Thursday 25th, April 2024
canara news

ಕುಂದಾಪುರ ಕಾಂಗ್ರೇಸ್ : ಸರ್ದಾರ್ ಪಟೇಲ್ ಜನ್ಮದಿನಾಚರಣೆ, ಇಂದಿರಾ ಪುಣ್ಯತಿಥಿ

Published On : 03 Nov 2017   |  Reported By : Bernard D'Costa


‘ಗಾಂಧಿ ಹತ್ಯೆ ಹಿನ್ನೆಲೆಯಲ್ಲಿ ಪಟೇಲರು ಆರೆಸ್ಸೆಸ್‍ನ್ನು ನಿಷೇಧಿಸಿದ್ದರು’

ಉಕ್ಕಿನ ಮನುಷ್ಯ ಎಂದೇ ಖ್ಯಾತಿವೆತ್ತ ಸರ್ದಾರ್ ವಲ್ಲಭಬಾಯಿ ಪಟೇಲರು ಈ ದೇಶದ ಪ್ರಪ್ರಥಮ ಗ್ರಹಸಚಿವರಾಗಿ ಹಾಕಿದ ಅಡಿಗಲ್ಲು ಇಂದು ಈ ದೇಶವನ್ನು ಸದೃಢ ಭಾರತವÀನ್ನಾಗಿಸಿದೆ. 1947ರ ದೇಶ ವಿಭಜನೆಯ ಸಂದರ್ಭದಲ್ಲಿ ಗಾಂಧಿ, ನೆಹರು ಜೊತೆಗೆ ಈ ದೇಶದ ಸಮಸ್ಯೆಗಳಿಗೆ ಹೆಗಲುಕೊಟ್ಟ ಕೀರ್ತಿ ಸರ್ದಾರ್ ಪಟೇಲರದ್ದಾಗಿದೆ. ದೇಶಾದ್ಯಂತ ಸಣ್ಣ ಸಣ್ಣ ರಾಜ್ಯಗಳ ಅರಸರುಗಳ ಮನವೊಲಿಸಿ ಅಖಂಡ ಭಾರತ ನಿರ್ಮಾಣದಲ್ಲಿ ಪಟೇಲರ ಪರಿಶ್ರಮ ಮುಂಚೂಣಿಯದ್ದು. ಮತ್ತು ಇದೇ ದಿನ ಮತ್ತೊರ್ವ ಉಕ್ಕಿನ ಮಹಿಳೆ ಖ್ಯಾತಿಯ ಇಂದಿರಾಗಾಂಧಿಯವರ ಪುಣ್ಯತಿಥಿಯೂ ಆಗಿರುವುದು ಕಾಕತಾಳೀಯ. ಇಂದಿರಾಜಿಯವರ 20 ಅಂಶಗಳ ಕಾರ್ಯಕ್ರಮ ಮತ್ತು ಬ್ಯಾಂಕ್ ರಾಷ್ಟ್ರೀಕರಣದಂತಹ ದಿಟ್ಟ ನಿರ್ಧಾರಗಳು ವಿಶ್ವದ ಮುಂದುವರೆದ ರಾಷ್ಟ್ರಗಳ ಬ್ಯಾಂಕುಗಳೇ ಆರ್ಥಿಕ ಹಿಂಜರಿತದಿಂದಾಗಿ ಮುಚ್ಚಲ್ಪಟ್ಟಾಗಲೂ ಭಾರತದ ಆರ್ಥಿಕ ಸ್ಥಿತಿ ಒಂದಿಂಚೂ ಅತ್ತಿತ್ತಾಗದೆ ದೃಢವಾಗಿ ನಿಲ್ಲಲು ಕಾರಣವಾಯಿತು. ಎಂದು ಕಾಂಗ್ರೇಸ್ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ಮಾಣಿಗೋಪಾಲ ಹೇಳಿದ್ದಾರೆ.
ಅವರು ಇಂದು ಕುಂದಾಪುರ ಬ್ಲಾಕ್ ಕಾಂಗ್ರೇಸ್ ಕಛೇರಿಯಲ್ಲಿ ನಡೆದ ಸರ್ದಾರ್ ಪಟೇಲರ 142ನೇ ಜನ್ಮದಿನಾಚರಣೆ ಮತ್ತು ಇಂದಿರಾಗಾಂಧಿಯವರ 34ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

 

