Thursday 18th, April 2024
canara news

ಅಭಿಜಿತ್ ಪ್ರಕಾಶನದ `ಕವಿಗಳು ಕಂಡ ಕುರ್ಕಾಲರು'ಮತ್ತು ಅಕ್ಷಯ ಪ್ರಕಾಶನದ `ಪಾರು ಪಕ್ಕಿಗ್ ಮುಗಲ್‍ದ ಪುಗೆಲ್' ಕೃತಿಗಳ ಬಿಡುಗಡೆ

Published On : 16 Oct 2017   |  Reported By : Rons Bantwal


(ವರದಿ / ಚಿತ್ರ: ರೋನ್ಸ್ ಬಂಟ್ವಾಳ್)

ಮುಂಬಯಿ, ಅ.16: ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಇಂದಿಲ್ಲಿ ಶನಿವಾರ ಸಂಜೆ ನಡೆಸಲ್ಪಟ್ಟ ಅಕ್ಷಯ ಮಾಸಿಕದ ವಾರ್ಷಿಕ `ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ' ಪ್ರದಾನ ಸಮಾರಂಭದ ಮಧ್ಯಾಂತರದಲ್ಲಿ ಹಿರಿಯ ಶಿಕ್ಷಕ, ಕವಿ ಬಿ.ಎಸ್ ಕುರ್ಕಾಲ್ ಬಗ್ಗೆ ವಿವಿಧ ಕವಿಗಳ ಕವನಗÀಳಿಂದ ರಚಿತ, ಸಾಹಿತಿ ಡಾ| ಕರುಣಾಕರ ಶೆಟ್ಟಿ ಪಣಿಯೂರು ಪ್ರಧಾನ ಸಂಪಾದಕತ್ವ ಮತ್ತು ಕನ್ನಡದ ಸೇನಾನಿ ಎಸ್.ಕೆ ಸುಂದರ್ ಸಂಪಾದಕದಲ್ಲಿ ಅಭಿಜಿತ್ ಪ್ರಕಾಶನ ಮುಂಬಯಿ ಪ್ರಕಾಶಿತ `ಕವಿಗಳು ಕಂಡ ಕುರ್ಕಾಲರು', ಮತ್ತು ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ರಚಿತ, ಅಕ್ಷಯ ಪ್ರಕಾಶನ ಮುಂಬಯಿ ಪ್ರಕಾಶಿಸಿದ `ಪಾರು ಪಕ್ಕಿಗ್ ಮುಗಲ್‍ದ ಪುಗೆಲ್' ಎರಡು ಕೃತಿಗಳÀು ಏಕಕಾಲಕ್ಕೆ ಅನಾವರಣ ಗೊಂಡವು.

ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ರಾಣಿ ಅಬ್ಬಕ್ಕ ತುಳು ಸಂಶೋಧನಾ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷ ಪೆÇ್ರ| ತುಕರಾಮ ಪೂಜಾರಿ ಮತ್ತು ಲಕ್ಷಿ ್ಮೀ ಛಾಯಾ ವಿಚಾರ ವೇದಿಕೆ ಮುಂಬಯಿ ಸಂಚಾಲಕ, ಹಿರಿಯ ಕವಿ, ಬಿ.ಎಸ್ ಕುರ್ಕಾಲ್ ಅವರು ಕ್ರಮವಾಗಿ ಏಕಕಾಲಕ್ಕೆ ಎರಡು ಕೃತಿಗಳÀನ್ನು ಬಿಡುಗಡೆ ಗೊಳಿಸಿದರು. ಕೃತಿಕಾರ ಡಾ| ಕರುಣಾಕರ ಶೆಟ್ಟಿ ಪಣಿಯೂರು ಮತ್ತು ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ್ ಅಲೆವೂರು ಕೃತಿ ಪರಿಚಯಗೈದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹಿರಿಯ ಸಾಹಿತಿ ನ್ಯಾ| ವಸಂತ ಎಸ್.ಕಲಕೋಟಿ, ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್, ಎಂ.ಎಸ್ ರಾವ್ ಅಹ್ಮದಾಬಾದ್, ಅಸೋಸಿ ಯೇಶನ್‍ನ ಪದಾಧಿಕಾರಿಗಳು, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಮಹಿಳಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ವೇದಿಕೆಯಲ್ಲಿದ್ದರು.

ತುಕರಾಮ ಪೂಜಾರಿ ಮಾತನಾಡಿ ಮುಂಬಯಿ ಅಚ್ಚ ತುಳುಕನ್ನಡದ ನಾಡಿಗಿ ಬೆಳೆಯುತ್ತಿರುವುದು ಅಭಿಮಾನ ತರುತ್ತಿದೆ. ಸಾಹಿತ್ಯಾಭಿಮಾನಕ್ಕೆ ಹೆಸರಾದ ಮುಂಬಯಿಗರ ಕೃತಿ, ಸಂಕಲನಗಳು ತುಳುಕನ್ನಡದ ಸಾಹಿತ್ಯಕಿರೀಟದ ಮುತ್ತುಗಳಾಗಿ ಪ್ರಜ್ವಲಿಸುತ್ತಿವೆ. ತಮ್ಮ ಸಾಹಿತ್ಯಾಭಿಮಾನ ಸರ್ವರಿಗೂ ಮಾದರಿ ಎಂದರು.

