Monday 18th, December 2017
canara news

ಬಂಟ್ಸ್ ಸೆಂಟರ್‍ನಲ್ಲಿ ಕೈಗಾರಿಕೋದ್ಯಮಸ್ಥರು ಮತ್ತು ಉದ್ಯೋಗಸ್ಥರ ಸಮಾವೇಶ

Published On : 10 Oct 2017   |  Reported By : Ronida Mumbai


ಬಂಟರ ಹೊಟೇಲು ಉದ್ಯಮ ವಿಶ್ವಕ್ಕೆ ಮಾದರಿ : ಜಸ್ಟೀಸ್ ವಿಶ್ವನಾಥ ಶೆಟ್ಟಿ
(ಚಿತ್ರ / ವರದಿ : ರೊನಿಡಾ ಮುಂಬಯಿ)


ಮುಂಬಯಿ,: ಇದೊಂದು ಅಪರೂಪದ ಅರ್ಥಪೂರ್ಣವಾದ ಮತ್ತು ವಿಭಿನ್ನತೆವುಳ್ಳ ಉದ್ಯೋಗಸ್ಥರ ಸಮಾವೇಶ. ಚಿಕ್ಕಂದಿಂದಲೂ ನನಗೆ ಒಳ್ಳೆಯ ಕಾನೂನು ತಜ್ಞನಾಗುವ ಆಶಯ ಹೊಂದಿದ್ದೆ. ಅಂತೆಯೇ ಪರಿಶ್ರಮದಿಂದ ಓದಿ ಇಂದು ಲೋಕಯುಕ್ತನಾದೆ. ಇಷ್ಟೆತ್ತರಕ್ಕೆ ಬೆಳೆದರೂ ಮಾತೃಭಾಷೆ ನನ್ನ ತುಳು ಎಂದೇಳಲು ಹೆಮ್ಮೆಯಾಗುತ್ತದೆ ಎಂದು ಕರ್ನಾಟಕ ರಾಜ್ಯ ಲೋಕಾಯುಕ್ತ ಜಸ್ಟೀಸ್ ಪಿ.ವಿಶ್ವನಾಥ ಶೆಟ್ಟಿ ನುಡಿದರು.

ಇಂದಿಲ್ಲಿ ಭಾನುವಾರ ಸಂಜೆ ನವಿಮುಂಬಯಿ ಜೂಯಿ ನಗರದಲ್ಲಿನ ಬಂಟ್ಸ್ ಸೆಂಟರ್‍ನ ಶಶಿಕಲಾ ಮನ್ಮೋಹನ್ ಶೆಟ್ಟಿ ಕಾಂಪ್ಲೆಕ್ಸ್‍ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ಬೋಂಬೆ ಬಂಟ್ಸ್ ಅಸೋಸಿ ಯೇಶನ್ ಆಯೋಜಿಸಿದ್ದ ಕೈಗಾರಿಕೋದ್ಯಮಸ್ಥ ಮತ್ತು ಉದ್ಯೋಗಸ್ಥರ (ಇಂಡಸ್ಟ್ರೀಯಲಿಸ್ಟ್ ಎಂಡ್ ಪೆÇ್ರಫೆಶನಲ್ಸ್ ಮೀಟ್) ಸಮಾವೇಶದಲ್ಲಿ ಮುಖ್ಯ ಅತಿಥಿüಯಾಗಿದ್ದು ದೀಪ ಪ್ರಜ್ವಲಿಸಿ ಸಮಾವೇಶ ಉದ್ಘಾಟಿಸಿ ಜಸ್ಟೀಸ್ ಶೆಟ್ಟಿ ಮಾತನಾಡಿದರು.

