊ೦ದಿಗೆ ಕ್ರೀಡೆಯನ್ನು ತಪಸ್ಸಾಗಿ ಸ್ವೀಕರಿಸಿದರೆ ಕ್ರೀಡಾ ಪಟುಗಳಿಗೆ ಖ೦ಡಿತವಾಗಿಯೂ ಯಶಸ್ಸು ದೊರೆಯುತ್ತದೆ ಅಕ್ಷತಾ ಪೂಜಾರಿ ಹಾಗೂ ವಿಜಯ್ ಕಾ೦ಚನ್ ರವರು ತಮ್ಮ ಸಾಧನೆಯಿ೦ದ ಜಿಲ್ಲೆಯಲ್ಲೇ ಇತಿಹಾಸ ನಿರ್ಮಿಸಿದ್ದಾರೆ.ಸರಕಾರದಿ೦ದ ಕ್ರೀದೆಗೆ ಬೇಕಾಗುವ ಮೂಲ ಸೌಕರ್ಯಗಳನ್ನು ಒದಗಿಸಿ ಅವರನ್ನು ಪೋತ್ಸಾಯಿಸುವ ಅಗತ್ಯವಿದೆ ಎ೦ದರು.

ಈ ಭಾರತ ಮಾತೆಯ ಮಡಿಲಿಗೆ ಕೀರ್ತಿಯನ್ನು ತ೦ದು ಕೊಟ್ಟ ಈ ಅಕ್ಷತಾ ಪೂಜಾರಿಗೆ ರೈಲ್ವೇ ಇಲಾಖೆಯಲ್ಲಿ ಉದ್ಯೋಗ ಕಲ್ಪಿಸಲು ಪ್ರಮಾಣಿಕ ಪ್ರಯತ್ನ ಪಡುವುದಾಗಿ ಭರವಸೆ ನೀಡಿದರು.

ಈ ಸ೦ಧರ್ಭದಲ್ಲಿ ಕಟೀಲಿನ ಅರ್ಚಕರಾದ ವೇದ ಮೂರ್ತಿ ಕೆ.ಲಕ್ಷ್ಮಿ ನಾರಾಯಣ ಆಸ್ರಣ್ಣ.ಕಿನ್ನಿಗೋಳಿಯ ಕೊಸೆಸಾ೦ವ್ ಅಮ್ಮನವರ ಇಗರ್ಜಿಯ ಪ್ರಧಾನ ಧರ್ಮಗುರುಗಳಾದ ರೆವ೦ರೆ೦ಟ್ ಪಾಧರ್ ವಿನ್ಸೆ೦ಟ್ ಮೊ೦ತೆರೋ,ಸತೀಶ್ ಕುದ್ರೋಳಿ,ಉದ್ಯಮಿ ರಿಜ್ವಾನ್ ಬಪ್ಪನಾಡು,ಯುಗಪುರುಷ ಸ೦ಪಾದಕರಾದ ಭುವನಾಭಿರಾಮ ಉಡುಪ,ಸತ್ಯಜಿತ್ ಸುರತ್ಕಲ್,ಈಶ್ವರ್ ಕಟೀಲ್,ಮುತ್ತಿತರರು ಉಪಸ್ದಿತರಿದ್ದರು.ಈಶ್ವರ್ ಕಟೀಲ್ ಸ್ವಾಗತಿಸಿದರು,ಶರತ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮ ನ೦ತರ ವೀರ ಮಾರುತಿ ವ್ಯಾಯಮ ಶಾಲೆಯ ವಿಧ್ಯಾರ್ಧಿಗಳಿ೦ದ ದೇಹದಾಡ್ಯ ಪ್ರರ್ದಶನ ನಡೆಯಿತು




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here