Thursday 18th, April 2024
canara news

ಶಿಮಂತೂರು ಚಂದ್ರಹಾಸರ `ಗಗ್ಗರ'-ಶಾರದಾ ಅಂಚನ್‍ರ`ಜೀಟಿಗೆ'-`ಅಭಿಯಾನ' ಕೃತಿಗಳ ಬಿಡುಗಡೆ

Published On : 17 Oct 2017   |  Reported By : Rons Bantwal


ಕೃತಿಗಳ ಪ್ರಕಾಶನದಿಂದ ಸಂಸ್ಕೃತಿಯ ಅನಾವರಣ ಸಾಧ್ಯ : ಎನ್.ಟಿ ಪೂಜಾರಿ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಅ.15: ನಾನು ತಮ್ಮಂತ ಸಾಹಿತಿಕ ವಿದ್ವಂಸನಲ್ಲ. ಆದರೂ ತ್ರಿವಳಿ ಕೃತಿಗಳ ಅನಾವರಣ ನನ್ನ ಕೈಯಿಂದಾಗುವುದು ದೊಡ್ಡ ಆಶ್ಚರ್ಯವೇ ಸರಿ. ನಾನೊಬ್ಬ ಉದ್ಯಮಿ ಆಗಿದ್ದು ಶುಭಾಶಯಗಳನ್ನಷ್ಟೇ ಹೇಳಬಹುದು. ಕೃತಿಗಳ ಪ್ರಕಾಶನದಿಂದ ಸಂಸ್ಕೃತಿಯ ಅನಾವರಣ ಸಾಧ್ಯ.ಬರೆಯುವುದರಿಂದ ಜ್ಞಾನ, ಅರಿವು ಹೆಚ್ಚುವುದು ಮತ್ತು ಆ ಮೂಲಕ ಅಧ್ಯಯನಕ್ಕೆ ತಿಳಿಯಲು ಸಾಧ್ಯವಾಗುವುದು. ಓದುಗರ ಪೆÇ್ರೀತ್ಸಾಹದಿಂದ ಮಾತ್ರ ಕೃತಿಗಳ ವಿಸ್ತೃತ್ವ ಸಾಧ್ಯ ಎಂದು ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ನುಡಿದರು.

ಇಂದಿಲ್ಲಿ ಭಾನುವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠದ ಸಭಾಗೃಹದಲ್ಲಿ ಪೂಜಾ ಪ್ರಕಾಶನ ಸಂಸ್ಥೆಯ ಪ್ರಕಾಶಿತ ಕೃತಿಗಳ ಅನಾವರಣ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು ಪ್ರಧಾನ ಅಭ್ಯಾಗತರಾಗಿ ಉಪಸ್ಥಿತ ಎನ್.ಟಿ ಪೂಜಾರಿ ಅವರು ಪೂಜಾ ಪ್ರಕಾಶನ ಪ್ರಕಾಶಿತ, ಹೆಸರಾಂತ ಕವಿ ಶಿಮಂತೂರು ಚಂದ್ರಹಾಸ ಸುವರ್ಣ ಅವರ `ಗಗ್ಗರ' ತುಳು ಕಥಾ ಸಂಕಲನ ಮತ್ತು ಪ್ರಶಸ್ತಿ ವಿಜೇತ ಕವಯತ್ರಿ, ಲೇಖಕಿ ಶಾರದಾ ಆನಂದ್ ಅಂಚನ್ ಅವರ `ಅಭಿಯಾನ' ಕನ್ನಡ ಕವನ ಸಂಕಲನ ಮತ್ತು `ಜೀಟಿಗೆÀ' ತುಳು ಕವನ ಸಂಕಲನ ಬಿಡುಗಡೆ ಗೊಳಿಸಿದರು. ಅಕ್ಷಯ ಮಾಸಿಕದ ಸಹಾಯಕ ಸಂಪಾದಕ ಹರೀಶ್ ಹೆಜ್ಮಾಡಿ, ಸಾಹಿತಿ, ಲೇಖಕರುಗಳಾದ ಡಾ| ಕರುಣಾಕರ ಶೆಟ್ಟಿ ಪಣಿಯೂರು ಮತ್ತು ಡಾ| ಜಿ.ಪಿ ಕುಸುಮಾ ಅವರು ಕ್ರಮವಾಗಿ ಕೃತಿಗಳನ್ನು ಪರಿಚಯಿಸಿ ಶುಭಾರೈಸಿದರು.