ಅಸೋಸಿಯೇಶನ್‍ನ ಅಧ್ಯಕ್ಷ ನ್ಯಾಯವಾದಿ ಉಪ್ಪೂರು ಶೇಖರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಸಮಾವೇಶಕ್ಕೆ ಬಾರ್ಕೂರು ಮಹಾಸಂಸ್ಥಾನದ ಡಾ| ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಆಶಿರ್ವಚನ ನೀಡಿದರು. ಗೌರವ ಅತಿಥಿüಗಳಾಗಿ ವಿನಯ ಹಾಸ್ಪಿಟಲ್ ಮಂಗಳೂರು ಕಾರ್ಯಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಡಾ| ಹಂಸರಾಜ್ ಆಳ್ವ, ಮುಂಬಯಿ ವಿಕೆ ಸಮೂಹ ದ ಆಡಳಿತ ನಿರ್ದೇಶಕ ಕರುಣಾಕರ ಎಂ.ಶೆಟ್ಟಿ, ಹೊಟೇಲ್ ರಾಮ್‍ದೇವ್ ಬೆಳಗಾಂ ಸಮೂಹದ ಆಡಳಿತ ನಿರ್ದೇಶಕ ರಘುರಾಮ ಕೆ.ಶೆಟ್ಟಿ, ಧಾರವಾಡದ ಶಿಕ್ಷಣತಜ್ಞ ಡಾ| ಡಿ.ಜಿ ಶೆಟ್ಟಿ, ಮೀರಾ ಡಹಾಣು ಬಂಟ್ಸ್‍ನ ಗೌರವಾಧ್ಯಕ್ಷ ವಿರಾರ್ ಶಂಕರ ಶೆಟ್ಟಿ ಉಪಸ್ಥಿತರಿದ್ದರು.

ನಾನು ನನ್ನ ಕರ್ತವ್ಯವನ್ನು ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ನಿರ್ವಹಿಸಿದ ಅಭಿಮಾನ ನನಗಿದೆ. ನನ್ನ ಸಹಪಾಠಿಗಳು, ಬಂಧುಗಳನೇಕರು ಮುಂಬಯಿಯಲ್ಲಿ ನೆಲೆಯಾಗಿ ವಿಶೇಷವಾಗಿ ಹೊಟೇಲು ಉದ್ಯಮದಲ್ಲಿ ಪಳಗಿಸಿ ಕೊಂಡು ಯಶಸ್ವೀ ಹೊಟೇಲು ಉದ್ಯಮಿಗಳಾಗಿ ಯಜಮಾನರಾಗಿದ್ದಾರೆ. ಇಂದು ಬಂಟ ಹೊಟೇಲು ಉದ್ಯಮಿಗಳು ವಿಶ್ವಕ್ಕೆನೇ ಮಾದರಿ ಆಗಿರುವುದು ಪ್ರಶಂಸನೀಯ. ಕನಿಷ್ಠ ಓದು ಕಲಿತ ಬಹಳಷ್ಟು ಬಂಟರು ಮುಂಬಯಿಯಲ್ಲಿ ಹೊಟೇಲ್ ಉದ್ದಿಮೆಯಲ್ಲಿ ತೊಡಗಿಸಿ ಉದ್ಯಮಶೀಲರಾಗಿ ತಮ್ಮ ಮಕ್ಕಳಿಗೆ ಸರ್ವೋನ್ನತ ಶಿಕ್ಷಣ ನೀಡಿ ಪದವೀಧರರನ್ನಾಗಿಸಿ ಪ್ರತಿಷ್ಠಿತ ವ್ಯಕ್ತಿಗಳನ್ನಾಗಿಸಿದ್ದಾರೆ. ಇನ್ನು ಭವಿಷ್ಯತ್ತಿನ ಪೀಳಿಗೆಗೆ ಅಧಿಕಾರಿಶಾಹಿಗಳಂತಹ ಐಪಿಎಸ್, ಐಎಎಸ್ ಸರ್ವೋತ್ಕೃಷ್ಟ ಶಿಕ್ಷಣ ಪ್ರಾಪ್ತಿಸಿ ಪೆÇ್ರೀತ್ಸಾಹಿಸಿ. ಕಷ್ಟಪಟ್ಟು ದುಡಿದರೆ ಫಲ ಖಂಡಿತಾ ಸಿಗುತ್ತದೆ ಎಂದೂ ಜಸ್ಟೀಸ್ ಶೆಟ್ಟಿ ಸಲಹಿದರು.

