Saturday 24th, March 2018
canara news

ಮಂಗಳೂರಿನಲ್ಲಿ ಶೈಕ್ಷಣಿಕ ಒತ್ತಡಕ್ಕೆ ಬೇಸತ್ತು ಬಾಲಕ ಆತ್ಮಹತ್ಯೆ ಯತ್ನ

Published On : 09 Oct 2017   |  Reported By : Canaranews network


ಮಂಗಳೂರು: ಶೈಕ್ಷಣಿಕ ಒತ್ತಡಗಳಿಂದ ಬೇಸತ್ತು ಶಾಲಾ ಬಾಲಕನೋರ್ವ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಮ್ಗಳೂರು ನಗರದ ಹೊರವಲಯದ ಆಡುಮರೋಳಿ ಎಂಬಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಬಾಲಕ ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿಯಾಗಿದ್ದು, 10ನೇ ತರಗತಿಯಲ್ಲಿ ಕಲಿಯುತ್ತಿದ್ದ . ಆತ್ಮಹತ್ಯೆಗೆ ಮೊದಲು ಸೂಸೈಡ್ ನೋಟ್ ಬರೆದಿರುವ ಬಾಲಕ ಶಿಕ್ಷಣದ ಒತ್ತಡಗಳಿಂದ ಬೇಸತ್ತಿರುವುದು ಸ್ಪಷ್ಟವಾಗಿದೆ.

ಸೂಸೈಡ್ ನೋಟ್ ನಲ್ಲಿ "ನೋ ಮೋರ್ ಸ್ಟಡಿ " ಎಂದು ಬರೆದಿರುವುದಾಗಿ ತಿಳಿದು ಬಂದಿದೆ .ಘಟನೆಯಲ್ಲಿ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ . ಘಟನೆ ಕುರಿತು ಕಂಕನಾಡಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

 
More News

ಶಿಕಾರಿಗೆ ಹೋಗಿದ್ದ ಯುವಕರು ಶವವಾಗಿ ಪತ್ತೆ
ಶಿಕಾರಿಗೆ ಹೋಗಿದ್ದ ಯುವಕರು ಶವವಾಗಿ ಪತ್ತೆ
 14 ವರ್ಷದ ಬಳಿಕ ಅತ್ಯಾಚಾರ ಪ್ರಕರಣದ ಆರೋಪಿ ಸೆರೆ
14 ವರ್ಷದ ಬಳಿಕ ಅತ್ಯಾಚಾರ ಪ್ರಕರಣದ ಆರೋಪಿ ಸೆರೆ
ಅಶಕ್ತರ ಕಣ್ಣೀರು ಒರೆಸುವ ಮುನಿಯಾಲು ಉದಯ ಕೆ.ಶೆಟ್ಟಿ
ಅಶಕ್ತರ ಕಣ್ಣೀರು ಒರೆಸುವ ಮುನಿಯಾಲು ಉದಯ ಕೆ.ಶೆಟ್ಟಿ

Comment Here