ಸುನೀತಾ ಶೆಟ್ಟಿ ಪರಿಸರ ಮತ್ತು ರಾಷ್ಟ್ರಪ್ರೇಮವುಳ್ಳ ಸಜ್ಜನ ಸಾಹಿತಿ. ಸಂಸ್ಕೃತಿಯ ಬಗ್ಗೆ ಅಗಾಧ ಒಲವುವುಳ್ಳ ಇವರು ತನ್ನ ಬರವಣಿಗೆ ಮೂಲಕ ಭವಿಷ್ಯತ್ತಿನ ಪೀಳಿಗೆಗೆ ತಪುಪಿಸುವ ಪ್ರಯತ್ನ ಮಾಡುತ್ತಿರುವುದು ಪ್ರಶಂಸನೀಯ. ಇವರ ಸಾಹಿತ್ಯ ಸೇವೆ ಸಾರ್ಥಕ್ಯವಾಗಿದೆ ಎಂದು ಬಿ.ಎಸ್ ಕುರ್ಕಾಲ್ ಅಭಿಪ್ರಾಯಪಟ್ಟರು.

ಸುನೀತಾ ಶೆಟ್ಟಿ ಮಾತನಾಡಿ ನನ್ನ ಕವಿತೆಗಳು ಬೇರುಗಳನ್ನು ಕಳೆದುಕೊಂಡ ನನ್ನ ಮಣ್ಣಿನ ಅರ್ಥನಾದ ಎಂದು ಅರಿತರು ಸಾಕು. ಪ್ರಗತಿಯ ಹೆಸರಿನಲ್ಲಿ ಹಸಿರು ನಾಶಗೊಂಡಾಗ ಮಾನವ ಬದುಕಿನ ಅಂಗಾಂಗಗಳು ಕಳಚಿಕೊಂಡು ದುರ್ಬಲವಾಗುವುದನ್ನು ನಾನು ಗಮನಿಸಿದೆ. ರೈತ ಕುಟುಂಬದ ಒಂದು ಕುಡಿಯಾದ ನಾನು ನಗರದಲ್ಲಿದ್ದರು ನನ್ನ ಬಾಲ್ಯವನ್ನೇ ಕಳೆದುಕೊಂಡ ಅಸಹಾಯಕ ಸ್ಥಿತಿಯಿಂದ ಮರುಗಿದೆ. ನಗರದಲ್ಲಿ ವಾಸಿಸುವ ನನ್ನ ಮುಂದಿನ ಪೀಳಿಗೆಗೆ ನಾನು ಉಳಿಸಿಕೊಂಡಿದಾದರೆ ಏನು ಎಂಬ ದುಃಖ ನನ್ನಲ್ಲಿ ಇದೆ. ನನ್ನ ಕವನಗಳಲ್ಲಿ ಹತಾಶೆಯ ಬಾವಗಳನ್ನು ಗುರುತಿಸುವವರಿಗೆ ಇದೊಂದು ಹಿನ್ನಲೆಯಾಗಿದು. ಕವಿತೆ ಮಾತನಾಡುತ್ತದೆ ಎನ್ನುವ ಅಭಿಪ್ರಾಯವುಂಟು. ಈಗಾಗಿ ನನ್ನ ಕವಿತೆಗಳು ಕೇವಲ ಮೌನದ ಶಬ್ದಗಳಾಗಿ ಉಳಿಯದೆ ಅವು ನಿರಂತರ ಮಾತನಾಡುತ್ತಿರಬೇಕು ಎಂಬುದೇ ನನ್ನ ಪ್ರಯತ್ನ ಎಂದರು.

ಪ್ರತೀಕ್ಷೆಗಳ ಜಗತ್ತಿನಲ್ಲಿರುವ ಆಧುನಿಕ ಜನತೆಗೆ ಕವನ, ಸಾಹಿತ್ಯ, ಬರವಣಿಗೆ ಮೂಲಕ ಮನ ಪರಿವರ್ತಿಸುವ ಪ್ರಯತ್ನ ಮಾಡುತ್ತಿರುವ ನಮ್ಮಲ್ಲಿನ ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ಮತ್ತು ಹಿರಿಯ ಕವಿ ಬಿ.ಎಸ್ ಕುರ್ಕಾಲ್ ಅವರ ಸೇವೆ ಅನುಪಮವಾದದ್ದು. ಎಲ್ಲರಲ್ಲೂ ಸಂತೋಷ, ಸಮೃದ್ಧಿ ನೆಲೆಸಬೇಕೆನ್ನುವ ಉದ್ದೇಶದಿಂದ ತಮ್ಮ ಅನುಭವಗಳನ್ನು ಬರವಣಿಗೆ ಮೂಲಕ ಪ್ರಕಾಶಿಸಿ ಸ್ವಸ್ಥ ಸಾಮಾಜಿಕ ಜೀವನಕ್ಕೆ ಪ್ರೇರೆಪಿಸುತ್ತಿರುವುದು ಅಭಿನಂದನೀಯ ಎಂದು ನಿತ್ಯಾನಂದ ಕೋಟ್ಯಾನ್ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃತಿ ಪ್ರಕಾಶಿತ ನವೀನ್ ಪ್ರಿಂಟರ್ಸ್ ಮಾಲಿಕ ನಾರಾಯಣ ಆರ್.ಶೆಟ್ಟಿ, ಎಂ.ಎಸ್ ರಾವ್, ಎಸ್.ಕೆ ಸುಂದರ್, ಡಾ| ಕರುಣಾಕರ ಶೆಟ್ಟಿ ಮತ್ತಿತರರಿಗೆ ಪುಷ್ಪ, ಕೃತಿಯೊಂದಿಗೆ ಅಧ್ಯಕ್ಷರು ಗೌರವಿಸಿದರು. ಅಕ್ಷಯ ಮಾಸಿಕದ ಸಹಾಯಕ ಸಂಪಾದಕ ಹರೀಶ್ ಹೆಜ್ಮಾಡಿ ಕಾರ್ಯಕ್ರಮ ನಿರ್ವಹಿಸಿ ಧನ್ಯವದಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here