ಹೊಟೇಲು ಉದ್ದಿಮೆ ಶ್ರೇಷ್ಠ ಮತ್ತು ಪುಣ್ಯಾಧಿ ಉದ್ದಿಮೆ. ಇಂತಹ ಆತಿಥ್ಯ ಸತ್ಕಾರ ಉದ್ಯಮವನ್ನು ಸೇವಾ ಮನೋಭಾವದಿಂದ ಬಂಟರು ಮುನ್ನಡೆಸುತ್ತಿದ್ದಾರೆ. ಜೀವನದಲ್ಲಿ ಸಾಧನೆ ಮಾಡುವುದು ಮುಖ್ಯ. ಇದಕ್ಕೆಲ್ಲಾ ಪ್ರಪಂಚಜ್ಞಾನ ಅತೀ ಅಮೂಲ್ಯವಾದದು. ತಾವು ಏನನ್ನೂ ಸಾಧಿಸಿದರೂ ತಮ್ಮ ಮಾತಾಪಿತರಲ್ಲಿ ಅಡಗಿಸದೆ ಜನ್ಮದಾತರ ಅನುಗ್ರಹದಿಂದ ಮುನ್ನಡೆದು ಬದುಕು ಸಾರ್ಥಕಗೊಳಿಸಿ ಎಂದು ಸಂತೋಷ ಭಾರತಿ ಹರಸಿದರು.

ಸಮಾಜದ ಹಿತದೃಷ್ಠಿಯಿಂದ ಬಂಟ್ಸ್ ಅಸೋಸಿಯೇಶನ್ ಆಯೋಜಿಸಿರುವ ಈ ಕಾರ್ಯಕ್ರಮ ಬಹಳ ಒಳ್ಳೆಯ ರೀತಿಯಲ್ಲಿ ಮೂಡಿದೆ. ನಾನು ಕೂಡ ಬಹಳ ಕಷ್ಟಪಟ್ಟು ದುಡಿದು ಈ ಮಟ್ಟಕ್ಕೆ ತಲುಪಿದ್ದೇನೆ. ಕನಿಷ್ಠ ವಿದ್ಯಾಭ್ಯಾಸ ಪಡೆದು ಇವತ್ತು ಉನ್ನತ ಮಟ್ಟವನ್ನು ತಲುಪಿದ್ದೇನೆ. ಯುವಜನರೇ ನೀವೂ ಪ್ರಾಮಾಣಿಕರಾಗಿ ಕಷ್ಟಪಟ್ಟು ದುಡಿಮೆ ಮಾಡಿ ತಮ್ಮ ಜೀವನೋದ್ದೇಶ ಪರಿಪಕ್ವ ಗೊಳಿಸಿರಿ ಎಂದು ಯುವ ಪೀಳಿಗೆಗೆ ಕರುಣಾಕರ ಶೆಟ್ಟಿ ಕಿವಿಮಾತುಗಳನ್ನಾಡಿದರು.

ಡಾ| ಹಂಸರಾಜ ಮಾತನಾಡಿ ಬಡತನದಲ್ಲಿರುವ ಬಂಟರಿಗೆ ನಾನೂ ಸಹಾಯ ಮಾಡುತ್ತಾ ಬಂದಿದ್ದೇನೆ. ಮಂಗಳೂರಿನಲ್ಲಿ ಬಂಟರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದು ಒಟ್ಟಾರೆ ಸ್ವಸ್ಥ ಸಮಾಜದ ನಿರ್ಮಣಕ್ಕೆ ಪ್ರಯತ್ನಿಸುತ್ತಿದ್ದೇನೆ ತಾವೂ ಕೈಯಿಂದಾದ ಸೇವೆಗೈದು ಸಮಾಜವನ್ನು ಮುನ್ನಡೆಸಿ ಎಂದು ಸಲಹಿದರು.