ವೈದ್ಯಮ, ಭಿನ್ನತೆ ಮುಂಬಯಿ ಸಾಹಿತ್ಯಗಳಲ್ಲಿದೆ ಆದರೆ ಬರಹಗಾರರು ಎಲ್ಲರನ್ನೂ ಖುಷಿ ಪಡಿಸಲಸಾಧ್ಯ. ಲೇಖಕರು ಆತ್ಮವಿಶ್ವಾಸದಿಂದ ಸ್ವಾತಂತ್ರ್ಯಯುತವಾಗಿ ಬರೆಯಬೇಕು. ನಿರ್ಧಿಷ್ಟ, ಸ್ವಷ್ಟವಾದ ಬರವಣಿಕಾ ಧೋರಣೆ ಮೈಗೂಡಿಸÀಬೇಕು. ಬರಹದ ಮುಖೇನ ಹೊಸಹೊಸ ವಿಚಾರಗಳೊಂದಿಗೆ ಸಂಶೋಧನೆ ನಡೆಸಬೇಕು. ಶ್ರೀಲಂಕದ ಯಕ್ಷ ಕುಣಿತದಲ್ಲೂ ಗಗ್ಗರ ಎನ್ನುವುದಿದೆ. ಆದುದರಿಂದ ದ್ರಾವಿಡ ಪ್ರಾಚೀನ ಸಂಸ್ಕೃತಿ ಗಗ್ಗರದಿಂದ ಕೂಡಿದೆ ಎನ್ನುವುದು ತಿಳಿಯಬಹುದು. ಅಂತೆಯೇ ಜೀಟಿಗೆ ಎನ್ನುವುದು ಮನುಷ್ಯರನ್ನು ರಕ್ಷಿಸುವ ಪೂರ್ಣ ಹೊಣೆ ಹೊಂದಿದೆ. ಕತ್ತಲೆಯಿಂದ ಬೆಳಕಿಗೆ ತರುವುದೇ ಜೀಟಿಗೆ. ಇವನ್ನೆಲ್ಲಾ ತಿಳಿಸುವ ಇನ್ನಷ್ಟು ಸಂಶೋಧನಾ ಗ್ರಂಥಗಳು ತುಳುವಿನಲ್ಲಿ ಬರಲಿ. ಭಾಷೆಗೆ ಪ್ರಾಮುಖ್ಯತೆ ನೀಡಿ ಕೃತಿಗಳು ರಚನೆಯಾಗಲಿ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಸುನೀತಾ ಶೆಟ್ಟಿ ತಿಳಿಸಿದರÀು.

ಕೃತಿಕಾರ ಶಿಮಂತೂರು ಚಂದ್ರಹಾಸ ಸುವರ್ಣ ಮಾತನಾಡಿ ಇದು ಪೂಜಾ ಪ್ರಕಾಶನದ 22ನೇ ಕೃತಿಯಾಗಿದೆ. ಅವಿರತ ಶ್ರಮ ಮತ್ತು ನಿತಂತರ ಅಧ್ಯಾಯನದಿಂದ ಮಾತ್ರ ಕೃತಿ ರಚನೆ ಸಾಧ್ಯ. ಅಭಿನಯ ಸಾಮ್ರಾಜ್ಯ ನನ್ನನ್ನು ರಂಗಭೂಮಿಗೆ ಪರಿಚಯಿಸಿದರೆ ಪೂಜಾ ಪ್ರಕಾಶನ ಸಾಹಿತ್ಯ ಲೋಕಕ್ಕೆ ಗುರುತಿಸಿದೆ. ಓದುಗರೂ ಪ್ರತಿಭಾವಂತ ಅರ್ಹ ಸಾಹಿತ್ಯಗಳಿಗೆ ಪ್ರಶಸ್ತಿ ಸನ್ಮಾನ ಸಿಗುವಂತೆ ಮಾಡಬೇಕು. ಆ ಮೂಲಕ ಮುಂಬಯಿ ಸಾಹಿತ್ಯಲೋಕ ಇನ್ನಷ್ಟು ಬೆಳಗಲೆಂದು ಆಶಿಸುತ್ತೇನೆ ಎಂದರು.

