Saturday 20th, April 2024
canara news

ಬಿಲ್ಲವ ಭವನದಲ್ಲಿ `ಅನನ್ಯ ಕಾರ್ಯ ಪ್ರವೃತ್ತ ಮೋಹನ್ ಸಿ.ಪೂಜಾರಿ' ಕೃತಿ ಬಿಡುಗಡೆ

Published On : 16 Oct 2017   |  Reported By : Rons Bantwal


ಸಾಧಕರ ಬದುಕು ಪರಿಚಯ ಅವಶ್ಯ : ಡಾ| ಸುನೀತಾ ಶೆಟ್ಟಿ
(ವರದಿ / ಚಿತ್ರ: ರೋನ್ಸ್ ಬಂಟ್ವಾಳ್)


ಮುಂಬಯಿ, ಅ.16: ಹುಟ್ಟೂರಿನಿಂದ ಹೊಟ್ಟೆ ಪಾಡಿಗಾಗಿ ಮುಂಬಯಿ ಸೇರಿದ ಮೋಹನ್ ಪೂಜಾರಿ ಸದ್ಯ ಅಹ್ಮದಾಬಾದ್‍ನ ಹೆಸರಾಂತ ತುಳುಕನ್ನಡಿಗ ಉದ್ಯಮಿ. ಮುಂಬಯಿನಿಂದ ಗುಜರಾತ್‍ಗೆ ಪ್ರಯಾಣಿಸಿ ಕಷ್ಟನಷ್ಟಗಳನ್ನು ಅನುಭವಿಸಿಯೂ ಶೂನ್ಯದಿಂದ ಮೇಲಕ್ಕೇರಿ ಆಕಾಶದೆಡೆಗೆ ಕರಣ ಚಾಚುವ ಓರ್ವ ಮಹಾನುಭಾವ. ನಮ್ಮಲ್ಲಿ ಉದ್ದಿಮೆ ಎಂದರೆ ಟಾಟಾ, ಅಂಬಾನಿ ಅವರನ್ನು ಗುರುತಿಸುವುದೇ ಹೆಚ್ಚು. ಓರ್ವ ಉತ್ತಮ ಸಾಹಿತಿ ಆದರೆ ಅವನಿಗೊಂದು ಅಭಿನಂದನಾ ಗ್ರಂಥವಾದರೂ ಬಂದಿತ್ತು. ಆದರೆ ಉದ್ಯಮ ಕ್ಷೇತ್ರದ ಸಾಧಕರನ್ನು ಪರಿಚಯಿಸುವುದು ತೀರ ಕಡಿಮೆ. ಲೇಖಕ ಎಂ.ಎಸ್ ರಾವ್ ಇಲ್ಲೊಂದು ಅಪರೂಪದ ಕೆಲಸ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಹೊರನಾಡುಗಳಿಂದ ಬಂದು ಏಕಾಂಗಿಯಾಗಿ ಅತ್ಯುನ್ನತ ಸಾಧನೆ ಮಾಡಿದವರ ಬದುಕಿನ ಪರಿಚಯ ನೀಡುವ ಸಾಹಸ ಮಾಡಿರುವುದು ಅಭಿನಂದನೀ ಯ. ನಾಳಿನ ಜನಾಂಗಕ್ಕೆ ಈ ಹೆಜ್ಜೆ ಗುರುತುಗಳು ಮಾದರಿಯಾಗಬೇಕು ಎಂಬಾ ಈ ಪ್ರಯತ್ನವು ಶ್ಲಾಘನೀಯ. ಮೂಡನಂಬಿಕೆ ಅಂಧಶ್ರದ್ಧೆಯಿಂದ ಬಹು ದೂರವಿರುವ ಮೋಹನ್ ಪೂಜಾರಿ ಅವರು ಸ್ವಾರ್ಥ, ಹೊಣ, ಹೆಮ್ಮೆ, ಅಹಂ ಇವುಗಳನ್ನು ದ್ವೇಷಿಸುತ್ತಾರೆ ಎಂಬ ವಾಕ್ಯ ಅವರ ಬದುಕಿನ ವ್ಯಾಖ್ಯಾನ ಎಂದು ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃ ಹದಲ್ಲಿ ಅಕ್ಷಯ ಮಾಸಿಕದ ವಾರ್ಷಿಕ `ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ' ಪ್ರದಾನ ಸಮಾರಂಭದ ಮಧ್ಯಾಂತರದಲ್ಲಿ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹೃದಯ ಶ್ರೀಮಂತ ಸಮಾಜ ಸೇವಕ, ಅನನ್ಯ ಕಾರ್ಯಸಾಧಕ, ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್ ಅವರ ಬದುಕುಶೈಲಿಯ ಲೇಖಕ, ಹಿರಿಯ ಪತ್ರಕರ್ತ ಎಂ.ಎಸ್ ರಾವ್ ಅಹ್ಮದಾಬಾದ್ ಬರಹದ, ಸಂತೃಪ್ತಿ ಪಬ್ಲಿಕೇಶನ್ ಅಹ್ಮದಾಬಾದ್ ಪ್ರಕಾಶಿಸಿತ ಕೃತಿ `ಅನನ್ಯ ಕಾರ್ಯ ಪ್ರವೃತ್ತ ಮೋಹನ್ ಸಿ.ಪೂಜಾರಿ' ಕೃತಿ ಬಿಡುಗಡೆ ಗೊಳಿಸಿ ಸುನೀತಾ ಶೆಟ್ಟಿ ಮಾತನಾಡಿದರು.