ಡಾ| ಡಿ.ಜಿ ಶೆಟ್ಟಿ ಮಾತನಾಡಿ ನಾನು ಬಾರ್ಕೂರು ಮೂಲದವನು. ಆದರೆ ಧಾರವಾಡ ಪರಿಸರದಲ್ಲಿ ಡಿ.ಜಿ ಶೆಟ್ಟಿ ಕಾಲೇಜ್‍ನ್ನು ಸ್ಥಾಪಿಸಿ ಸಾವಿರಾರು ವಿದ್ಯಾಥಿರ್sಗಳಿಗೆ ಉಪಯೋಗ ಆಗುವಂತೆ ವಿದ್ಯಾಭ್ಯಾಸ ನೀಡುತ್ತಾ ಪೆÇ್ರೀತ್ಸಾಹಿಸುತ್ತಿದ್ದೇನೆ. ಎಲ್ಲರೂ ವಿದ್ಯಾರ್ಜನೆಗೆ ಮಹತ್ವ ನೀಡುತ್ತಾ ಸಮಾಜದ ಸರ್ವೋನ್ನತಿಗೆ ಶ್ರಮಿಸಬೇಕು. ಎಂದರು.

ಮುಂಬಯಿಯಲ್ಲಿ ಸರ್ವರ ಪಾಲಿಗೆ ಹೊಟೇಲು ಕಸಬು ಶ್ರೇಷ್ಠವಾದದ್ದು. ಉದ್ದಿಮೆ. ನಾನು ಶಾಲೆಗೆ ಹೋಗುತ್ತಿರುವಾಗಲೇ ಹೊಟೇಲು ಮಾಡಬೇಕು ಎಂಬ ಕನಸು ಕಂಡಿದ್ದೇನೆ. ಅಂತೆಯೇ ಪ್ರಾರಂಭದಲ್ಲಿ ಹೊಟೇಲ್‍ನಲ್ಲಿ ಕೆಲಸ ಮಾಡಿ ಈಗ ಹೊಟೇಲ್ ಉದ್ಯಮಿ ಆಗಿದ್ದೇನೆ. ಪ್ರತಿಯೊಬ್ಬ ವ್ಯಕ್ತಿಯು ಪ್ರಯತ್ನ ಮಾಡಿದರೆ ಎಲ್ಲವನ್ನೂ ಸಾಧಿಸಬಹುದು. ಹೊಟೇಲು ಉದ್ಯಮಿಗಳು ಹೃದಯವಂತರು ಎಂದು ಶಂಕರ್ ಶೆಟ್ಟಿ ವಿರಾರ್ ಅಭಿಪ್ರಾಯ ಪಟ್ಟರು.

ಸಮುದಾಯ ಮತ್ತು ಸಮಾಜದ ಉನ್ನತಿಗಾಗಿ ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳು ಯುವ ಪೀಳಿಗೆಗೆ ಸ್ಫೂರ್ತಿಯಾಗಲಿ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಶೇಖರ್ ಶೆಟ್ಟಿ ಆಶಯ ವ್ಯಕ್ತ ಪಡಿಸಿದರು.

ಸಮಾರಂಭÀದಲ್ಲಿ ಬೋಂಬೇ ಬಂಟ್ಸ್‍ನ ಗೌರವ ಕೋಶಾಧಿಕಾರಿ ಸಿಎ| ವಿಶ್ವನಾಥ ಎಸ್.ಶೆಟ್ಟಿ, ಜತೆ ಕಾರ್ಯದರ್ಶಿ ಕರುಣಾಕರ ಎಂ.ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ವಿನೋದಾ ಜೆ.ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ವೈಶಾಲಿ ಎ.ಶೆಟ್ಟಿ, ಕಾರ್ಯಕ್ರಮದ ಪ್ರಧಾನ ಸಂಚಾಲಕ ಸುರೇಶ್ ಶೆಟ್ಟಿ ಯೆಯ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಗೀತಾ ಶೆಟ್ಟಿ ವಿಕ್ರೋಲಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷ ನ್ಯಾಯವಾದಿ ಅಶೋಕ್ ಡಿ.ಶೆಟ್ಟಿ ಸ್ವಾಗತಿಸಿದರು. ದಯಾಸಾಗರ್ ಚೌಟ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ಸಿಎ| ಸುರೇಂದ್ರ ಕೆ.ಶೆಟ್ಟಿ ಧನ್ಯವದಿಸಿದರು.

