Friday 29th, March 2024
canara news

ಪ್ರತಿಷ್ಠಿತ ರಾಜ್ಯೋತ್ಸವ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರುನ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೋ ಆಯ್ಕೆ

Published On : 31 Oct 2017   |  Reported By : Ronida Mumbai


(ಚಿತ್ರ / ಮಾಹಿತಿ : ರೊನಿಡಾ ಮುಂಬಯಿ)


ಮುಂಬಯಿ, ಅ.30: ಕರ್ನಾಟಕ ರಾಜ್ಯದ 62ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಕರ್ನಾಟಕ ರಾಜ್ಯ ಸರಕಾರವು ಹೊರನಾಡ ಶ್ರೇಷ್ಠ ಸಮಾಜ ಸೇವಕರನ್ನಾಗಿ ಆಯ್ಕೆಗೊಳಿಸಿ 2017ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೂಲದ ಪ್ರಸಿದ್ಧ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೋ ಭಾಜನರಾಗಿದ್ದಾರೆ.

ಇತ್ತೀಚೆಗಷ್ಟೇ ಜಾಗತಿಕ ವಲಯದ ಪ್ರಸಿದ್ಧ ಮಾಧ್ಯಮಗಳಲ್ಲಿ ಒಂದಾದ ಟೈಮ್ಸ್ ಸಮೂಹದ ಟೈಮ್ಸ್ ನೌ ಇಂಗ್ಲೀಷ್ ಮಾಧ್ಯಮ ಚಾನೆಲ್‍ನ 2016 ಸಾಲಿನ ಪುರಸ್ಕಾರಕ್ಕೆ ಪಾತ್ರರಾಗಿದ್ದರು. ಭಾರತೀಯರಾಗಿದ್ದು ವಿದೇಶದಲ್ಲಿ ಉದ್ಯಮದಲ್ಲಿ ತೊಡಗಿಸಿ ಕೊಂಡು ತಮ್ಮ ಸಾಧನೆಯ ಮೂಲಕ ಯಶಸ್ವಿ ಕಂಡ ಕುಲಾಸೋ ಓರ್ವ ಯಶಸ್ವಿಕಂದ ಉದ್ಯಮಶೀಲರು. ಉದ್ಯೋಗ (ಪೆÇ್ರಫೆಶನಲ್), ಕಲೆ, ಸಾಹಿತ್ಯ, ಸಮಾಜ ಸೇವೆ ಇತ್ಯಾದಿಗಳಲ್ಲಿ ಗಣನೀಯ ಸೇವೆಗೈದ ಅವರ ಅನನ್ಯ ಸಮಾಜ ಸೇವೆ ಮತ್ತು ದೇಶಕಾಗಿ ನೀಡಿದ ಗಣನೀಯ ಸೇವೆಗಾಗಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದಕ್ಕೆ ಮುಂಬಯಿ ಮಹಾನಗರದ ಗಣ್ಯರು ಭಾರೀ ಸಂತಸ ವ್ಯಕ್ತ ಪಡಿಸಿದ್ದಾರೆ.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮೂಲದ ರೊನಾಲ್ಡ್ ಕೊಲಾಸೊ ಓರ್ವ ಯಶಸ್ವಿ ಉದ್ಯಮಿ ಆಗಿದ್ದು, ಸಮಾಜ ಸೇವೆ ಜೊತೆಗೆ ಸಾಮಾಜಿಕ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಉದಾರದಾನಿ ಆಗಿ ಸೇವಾ ನಿರತರಾಗಿ ಲೋಕೋಪಕಾರಿ ಆಗಿ ಜನಾನುರೆಣಿಸಿದ್ದಾರೆ. ಯಾವುದೇ ಜಾತಿ, ಧರ್ಮ, ಪಂಥ, ಮತ, ಬಾಷೆ, ಭೇದವಿಲ್ಲದೆ ವಿಶೇಷವಾಗಿ ದಕ್ಷಿಣ ಕನ್ನಡದ ಜನತೆಗೆÉ, ಬಡವ ಬಲ್ಲಿದವರಿಗೆ, ಹಲವಾರು ಸಂಘ ಸಂಸ್ಥೆಗಳಿಗೆ ತನ್ನಿಂದಾಗ ಅಪಾರ ಸೇವೆ ಸಲ್ಲಿಸಿದ್ದಾರೆ. ಕೊಲಸೋ ಅವರು ಅನೇಕ ಕುಟುಂಬಗಳಿಗೆ ಮೂಲಭೂತ ಸೌಕರ್ಯವನ್ನು ನೀಡುವಲ್ಲಿ ಯಶಸ್ವಿ ಕಂಡಿದ್ದು ಕರ್ನಾಟಕ ರಾಜ್ಯದಾದ್ಯಂತ ಪ್ರವಾಸಗೈದು ಸಾವಿರಾರು ಜನತೆಯ ಸೇವೆಯಲ್ಲಿ ತೊಡಗಿಸಿ ಕೊಂಡಿರುವರು.

ಇವರ ಸಮಾಜ ಸೇವೆಗೆ ದೇಶ ಮತ್ತು ವಿದೇಶಗಳಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. 2015ರಲ್ಲಿ 80 ರಾಷ್ಟ್ರಗಳ ಪೈಕಿ ಓರ್ವರನ್ನಾಗಿ ಆಸ್ಟ್ರೇಲಿಯಾ ರಾಷ್ಟ್ರದ ಪ್ರಧಾನಮಂತ್ರಿ ಅವರು ಇಂಟರ್‍ನ್ಯಾಷನಲ್ ರೆಕಗ್ನಿಶನ್ ಆವಾರ್ಡ್ ಥ್ರೂ ಲೀಡರ್‍ಶಿಫ್ ಇನ್ ಸರ್ವಿಸ್ ಎಕ್ಸ್‍ಲೆನ್ಸಿ ಪುರಸ್ಕಾರ ನೀಡಿ ಗೌರವಿಸಿದ ಭಾರತೀಯರಲ್ಲಿ ಕೊಲಾಸೋ ಅವರೋರ್ವರು. ಇತ್ತೀಚಿಗೆ ಯುಎಸ್ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏರ್ಪಡಿಸಿ ಔತಣಕೂಟದಲ್ಲಿ ಆಮಂತ್ರಣ ಸ್ವೀಕರಿಸಿ ಪಾಲ್ಗೊಂಡವರಲ್ಲಿ ಕೊಲಾಸೋ ಸೇರಿದ್ದರು.

ಕರ್ನಾಟಕ ರಾಜ್ಯ ಸರಕಾರವು ರಾಜ್ಯದ ರಾಜಧಾನಿ ಬೆಂಗಳೂರು ಮಹಾನಗರದÀಲ್ಲಿ ಇದೇ ನ.02ರ ಸಂಜೆ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹೆಚ್.ಸಿದ್ಧರಾಮಯ್ಯ ಅವರು ನಾಡಿನ ವಿವಿಧ ಕ್ಷೇತ್ರದ ಸಾಧಕರ ಜೊತೆ ರೊನಾಲ್ಡ್ ಕೊಲಾಸೋ ಅವರಿಗೂ ಸ್ವರ್ಣ ಪದಕ, ನಗದು, ಸ್ಮರಣಿಕೆಯೊಂದಿಗೆ 2017ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಿಸಿ ಗೌರವಿಸಲಿದ್ದಾರೆ.

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here