Friday 19th, April 2024
canara news

ನ.02:ಬರೋಡಾದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‍ನ ಗುಜರಾತ್ ಘಟಕ ಉದ್ಘಾಟನೆ

Published On : 01 Nov 2017   |  Reported By : Rons Bantwal


ಪಟ್ಲ ಸತೀಶ್ ಶೆಟ್ಟಿ ಭಾಗವತಿಕೆಯಲ್ಲಿ `ಶನೀಶ್ವರ ಮಹಾತ್ಮೆ' ಯಕ್ಷಗಾನ ಪ್ರದರ್ಶನ

ಮುಂಬಯಿ, ಅ.31: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಗುಜರಾತ್ ರಾಜ್ಯ ಘಟಕವನ್ನು ಇದೇ ನ.02ನೇ ಗುರುವಾರ ಸಂಜೆ 4.00 ಗಂಟೆಗೆ ಗುಜರಾತ್ ರಾಜ್ಯದ ಬರೋಡಾ ಗುಜರಾತ್ ರಿಫೈನರಿ ಟೌನ್‍ಶಿಪ್ ಅಲ್ಲಿನ ಕಮ್ಯೂನಿಟಿ ಸಭಾಗೃಹದಲ್ಲಿ ಉದ್ಘಾಟಿಸಲಾಗುವುದು ಎಂದು ಟ್ರಸ್ಟ್‍ನ ಗುಜರಾತ್ ಘಟಕದ ಪ್ರಧಾನ ಸಂಘಟಕ ಹಾಗೂ ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ತಿಳಿಸಿದ್ದಾರೆ.

    

Jayaram Shetty                               Dayanand Bontra                   Satish Shetty        

   

Ajit Shetty                           Vishal Shanta

Shashidhar Shetty

ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮಂಗಳೂರು ಇದರ ಸಂಸ್ಥಾಪಕಾಧ್ಯಕ್ಷ, ಯಕ್ಷಚಕ್ರೇಶ್ವರ ಸತೀಶ್ ಶೆಟ್ಟಿ ಪಟ್ಲ ಉಪಸ್ಥಿತಿಯಲ್ಲಿ ಜರಗುವ ಕಾರ್ಯಕ್ರಮದಲ್ಲಿ ಕಲ್ಲಾಡಿ ಶ್ರೀ ಕೊರಗ ಶೆಟ್ಟಿ ಮತ್ತು ಶ್ರೀ ವಿಠಲ ಶೆಟ್ಟಿ ಪ್ರತಿಷ್ಠಾನ ಇರಾ ಮಂಗಳೂರು ಇದರ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿüಯಾಗಿ ಗುಜರಾತ್ ಬಿಲ್ಲವರ ಸಂಘದ ಸ್ಥಾಪಕ ರೂವಾರಿ ಪ್ರಸಕ್ತ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ಹಾಗೂ ಗೌರವ ಅತಿಥಿüಗಳಾಗಿ ಉದ್ಯಮಿಗಳಾದ ರಾಧಾಕೃಷ್ಣ ಶೆಟ್ಟಿ ಸೂರತ್, ರಾಮಚಂದ್ರ ವಿ.ಶೆಟ್ಟಿ ಸೂರತ್, ಅಪ್ಪು ಶೆಟ್ಟಿ ಅಹ್ಮದಾಬಾದ್, ಬಾಲಕೃಷ್ಣ ಶೆಟ್ಟಿ ಬರೋಡಾ, ರವಿನಾಥ್ ಶೆಟ್ಟಿ, ಶಂಕರ್ ಶೆಟ್ಟಿ ಅಂಕ್ಲೇಶ್ವರ್, ಮನೋಜ್ ಸಿ.ಪೂಜಾರಿ ಸೂರತ್, ಸುಮನ್‍ಲಾಲ್ ಕೋಡಿಯಾಳ್‍ಬೈಲ್, ಮನೋಜ್ ಮೋಹನ್ ಪೂಜಾರಿ ಅಹ್ಮದಾಬಾದ್, ಶರ್ಮಿಳಾ ಎಂ.ಜೈನ್ ಬರೋಡಾ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಘಟಕದ ಅಹ್ಮದಾಬಾದ್, ಬರೋಡಾ, ಸೂರತ್, ಅಂಕ್ಲೇಶ್ವರ್ ವಿಭಾಗಗಳ ಮುದಾಳುಗಳು ಹಾಗೂ ಕರ್ನಾಟಕ ಸಮಾಜ ಗುಜರಾತ್ ರಿಫೈನರಿ ಬರೋಡಾ ಮತ್ತು ತುಳು ಸಂಘ ಬರೋಡಾ ಇನ್ನಿತರ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್‍ನ ಗುಜರಾತ್ ಘಟಕದ ಅಧ್ಯಕ್ಷ ಅಜಿತ್ ಶೆಟ್ಟಿ ಅಂಕ್ಲೇಶ್ವರ್ ತಿಳಿಸಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಪಟ್ಲ ಸತೀಶ್ ಶೆಟ್ಟಿ ಅವರ ಪ್ರಧಾನ ಭಾಗವತಿಕೆಯಲ್ಲಿ ಶ್ರೀನಿವಾಸ ಬಳಮಂಜ, ಪದ್ಮನಾಭ ಉಪಾಧ್ಯ, ಗುರುಪ್ರಸಾದ ಬೊಳ್ಳಿಂಜಡ್ಕ, ಪ್ರಶಾಂತ ವಗೆನಾಡು, ರಾಧಾಕೃಷ್ಣ ನಾವುಡ, ಸೀತಾರಾಮ ಕುಮಾರ ಕಟೀಲು, ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಅಕ್ಷಯ್ ಮಾರ್ನಾಡ್, ಲೋಕೇಶ್ ಮುಚ್ಚೂರು, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ರಕ್ಷಿತ್ ಶೆಟ್ಟಿ ಪಡ್ರೆ, ಮಾಧವ ಕೊಳತ್ತಮಜಲು, ರಾಹುಲ್ ಶೆಟ್ಟಿ ಕುಡ್ಲ, ಮೋಹನ ಬೆಳ್ಳಿಪಾಡಿ ಮತ್ತಿತರ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರು ತಮ್ಮ ಕೂಡುವಿಕೆಯಲ್ಲಿ `ಶನೀಶ್ವರ ಮಹಾತ್ಮೆ' ಯಕ್ಷಗಾನ ಪ್ರದರ್ಶಿಸುವರು. ಈ ಕಾರ್ಯಕ್ರಮದಲ್ಲಿ ಗುಜರಾತ್ ರಾಜ್ಯದಾದ್ಯಂತದ ಎಲ್ಲಾ ತುಳುಕನ್ನಡಿಗ ಬಾಂಧವರು, ಯಕ್ಷಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹರಿಸುವಂತೆ ಟ್ರಸ್ಟ್‍ನ ಗುಜರಾತ್ ಘಟಕದ ಗೌರವ ಪ್ರಧಾನ ಕಾರ್ಯದರ್ಶಿ ವಿಶಾಲ್ ಶಾಂತ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here