ಬೋಂಬೆ ಬಂಟ್ಸ್ ಅಸೋಸಿಯೇಶನ್‍ನ ಕಾಲೇಜು ವಿದ್ಯಾಥಿರ್üಗಳು ನೃತ್ಯಾವಳಿಗಳನ್ನು ಪ್ರದರ್ಶಿಸಿದರು. ತುಳುವಬೊಳ್ಳಿ ದಯಾನಂದ್ ಕತ್ತಲ್‍ಸಾರ್ ನಿರ್ದೇಶನದಲ್ಲಿ ವಿವಿಧ ಸಂಸ್ಥೆಗಳಿಗೆ ಜಾನಪದ ನೃತ್ಯ ಸ್ಪರ್ಧೆ ಸಂಯೋಜಿಸಲಾಗಿದ್ದು ನ್ಯಾ| ಗೀತಾ ಆರ್.ಎಲ್ ಭಟ್, ಪದ್ಮನಾಭ ಸಸಿಹಿತ್ಲು, ಜಿ.ಟಿ ಆಚಾರ್ಯ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು. ನೃತ್ಯ ಸ್ಪರ್ಧೆಯಲ್ಲಿ ಮೀರಾ ಭಯಂದರ್ ಪ್ರಥಮ ಸ್ಥಾನಕ್ಕೆ ಪಾತ್ರವಾಗಿದ್ದು, ಥಾಣೆ ಬಂಟ್ಸ್ ದ್ವಿತೀಯ ಸ್ಥಾನ ತನ್ನದಾಗಿಸಿದರೆ, ನವಿಮುಂಬಯಿ ಪ್ರಾದೇಶಿಕ ಸಮಿತಿ ತೃತೀಯ ಸ್ಥಾನ ಪಡೆಯಿತು. ಅತಿಥಿüಗಳು ಸ್ಪರ್ಧಾ ವಿಜೇತರಿಗೆ ಪಾರಿತೋಷಕಗಳನ್ನಿತ್ತು ಅಭಿನಂದಿಸಿದರು. ರಾಷ್ಟ್ರಗೀತೆಯೊಂ ದಿಗೆ ಸಮಾವೇಶ ಸಮಾಪನಗೊಂಡಿತು.

 
More News

ಕಟೀಲಿನಲ್ಲಿ
ಕಟೀಲಿನಲ್ಲಿ "ಕ೦ಬಳಬೆಟ್ಟು ಭಟ್ರೆನ ಮಗಲ್" ತುಳು ಸಿನೆಮಾಗೆ ಮೂಹೋರ್ತ
ವಿದ್ಯಾರ್ಥಿ ಗಳಿಗಾಗಿ ಚಿತ್ರ ಕಲಾ ಸ್ಫರ್ಧೆ
ವಿದ್ಯಾರ್ಥಿ ಗಳಿಗಾಗಿ ಚಿತ್ರ ಕಲಾ ಸ್ಫರ್ಧೆ
ಚೆಂಬೂರು ಕರ್ನಾಟಕ ಸಂಘದಿಂದ ಜರುಗಿಸಲ್ಪಟ್ಟ 62ನೇ ವಾರ್ಷಿಕ ಮಹಾಸಭೆ
ಚೆಂಬೂರು ಕರ್ನಾಟಕ ಸಂಘದಿಂದ ಜರುಗಿಸಲ್ಪಟ್ಟ 62ನೇ ವಾರ್ಷಿಕ ಮಹಾಸಭೆ

Comment Here