ವೇದಿಕೆಯಲ್ಲಿ ಹಿರಿಯ ಕವಿ ಬಿ.ಎಸ್ ಕುರ್ಕಾಲ್, ಹಿರಿಯ ಸಾಹಿತಿ ನ್ಯಾ| ವಸಂತ ಎಸ್.ಕಲಕೋಟಿ, ವಿದ್ವಾಂಸ, ಪೆÇ್ರ| ತುಕರಾಮ ಪೂಜಾರಿ, ಹಿರಿಯ ಉದ್ಯಮಿ ಜಯ ಪೂಜಾರಿ, ಡಾ| ಕರುಣಾಕರ ಶೆಟ್ಟಿ ಪಣಿಯೂರು, ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ್ ಅಲೆವೂರು, ಸುನಂದ ಮೋಹನ್ ಪೂಜಾರಿ, ವಾಸು ವಿ.ಸುವರ್ಣ ಬರೋಡಾ, ಮನೋಜ್ ಎಂ.ಪೂಜಾರಿ, ಹರೀಶ್ ಎಂ.ಪೂಜಾರಿ, ಕವಿತಾ ಎಂ.ಪೂಜಾರಿ, ಸವಿತಾ ಎಂ.ಪೂಜಾ ರಿ, ಭರತ್‍ಕುಮಾರ್ ಪಾಂಡೇಶ್ವರ್, ಮೋಹನ್‍ರ ಪರಿವಾರ, ಬಿಲ್ಲವರ ಅಸೋಸಿಯೇಶನ್‍ನ ಉಪಾಧ್ಯಕ್ಷರಾದ ಭಾಸ್ಕರ ವಿ.ಬಂಗೇರ, ಪುರುಷೋತ್ತಮ ಎಸ್.ಕೋಟ್ಯಾ ನ್, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಮಹಿಳಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಹರೀಶ್ ಜಿ.ಪೂಜಾರಿ ಕೊಕ್ಕರ್ಣೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೃತಿಕಾರ ಎಂ.ಎಸ್ ರಾವ್ ಅಹ್ಮದಾಬಾದ್ ಕೃತಿ ಪರಿಚಯಿಸುತ್ತಾ ದಾಷ್ರ್ಟಿಕ ಹಾಗೂ ಉದ್ವೇಕಕಾರ ಜೀವನಯಾತ್ರೆ ಮೋಹನ್ ಪೂಜಾರಿ ಅವರದ್ದು. ಕಿತ್ತುತಿನ್ನುವ ಬಡತನದಿಂದ ಪಾರಾಗಲು ಎಳೆಯ ವಯಸ್ಸಿನಲ್ಲೇ ಜೀವನೋಪಾಯ ಅರಸಿ ಮುಂಬಯಿನ ಫುಟ್‍ಪಾತ್‍ನಲ್ಲಿ ಹರಿದ ಬನಿಯಾನ್, ಇಜಾರು ಧರಿಸಿ ಬೆವರು ಸುರಿಸಿ ಸ್ವಂತಿಕೆಯ ಪ್ರತಿಷ್ಠೆ ಬೆಳೆಸಿದವರು. ಇಂತಹ ಸಾಹಸಧಾರಿ ಓರ್ವನ ಕ್ಲಿಷ್ಟ ಬದುಕಿನ ವ್ಯಕ್ತಿತ್ವವನ್ನು ಬರವಣಿಗೆಯಲ್ಲಿ ಪೆÇೀಣಿಸಿ ಕೃತಿಯಾಗಿಸುವ ಭಾಗ್ಯ ನನ್ನ ಪಾಲಿನ ಶ್ರೇಷ್ಠತೆಯಾಗಿದೆ ಎಂದರು.

