Saturday 20th, April 2024
canara news

ಕಲಾವಿದರು ಚಿರಂಜೀವಿಯಾಗಿ ಉಳಿಯಲಿ -ಭಾಸ್ಕರ್ ಸರಪಾಡಿ

Published On : 31 Oct 2017   |  Reported By : Rons Bantwal


ಮುಂಬಯಿ (ಬೆಂಗಳೂರು),ಅ.30: ಸಾಯಿ ಗಂಗೋತ್ರಿ (ರಿ.) ಹಾಗೂ ಸತೀಶ್ ಕುಮಾರ್ ಕೆ. ಸಿ ಅವರ ಜಂಟಿ ಅಯೋಜತ್ವದಲ್ಲಿ ಸತೀಶ್ ಕುಮಾರ್ ಅವರ 8ನೇ ವಾರ್ಷಿಕ ಕಲಾವಿದರ ಸನ್ಮಾನ ಸಮಾರಂಭ ಕಳೆದ ಭಾನುವಾರ ಬೆಂಗಳೂರುನಲ್ಲಿ ಆಯೋಜಿಸಿದ್ದು, ಭಾರತ್ ಬ್ಯಾಂಕ್‍ನ ಬೆಂಗಳೂರು ಇಂದಿರಾ ನಗರ ಶಾಖೆಯ ಸಿಬಂದಿ ಭಾಸ್ಕರ್ ಸರಪಾಡಿ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಧರ್ಮಸ್ಥಳ ಯಕ್ಷಗಾನ ಮೇಳದ ಹಿರಿಯ ಸಿರಿವೇಷ ಪಾತ್ರಧಾರಿ ಶಿವಕುಮಾರ್ ಬೇಗಾರ್ ಅವರನ್ನು ಸರಪಾಡಿ ಸನ್ಮಾನಿಸಿದರು. ಹಿರಿಯ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಭಟ್ ಅಭಿನಂದನಾ ಭಾಷಣ ಮಾಡಿದರು.

ಸನ್ಮಾನಕ್ಕೆ ಉತ್ತರಿಸಿದ ಶಿವಕುಮಾರ್, ಯಕ್ಷಗಾನ ಕಲಾವಿದರನ್ನು ಗೌರವಿಸುವ ಕಾರ್ಯ ಶ್ಲಾಘನೀಯ. ಈ ಸಂಸ್ಥೆಯು ಹಲವು ವರ್ಷಗಳಿಂದ ಇಂತಹ ಕಾರ್ಯಕ್ರಮವನ್ನು ನಡೆಸುತ್ತ ಬಂದಿದೆ. ಈ ಸಂದರ್ಭದಲ್ಲಿ ನನ್ನನ್ನು ಗುರುತಿಸಿ ಸನ್ಮಾನಿಸಿದಕ್ಕೆ ನಾನು ಚಿರಋಣಿಯಾಗೆದ್ದೇನೆ. ನನ್ನಿಂದ ಆದಷ್ಟು ಕಲಾಮಾತೆಯ ಸೇವೆಯು ಸಮಾಜಕ್ಕೆ ಸಿಗಲೆಚಿದು ನುಡಿದರು. ಇನೋರ್ವ ಹಿರಿಯ ಯಕ್ಷಗಾನ ಹಿಮ್ಮೇಳ ಕಲಾವಿದ ಎ.ಪಿ ಭಟ್ ಕಾರ್ಕಳ (ತಬಲ ವಾದಕ) ಸಮಾರಂಭ ಆಯೋಜಕರಿಗೆ ಅಭಿನಂದಿಸಿದರು.

ಭಾಸ್ಕರ್ ಸರಪಾಡಿ ಅಧ್ಯಕ್ಷೀಯ ನುಡಿಗಳನ್ನಾಡಿ ಕಲಾವಿದರನ್ನು ಸನ್ಮಾನಿಸುವುದು ಕಲಾಮಾತೆಯ ಆರಾಧನೆಯ ಕಾರ್ಯ, ಸತೀಶ್ ಕುಮಾರ್ ರವರು ಹಲವು ವರ್ಷಗಳಿಂದ ಇಚಿತಹ ಕಾರ್ಯಕ್ರಮವನ್ನು ಮುಂಬಯಿ ಮಹಾನಗರದಲ್ಲೂ ಮಾಡುತ್ತಿದ್ದನ್ನು ನಾನು ಹತ್ತಿರದಿಂದ ಗಮನಿಸಿದವನು. ಸತೀಶ್ ಅವರ ಈ ಕಾರ್ಯಕ್ರಮ ಶ್ಲಾಘನೀಯ. ಸತೀಶ್ ಓರ್ವ ಸಾಫ್ಟ್‍ವೇರ್ ಇಂಜಿನೀಯರ್ ಆಗಿಯೂ ಯಕ್ಷಗಾನ ಕಲೆಯನ್ನು ಮೈಗೂಡಿಸಿಕೊಂಡು ಯುವ ಪೀಳಿಗೆಗೆ ಒರ್ವ ಮಾದರಿಯಾಗಿದ್ದಾರೆ. ಇಂತಹ ಕಲಾವಿದರನ್ನು ಪೆÇ್ರೀತ್ಸಾಹಿಸುವ ಕಲಾವಿದ ಸತೀಶ್ ಅವರಿಗೆ ಕಲಾಮಾತೆಯು ಮುಂದೆಯು ಕಲಾವಿದರನ್ನು ಪೆÇ್ರೀತ್ಸಾಹಿಸುವÀ ಶಕ್ತಿ ಕಲಾಮಾತೆ ನೀಡಲಿ ಎನ್ನುತ್ತಾ ಕಲಾವಿದರು ಸಮಾಜದಲ್ಲಿ ಚಿರಂಜೀವಿಯಾಗಿ ಉಳಿಯಲಿ ಎಂದು ಈ ಸಂದರ್ಭದಲ್ಲಿ ಅಧ್ಯಕ್ಷ ಭಾಷಣದಲ್ಲಿ ನುಡಿದರು.

ಸಾಯಿ ಗಂಗೋತ್ರಿ ಸದಸ್ಯರು ಮತ್ತು ಚಂದ್ರಶೇಖರ್ ರಾವ್ ಸಹಕಾರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕೆ. ಪಿ ಶ್ರೀನಿವಾಸ್, ರಶ್ಮಿ ಸತೀಶ್, ಸುರೇಶ್ ರಾವ್, ಸುಬ್ರಹ್ಮಣ್ಯ ಭಟ್ ವೇದಿಕೆಯಲ್ಲಿದ್ದು ಸತೀಶ್ ಕುಮಾರ್ ಸ್ವಾಗತಿಸಿ ಅತಿಥಿüಗಣ್ಯರನ್ನು ಗೌರವಿಸಿದರು. ಸುರೇಶ್ ರಾವ್ ಸನ್ಮಾನ ಪತ್ರ ವಾಚಿಸಿದರು. ಕು| ಎಸ್.ನಿಷಿತ ಪ್ರಾರ್ಥನೆಯನ್ನಾಡಿದರು. ರಾಘವೇಂದ್ರ ಕಾಶಿಮನೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here