ಮುಂಬಯಿ ನಗರ ಉಪನಗರಗಳ ಸಾಹಿತ್ಯ ಲೋಕದ ನಿರಂತರ ಪೆÇ್ರೀತ್ಸಾಹ ನನ್ನ ಬರವಣಿಗೆ ಪೂರಕ ಮತ್ತು ಅವಿಸ್ಮರಣಿಯ. ಕಥೆ, ಕವನ, ಕವಿತೆಗಳಿಗೆ ಪೆÇ್ರತ್ಸಾಹಿಸುವ ಮುಂಬಯಿಯ ದೈನಿಕಗಳಿಗೆ ನನ್ನ ಅಭಿವಂದನೆಗಳು. ಹಿರಿಕಿರಿಯರ ಅಸಂಖ್ಯಾತ ಓದುಗರರಿಂದ ನಾನು ಲೇಖನಿಯನ್ನು ಪ್ರಬುದ್ಧಗೊಳಿಸಲು ಸಾಧ್ಯವಾಗಿದ್ದು ಅದರ ಫಲವಾಗಿ ಪ್ರಶಸ್ತಿ ಸನ್ಮಾನಗಳು ನನ್ನನ್ನು ಗುರುತಿಸಿವೆ ಎಂದು ಕೃತಿಕರ್ತೆ ಶಾರದಾ ಅಂಚನ್ ನುಡಿದರು.

ಪೇಜಾವರ ಮಠ ಮುಂಬಯಿ ಶಾಖೆ ಹಾಗೂ ಅಭಿನಯ ಸಾಮ್ರಾಜ್ಯ ಮುಂಬಯಿ ಸಹಕಾರÀದಲ್ಲಿ ಸಂಯೋಜಿಸಲ್ಪಟ್ಟ ಕಾರ್ಯಕ್ರಮದಲ್ಲಿ ಚಿತ್ರಕಾರ ದೇವದಾಸ ಶೆಟ್ಟಿ, ಶಕುಂತಳಾ ಕೆ.ಕೋಟ್ಯಾನ್, ಡಾ| ರವಿರಾಜ್ ಸುವರ್ಣ, ಎಸ್.ಕೆ ಸುಂದರ್, ಹರೀಶ್ ಜಿ.ಪೂಜಾರಿ ಕೊಕ್ಕರ್ಣೆ, ಕೇಶವ ಪೂಜಾರಿ, ಚಿತ್ರಾಪು ಕೆ.ಎಂ ಕೋಟ್ಯಾನ್, ಅರುಷಾ ಎನ್.ಶೆಟ್ಟಿ, ಭಾಸ್ಕರ ವಿ.ಸಾಲ್ಯಾನ್, ಸಚ್ಚೀದಾನಂದ ಶೆಟ್ಟಿ, ಚಲನಚಿತ್ರ ನಿರ್ಮಾಪಕ ವೇಣುಗೋಪಾಲ ಶೆಟ್ಟಿ, ಮಹೇಶ್ ಕಾರ್ಕಳ್, ಸತೀಶ್ ಎನ್.ಬಂಗೇರ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಕೃತಿಕಾರರನ್ನು ಅಭಿನಂದಿಸಿದರು.

ಪೂಜಾ ಪ್ರಕಾಶನದ ಸರಸ್ವತಿ ಚಂದ್ರಹಾಸ ಸುವರ್ಣ, ಪೂಜಾಶ್ರೀ ಸಿ.ಸುವರ್ಣ, ಆನಂದ್ ವಿ.ಅಂಚನ್, ರಂಜಿತ್ ಸುವರ್ಣ, ಲಲಿತಾ ಕೋಟ್ಯಾನ್, ಹೇಮ ಹರಿದಾಸ್, ವೀಣಾ ಪೂಜಾರಿ ಅತಿಥಿüಗಳಿಗೆ ಪುಷ್ಪಗುಪ್ಛವನ್ನಿತ್ತು ಗೌರವಿಸಿ ದರು. ಶಾರದಾ ಎ.ಅಂಚನ್ ಪ್ರಾರ್ಥನೆಯನ್ನಾಡಿದರು. ನವೀನ್ ಕರ್ಕೇರ ಸ್ವಾಗತಿಸಿ, ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣರಾಜ್ ಸುವರ್ಣ ಅಭಾರ ಮನ್ನಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here