ಆರೆಸ್ಸೆಸ್ ಚಿಂತನೆಗಳಿಂದ ಪ್ರಭಾವಿತನಾಗಿದ್ದ ನಾಥುರಾಮ್ ಘೋಡ್ಸೆ ಮಹಾತ್ಮಾಗಾಂಧಿಯವರನ್ನು ಹತ್ಯೆ ಮಾಡಿದಾಗ ಆರೆಸ್ಸೆಸ್‍ನ್ನು ನಿಷೇಧ ಮಾಡುವ ಮೂಲಕ ಭವಿಷ್ಯದ ಭಾರತದ ಅಪಾಯವನ್ನು ಅಂದೇ ಅರಿತ್ತಿದ್ದ ಸರ್ದಾರ್ ವಲ್ಲಭಬಾಯಿ ಪಟೇಲರ ಚಿಂತನೆಗಳು ಇಂದಿಗೂ ಪ್ರಸ್ತುತ. ಅಂದು ಖಾಲಿಸ್ತಾನ್ ಭಯೋತ್ಪಾದಕರ ಗುಂಡಿಗೆ ಬಲಿಯಾದ ಇಂದಿರಾಜಿಯವರ ತ್ಯಾಗ ಬಲಿದಾನಗಳು ಇಂದಿಗೂ ನಮಗೆ ಸ್ಪೂರ್ತಿಯಾಗಿದೆ. ಎಂದು ನಗರಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ ಹೇಳಿದರು.

ಈ ಸಂದರ್ಭದಲ್ಲಿ ಮೀನುಗಾರರ ಕಾಂಗ್ರೇಸ್ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿ. ಹಿರಿಯಣ್ಣ ಅವರನ್ನು, ಕಾಂಗ್ರೇಸ್ ಹಿಂದುಳಿದ ವರ್ಗದ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಾಣಿಗೋಪಾಲ್ ಅವರನ್ನು, ಕಾಂಗ್ರೇಸ್ ಐಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಚಂದ್ರಶೇಖರ ಶೆಟ್ಟಿ ಅವರನ್ನು, ಕರ್ನಾಟಕ ರಾಜ್ಯ ವಿಶ್ವಕರ್ಮ ನಿಗಮದ ಸದಸ್ಯರಾಗಿ ಆಯ್ಕೆಯಾದ ನಾರಾಯಣ ಆಚಾರ್ ಅವರನ್ನು, ಮೀನುಗಾರರ ಕಾಂಗ್ರೇಸ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಚಂದ್ರಶೇಖರ್ ಖಾರ್ವಿ ಮತ್ತು ಕೋಡಿ ಸಂದೀಪ್ ಪೂಜಾರಿಯವರನ್ನು ಬ್ಲಾಕ್ ಕಾಂಗ್ರೇಸ್ ಪರವಾಗಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿಯವರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೇಸ್ಸಿಗ ಗಡಾಹದ್ ರಾಮಕೃಷ್ಣ ರಾವ್, ನಗರ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ತಾ, ಮಾಜಿ ಪುರಸಭಾಧ್ಯಕ್ಷೆ ದೇವಕಿ ಸಣ್ಣಯ್ಯ, ಜಿಲ್ಲಾ ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ವಕ್ವಾಡಿ ರಮೇಶ್ ಶೆಟ್ಟಿ, ಮಹಿಳಾ ಕಾಂಗ್ರೇಸ್‍ನ ಆಶಾ ಕಾರ್ವಾಲ್ಲೋ, ಶೋಭಾ ಸಚ್ಚಿದಾನಂದ, ಪುರಸಭಾ ಸದಸ್ಯರಾದ ಕೇಶವ ಭಟ್, ಮುಖಂಡರುಗಳಾದ ನಾಗರಾಜ ನಾಯ್ಕ, ದಿನೇಶ್ ಕುಂದಾಪುರ, ವಿಠಲ ಕಾಂಚನ್, ಅಬ್ದುಲ್ಲಾ ಕೋಡಿ, ಮಹಮ್ಮದ್ ಹುಸೇನ್ ಗಂಗೊಳ್ಳಿ, ಚಂದ್ರಕಾಂತ ಖಾರ್ವಿ, ಅರ್ಚಿಬಾಲ್ಡ್ ಕ್ವಾಡ್ರರ್ಸ್, ಶಶಿಕಾಂತ ಕಾಂಚನ್, ಪ್ರಕಾಶ ಕಾರಂತ ಮುಂತಾದವರು ಉಪಸ್ಥಿತರಿದ್ದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here