ಮೋಹನ್ ಸಿ.ಪೂಜಾರಿ ಮಾತನಾಡಿ ನನ್ನದು ಬಡತನ ಹುಟ್ಟು, ಪರಿಶ್ರಮದ ಸಾಧನೆಯೇ ನನ್ನ ಏಳಿಗೆಯ ಗುಟ್ಟು. ಮುಂಬಯಿನ ಫುಟ್‍ಪಾತ್‍ನಲ್ಲಿ ದಿನ ಕಳೆದು ಬೆಳೆದು ಕ್ರಮೇಣ ಗುಜರಾತ್ ಸೇರಿದವನು. ನನ್ನ ಜೀವನ ಕೃತಿಯಾಗಿ ಪ್ರಕಟಿಸಲು ಎಷ್ಟು ಯೋಗ್ಯನೆಂದು ತಿಳಿದಿಲ್ಲ. ಆದರೆ ನನ್ನ ಅವಿರತ ಪರಿಶ್ರಮದ ಜೀವನ ಆ ಮೂಲಕದ ಯಶಸ್ಸು ಪ್ರಸಕ್ತ ಯುವಜನತೆಗೆ ಪ್ರೇರಣೆ ಆಗಬಲ್ಲದು ಎನ್ನುವ ಆಶಯ ನನ್ನದಾಗಿದೆ. ಸಾಧನೆ ಎಂದರೇನು ಎನ್ನುವುದಕ್ಕೆ ಈ ಕೃತಿ ಸಾಕ್ಷಿಯಾಗಲಿದೆ ಎಂದರು.

ಉದಾರ ಮನಸ್ಸಿಗೆ ಮೋಹನ್ ಸಿ.ಪೂಜಾರಿ ಮೇರುವ್ಯಕ್ತಿ ಆಗಿದ್ದಾರೆ. ಕಡು ಬಡತನದಿಂದ ಹೊರಹೊಮ್ಮಿ, ಪ್ರಾಮಾಣಿಕತೆ, ನಿಷ್ಠೆ, ಶ್ರಮಜೀವಿಗಾಗಿ ಬದುಕು ಕಂಡು ಜಾತಿಧರ್ಮ ಮತಗಳನ್ನು ಮೀರಿ ಬಾಳಿದ ಸಹೃದಯಿ. ಇಂತಹ ವ್ಯಕ್ತಿತ್ವದ ಬದುಕು ಕೃತಿರೂಪವಾಗಿ ಅದೂ ಈ ಬಿಲ್ಲವರ ಭವನದಲ್ಲಿ ಬಿಡುಗಡೆ ಆಗುತ್ತಿರುವುದು ಅಭಿಮಾನ ತಂದಿದೆ ಎಂದು ನಿತ್ಯಾನಂದ ಕೋಟ್ಯಾನ್ ಅಧ್ಯಕ್ಷೀಯತೆಯಲ್ಲಿ ತಿಳಿಸಿದರು.


ಅಸೀನರಾಗಿದ್ದರು.

ಅಕ್ಷಯ ಮಾಸಿಕದ ಸಹಾಯಕ ಸಂಪಾದಕ ಹರೀಶ್ ಹೆಜ್ಮಾಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಾಹಿಸಿದರು. ಸತೀಶ್ ಎನ್.ಬಂಗೇರ ಕೃತಜ್ಞತೆ ಸಮರ್ಪಿಸಿದರು.

ಗುಜರಾತ್ ರಾಜ್ಯದ ಅಹ್ಮದಾಬಾದ್‍ನ ಹಿರಿಯ ಉದ್ಯಮಿ, ಕೊಡುಗೈದಾನಿ, ಸಮಾಜ ಸೇವಕರಾದ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್ ಇವರು ಉಡುಪಿ ಅಲ್ಲಿನ ತೆಂಕ ಎರ್ಮಾಳ್‍ನ ಹೆಸರಾಂತ ಕೃಷಿಕ ಚಂದು ಪೂಜಾರಿ ಮತ್ತು ರಾಧು ಸಿ.ಪೂಜಾರಿ (ಸದ್ಯ ಸ್ವರ್ಗಸ್ಥರು) ಇವರ ಸುಪುತ್ರರಾಗಿದ್ದು ಅಹ್ಮದಾಬಾದ್‍ನ ಕೊಡುಗೈದಾನಿ ಎಂದೇ ಪರಿಚಿತರು. ಇವರ ಜೀವನ ಚಿತ್ರಣದ `ಅನನ್ಯ ಕಾರ್ಯ ಪ್ರವೃತ್ತ ಮೋಹನ್ ಸಿ.ಪೂಜಾರಿ' ಕೃತಿ ಎಂ.ಎಸ್ ರಾವ್ ಅವರ 12ನೇ ಕನ್ನಡ ಕೃತಿ. ಈ ಪಯ್ಕಿ ಐದು ಪ್ರ್ದಧಾನಿ ನರೇಂದ್ರ ಮೋದಿ ಅವರ ಬಗ್ಗೆ ಬರೆದ ಕೃತಿಗಳಾಗಿವೆ. ಗುಜರಾತ್‍ನಲ್ಲಿ ಪ್ರಥಮ ಕನ್ನಡ ಪುಸ್ತಕ ಬರೆದು ಇಲ್ಲೇ ಮುದ್ರಿಸಿ ದಾಖಲೆ ಸೃಷ್ಟಿ ಮಾಡಿದ ಸಾಧನೆ ಎಂ.ಎಸ್. ರಾವ್ ಅವರದ್ದು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here